ಹೊಸದಿಲ್ಲಿ: ಬಾರ್ಡರ್-ಗವಾಸ್ಕರ್ ಟ್ರೋಫಿ 2023 ರ ಎರಡನೇ ಟೆಸ್ಟ್‌ಗೆ ಮುಂಚಿತವಾಗಿ ಎಡಗೈ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಆಸ್ಟ್ರೇಲಿಯಾ ತಂಡ ಸೇರಿದ್ದಾರೆ.
ತನ್ನ ಮಗುವಿನ ಜನನದ ನಿರೀಕ್ಷೆಯಲ್ಲಿರುವ ಲೆಗ್‌ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ತಂಡವನ್ನು ತೊರೆದು ಆಸೀಸ್ ಗೆ ಹೊರಟಿದ್ದು, ಅವರ ಬದಲಿಯಾಗಿ ಸ್ಪಿನ್ನರ್ ಕುಹ್ನೆಮನ್ ತಂಡ ಸೇರಿದ್ದಾರೆ.
ಇದನ್ನೂ ಓದಿ:ಬಿಜೆಪಿಯ ರಾಜಸ್ಥಾನ ಚುನಾವಣ ಕಾರ್ಯತಂತ್ರ: ಕಟಾರಿಯಾರಿಗೆ ರಾಜ್ಯಪಾಲ ಹುದ್ದೆ
ಮೊದಲ ಟೆಸ್ಟ್‌ನಲ್ಲಿ ನಾಗ್ಪುರದಲ್ಲಿ ಆಡಿದ ಸ್ಪಿನ್ ಸಂಯೋಜನೆಯಲ್ಲಿ ಬದಲಾವಣೆ ಮಾಡಬಯಸಿದರೆ ಫೆಬ್ರವರಿ 17 ರಂದು ಪ್ರಾರಂಭವಾಗುವ ದೆಹಲಿ ಟೆಸ್ಟ್‌ನಲ್ಲಿ ಕುಹ್ನೆಮನ್ ಗೆ ಅವಕಾಶ ಸಿಗಬಹುದು.
ಆಸ್ಟ್ರೇಲಿಯ ಇಬ್ಬರು ಆಫ್‌ಸ್ಪಿನ್ನರ್ ಗಳೊಂದಿಗೆ ನಾಗ್ಪುರದಲ್ಲಿ ಆಡಿತ್ತು. ಚೊಚ್ಚಲ ಪಂದ್ಯವಾಡಿದ ಆಟಗಾರ ಟಾಡ್ ಮರ್ಫಿ ಏಳು ವಿಕೆಟ್ ಗಳನ್ನು ಪಡೆದಿದ್ದರು.
ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಇನ್ನಿಂಗ್ಸ್ ಮತ್ತು 132 ರನ್ ಅಂತರದಿಂದ ಗೆಲುವು ಸಾಧಿಸಿತ್ತು.