ಸಿಡ್ನಿ: ಬಾರ್ಡರ್- ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟ ಮುಗಿದಿದ್ದು, ಪಂದ್ಯದ ಮೇಲೆ ಆಸ್ಟ್ರೇಲಿಯಾ ಹಿಡಿತ ಸಾಧಿಸಿದೆ. ಕೊನೆಯ ದಿನದಾಟದಲ್ಲಿ ಭಾರತ ಇನ್ನೂ 309 ರನ್ ಗಳಿಸಬೇಕಾಗಿದ್ದು, ಸೋಲಿನ ಭೀತಿ ಎದುರಾಗಿದೆ.
ದ್ವಿತೀಯ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ ಎರಡು ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ. ರೋಹಿತ್ ಶರ್ಮಾ 52 ರನ್ ಮತ್ತು ಶುಭ್ಮನ್ ಗಿಲ್ 31 ರನ್ ಗಳಿಸಿ ಔಟಾಗಿದ್ದಾರೆ. ಪೂಜಾರ 9 ರನ್, ರಹಾನೆ 4 ರನ್ ಗಳಿಸಿ ಆಡುತ್ತಿದ್ದಾರೆ. ಗೆಲ್ಲಲು 407 ರನ್ ಗುರಿ ಪಡೆದ ಸದ್ಯ 309 ರನ್ ಹಿನ್ನಡೆಯಲ್ಲಿದೆ.
ಇದನ್ನೂ ಓದಿ:‘ರಾಬರ್ಟ್’ ಎಂಟ್ರಿಗೆ ಡೇಟ್ ಫಿಕ್ಸ್
ಇದಕ್ಕೂ ಮೊದಲು ದ್ವಿತೀಯ ಇನ್ನಿಂಗ್ಸ್ ನಲ್ಲಿ ಆಸೀಸ್ ತಂಡ ಆರು ವಿಕೆಟ್ ನಷ್ಟಕ್ಕೆ 312 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್ ಮತ್ತು ಗ್ರೀನ್ ಅರ್ಧಶತಕ ಸಿಡಿಸಿ ಮಿಂಚಿದರು. ಲಬುಶೇನ್ 73 ರನ್ ಗಳಿಸಿದರೆ, ಸ್ಮಿತ್ 81 ರನ್ ಗಳಿಸಿದರು.
ವೇಗವಾಗಿ ಬ್ಯಾಟ್ ಬೀಸಿದ ಗ್ರೀನ್ ನಾಲ್ಕು ಸಿಕ್ಸರ್ ನೆರವಿನಿಂದ 84 ರನ್ ಗಳಿಸಿದರು. ನಾಯಕ ಪೇನ್ ಅಜೇಯ 39 ರನ್ ಗಳಸಿದರು. ಗ್ರೀನ್ ಔಟಾಗುತ್ತಿದ್ದಂತೆ ಆಸೀಸ್ ಡಿಕ್ಲೇರ್ ಮಾಡಿಕೊಂಡಿತು.