Advertisement

ವಿಶ್ವಕಪ್‌ ಹಾಕಿ ಕ್ವಾರ್ಟರ್‌ ಫೈನಲ್‌: ಆಸ್ಟ್ರೇಲಿಯ ನೇರ ಪ್ರವೇಶ

11:30 PM Jan 20, 2023 | Team Udayavani |

ರೂರ್ಕೆಲ: ದಕ್ಷಿಣ ಆಫ್ರಿಕಾವನ್ನು 9-2 ಗೋಲುಗಳಿಂದ ಕೆಡವಿದ ಆಸ್ಟ್ರೇಲಿಯ “ಎ’ ವಿಭಾಗದ ಅಗ್ರಸ್ಥಾನಿಯಾಗಿ ವಿಶ್ವಕಪ್‌ ಹಾಕಿ ಕೂಟದ ಕ್ವಾರ್ಟರ್‌ ಫೈನಲ್‌ಗೆ ನೇರ ಪ್ರವೇಶ ಪಡೆದಿದೆ.

Advertisement

ಮಲೇಷ್ಯಾ-ಸ್ಪೇನ್‌ ನಡುವಿನ ಕ್ರಾಸ್‌ ಓವರ್‌ ಪಂದ್ಯದಲ್ಲಿ ಗೆದ್ದ ತಂಡವನ್ನು ಆಸ್ಟ್ರೇಲಿಯ ಎದುರಿಸಲಿದೆ.

ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಆಸ್ಟ್ರೇಲಿಯದ ಸ್ಟಾರ್‌ ಫಾರ್ವರ್ಡ್‌ ಆಟಗಾರ ಬ್ಲೇಕ್‌ ಗೋವರ್ 4 ಗೋಲು ಸಿಡಿಸಿದರು. ಅರ್ಧ ಹಾದಿ ಕ್ರಮಿಸುವ ವೇಳೆ ಆಸೀಸ್‌ 7-1 ಮುನ್ನಡೆಯಲ್ಲಿತ್ತು.

ಆರ್ಜೆಂಟೀನಾ ದ್ವಿತೀಯ
ಆರ್ಜೆಂಟೀನಾ-ಫ್ರಾನ್ಸ್‌ ನಡುವಿನ “ಎ’ ವಿಭಾಗದ ಅಂತಿಮ ಲೀಗ್‌ ಪಂದ್ಯ 5-5 ಗೋಲುಗಳಿಂದ ಡ್ರಾಗೊಂಡಿತು. ಇದರೊಂದಿಗೆ ಆರ್ಜೆಂಟೀನಾ ದ್ವಿತೀಯ ಸ್ಥಾನಿಯಾಯಿತು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next