Advertisement

Australia;ಇನ್ನು ವಿದ್ಯಾರ್ಥಿ ಶುಲ್ಕ ದುಪ್ಪಟ್ಟು: ಭಾರತೀಯರಿಗೂ ಸಂಕಷ್ಟ

01:48 AM Jul 02, 2024 | Team Udayavani |

ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ ಹೆಚ್ಚುತ್ತಿರುವ ವಲಸಿಗರ ಆಗಮನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಲ್ಲಿನ ಸರಕಾರವು ವಿದ್ಯಾರ್ಥಿ ವೀಸಾ ಶುಲ್ಕವನ್ನು ದುಪ್ಪಟ್ಟು ಗೊಳಿಸಿದೆ. 39,471 ರೂ.ಗಳಿದ್ದ (710 ಎಯುಡಿ- ಆಸ್ಟ್ರೇಲಿಯನ್‌ ಡಾಲರ್‌) ಶುಲ್ಕವನ್ನು 89,123 ರೂ.ಗಳಿಗೆ (1,600 ಎಯುಡಿಗೆ) ಹೆಚ್ಚಿಸಿದೆ. ಜು.1ರಿಂದಲೇ ಈ ಪರಿಷ್ಕೃತ ಶುಲ್ಕ ಜಾರಿಯಾಗಿದೆ.

Advertisement

ಈ ಕ್ರಮವು ಆಸ್ಟ್ರೇಲಿಯಾಕ್ಕೆ ವಿದ್ಯಾಭ್ಯಾಸಕ್ಕೆಂದು ತೆರಳುವ ಭಾರತೀಯ ವಿದ್ಯಾರ್ಥಿಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಅಲ್ಲದೇ ಈಗಾಗಲೇ ತಾತ್ಕಾಲಿಕ ಪದವಿ ವೀಸಾ, ಸಂದರ್ಶಕ ವೀಸಾ ಹಾಗೂ ಕಡಲ ಸಿಬಂದಿ ವೀಸಾಗಳನ್ನು ಪಡೆದು ಆಸ್ಟ್ರೇಲಿಯಾದಲ್ಲಿರುವವರು ಅಲ್ಲಿ ಇದ್ದುಕೊಂಡೇ ವಿದ್ಯಾರ್ಥಿ ವೀಸಾಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ ಎಂಬ ನೂತನ ನಿಯಮವನ್ನೂ ಸರಕಾರ ಜಾರಿಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next