Advertisement
ಈ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ಕಳಪೆ ಯಾಗಿ ಆಟ ಆರಂಭಿಸಿದ್ದರೂ ಇದೀಗ ಸತತ ಮೂರು ಗೆಲುವಿನೊಂದಿಗೆ ಜಯದ ಹಾದಿಗೆ ಮರಳಿದ್ದು ಎದು ರಾಳಿಗೆ ಎಚ್ಚರಿಕೆಯ ಗಂಟೆ ಬಾರಿಸಿದೆ. ಆತಿಥೇಯ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಆಸ್ಟ್ರೇಲಿಯ ತಂಡವು ಸತತ ಮೂರು ಗೆಲುವಿನೊಂದಿಗೆ ತನ್ನ ಉತ್ಸಾಹವನ್ನು ಹೆಚ್ಚಿಸಿಕೊಂಡಿದೆ. ಅದರಲ್ಲಿಯೂ ನೆದರ್ಲೆಂಡ್ಸ್ ವಿರುದ್ಧ ದಾಖಲೆ 309 ರನ್ನುಗಳ ಅಮೋಘ ಗೆಲುವು ಕೂಡ ಸೇರಿಕೊಂಡಿದೆ.
ಸದ್ಯದ ಸ್ಥಿತಿಯನ್ನು ನೋಡಿದರೆ ನ್ಯೂಜಿಲ್ಯಾಂಡ್ ಕೂಡ ಈ ಕೂಟದ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ. ಆಡಿದ ಐದು ಪಂದ್ಯಗಳಲ್ಲಿ ಅದು ನಾಲ್ಕರಲ್ಲಿ ಜಯ ಸಾಧಿಸಿದ್ದರೆ ಭಾರತ ವಿರುದ್ಧ ಸೋಲನ್ನು ಕಂಡಿತ್ತು. ಆದರೆ ಆಸ್ಟ್ರೇಲಿಯ ವಿರುದ್ಧದ ದ್ವಿಪಕ್ಷೀಯ ಹೋರಾಟದಲ್ಲಿ ನ್ಯೂಜಿಲ್ಯಾಂಡಿನ ಸಾಧನೆ ಉತ್ತಮವಾಗಿಲ್ಲ. ಹೀಗಾಗಿ ಕಮಿನ್ಸ್ ಪಡೆ ಗೆಲ್ಲುವ ಫೇವರಿಟ್ ತಂಡವೆನಿಸಿದೆ.
ವಿಶ್ವಕಪ್ ಕೂಟಗಳಲ್ಲಿ ಉಭಯ ತಂಡಗಳು 11 ಬಾರಿ ಮುಖಾಮುಖೀ ಆಗಿದ್ದು ಎಂಟು ಬಾರಿ ಆಸ್ಟ್ರೇಲಿಯ ಜಯ ಸಾಧಿಸಿದ್ದರೆ ಮೂರು ಬಾರಿ ನ್ಯೂಜಿಲ್ಯಾಂಡ್ ಗೆಲುವಿನ ನಗು ಚೆಲ್ಲಿದೆ. ಇಷ್ಟರವರೆಗಿನ 141 ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯ 95 ಬಾರಿ ಜಯ ಸಾಧಿಸಿದ್ದರೆ ನ್ಯೂಜಿಲ್ಯಾಂಡ್ 39 ಬಾರಿ ಗೆಲುವು ಒಲಿಸಿಕೊಂಡಿದೆ. ಉಭಯ ತಂಡಗಳ ಬಲಾಬಲವನ್ನು ನೋಡಿದರೆ ಆಸ್ಟ್ರೇಲಿಯವೇ ಉತ್ತಮ ತಂಡವೆಂದು ಹೇಳಬಹುದು.
Related Articles
ಆಸ್ಟ್ರೇಲಿಯದ ಬ್ಯಾಟಿಂಗ್ ಬಲಿಷ್ಠವಾಗಿದೆ. ಆರಂಭಿಕ ಡೇವಿಡ್ ವಾರ್ನರ್ ಎರಡು ಶತಕ ಸಹಿತ 332 ರನ್ ಪೇರಿಸಿದ್ದು ಅಗ್ರ ಆಟಗಾರರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅತೀವೇಗದ ಶತಕವೂ ಗಮನಿಸಬೇಕಾದ ವಿಷಯವಾಗಿದೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್ ಅವರು ಸ್ಥಿರ ನಿರ್ವಹಣೆ ನೀಡಬೇಕಾದ ಅಗತ್ಯವಿದ್ದರೆ ಕ್ಯಾಮರೂನ್ ಗ್ರೀನ್ ಇನ್ನಷ್ಟೇ ಸಿಡಿಯಬೇಕಾಗಿದೆ.
Advertisement
ಆಸ್ಟ್ರೇಲಿಯದ ಬೌಲಿಂಗ್ ಪಡೆಯೂ ಉತ್ತಮವಾಗಿದೆ. ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್ ಮತ್ತು ನಾಯಕ ಕಮಿನ್ಸ್ ಉತ್ತಮ ನಿರ್ವಹಣೆ ನೀಡುತ್ತಿದ್ದರೂ ಸ್ಪಿನ್ ದಾಳಿಯಲ್ಲಿ ಆ್ಯಡಂ ಝಂಪ ಅವರ ನಿರ್ವಹಣೆಯಿಂದ ಆಸ್ಟ್ರೇಲಿಯ ಮೇಲುಗೈ ಸಾಧಿಸಲು ಯಶ ಸ್ವಿಯಾಗಿದೆ. ಇದರ ಜತೆ ಟ್ರ್ಯಾವಿಸ್ ಹೆಡ್ ತಂಡಕ್ಕೆ ಮರಳಿರುವುದು ಬೌಲಿಂಗ್ ಪಡೆಯನ್ನು ಇನ್ನಷ್ಟು ಬಲಪಡಿಸಿದೆ.
ನ್ಯೂಜಿಲ್ಯಾಂಡ್ ತಿರುಗೇಟು ಸಾಧ್ಯತೆಗಾಯಗೊಂಡಿರುವ ಕೇನ್ ವಿಲಿ ಯಮ್ಸನ್ ಅವರ ಅನುಪಸ್ಥಿತಿಯಲ್ಲಿ ಟಾಮ್ ಲಾಥಂ ತಂಡವನ್ನು ಮುನ್ನ ಡೆಸಲಿದ್ದು ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ರಯತ್ನಿಸಲಿದೆ. ಭಾರತ ವಿರುದ್ಧ ಸೋತು ಆಘಾತಗೊಂಡಿರುವ ನ್ಯೂಜಿಲ್ಯಾಂಡ್ ಈ ಪಂದ್ಯದಲ್ಲಿ ಗೆದ್ದು ಮುನ್ನಡೆಯಲು ಯೋಚಿಸುತ್ತಿದೆ. ಡೇವನ್ ಕಾನ್ವೇ, ಡ್ಯಾರಿಲ್ ಮಿಚೆಲ್, ರಚಿನ್ ರವೀಂದ್ರ ಅವರಿಂದ ಉತ್ತಮ ಬ್ಯಾಟಿಂಗ್ ನಿರ್ವಹಣೆ ನಿರೀಕ್ಷಿಸಲಾಗಿದೆ. ನ್ಯೂಜಿಲ್ಯಾಂಡಿನ ಬೌಲಿಂಗ್ ಬಲಿಷ್ಠವಾಗಿದೆ. ಸ್ಯಾಂಟ್ನರ್ ಸಹಿತ ವೇಗಿಗಳಾದ ಮ್ಯಾಟ್ ಹೆನ್ರಿ ಮತ್ತು ಲೂಕಿ ಫೆರ್ಗ್ಯುಸನ್ ಮತ್ತು ಟ್ರೆಂಟ್ ಬೌಲ್ಟ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದೊಂದು ಗರಿಷ್ಠ ವಿಕೆಟ್ ಪಡೆದಿರುವ ಆ್ಯಡಂ ಝಂಪ ಮತ್ತು ಸ್ಯಾಂಟ್ನರ್ ಅವರ ನಡುವಣ ಹೋರಾಟವೆಂದು ಬಣ್ಣಿಸಲಾಗಿದೆ.