Advertisement

ಇಂಗ್ಲೆಂಡ್ ಗೆ ಸೋಲಿನ ಸರಣಿ: 4-0 ಯಿಂದ ಆ್ಯಶಸ್‌ ಸರಣಿ ಗೆದ್ದ ಆಸ್ಟ್ರೇಲಿಯಾ

06:58 PM Jan 16, 2022 | Team Udayavani |

 

Advertisement

ಹೋಬರ್ಟ್: ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯವನ್ನು ಎರಡು ದಿನಗಳು ಬಾಕಿ ಇರುವಂತೆಯೇ 146 ರನ್‌ಗಳಿಂದ ಗೆದ್ದುಕೊಂಡಿರುವ ಆಸ್ಟ್ರೇಲಿಯಾ ಭಾನುವಾರ 4-0 ಆನಂತರದಿಂದ ಆ್ಯಶಸ್‌ ಸರಣಿಯನ್ನು ಗೆದ್ದು ಪಾರುಪತ್ಯ ಮೆರೆದಿದೆ.

ಗೆಲುವಿಗೆ 271 ರನ್‌ಗಳ ಗುರಿಯನ್ನು ಹೊಂದಿದ್ದ ಇಂಗ್ಲೆಂಡ್, ಹೋಬರ್ಟ್‌ನಲ್ಲಿ ಮೂರನೇ ದಿನದ ಕೊನೆಯ ಆಟದಲ್ಲಿ 124 ರನ್‌ಗಳಿಗೆ ಆಟ ಮುಗಿಸಿತು.ಝಾಕ್ ಕ್ರಾಲಿ (36) ಮತ್ತು ರೋರಿ ಬರ್ನ್ಸ್ (26) 68 ರನ್‌ಗಳ ಆರಂಭಿಕ ಜೊತೆಯಾಟದ ನಂತರ 56 ರನ್‌ಗಳಿಗೆ 10 ವಿಕೆಟ್‌ಗಳನ್ನು ಕಳೆದುಕೊಂಡಿತು.

ವೇಗಿಗಳಾದ ಸ್ಕಾಟ್ ಬೋಲ್ಯಾಂಡ್ (3/18) ಮತ್ತು ಕ್ಯಾಮರೂನ್ ಗ್ರೀನ್ (3/21) ತಮ್ಮ ಮೊದಲ ಆಶಸ್ ಸರಣಿಯಲ್ಲಿಆರು ವಿಕೆಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಸಾಧನೆ ತೋರಿದರು.

ಇದಕ್ಕೂ ಮೊದಲು, ಒಟ್ಟಾರೆ 270 ರನ್‌ಗಳ ಮುನ್ನಡೆಯಿಂದ ಊಟದ ವಿರಾಮದ ನಂತರ ಆಸ್ಟ್ರೇಲಿಯಾ 155 ರನ್‌ಗಳಿಗೆ ಆಲೌಟ್ ಆಗಿತ್ತು. ವೇಗಿ ಮಾರ್ಕ್ ವುಡ್ ಆಸ್ಟ್ರೇಲಿಯನ್ನರ ವಿರುದ್ಧ ಶಾರ್ಟ್-ಬಾಲ್ ತಂತ್ರಗಳನ್ನು ಬಳಸಿ (6/ 37) ಗಮನ ಸೆಳೆದರು. ಅಲೆಕ್ಸ್ ಕ್ಯಾರಿ 49 ರನ್ ಗಳಿಸಿ ಆಸ್ಟ್ರೇಲಿಯಾದ ಪರ ಗರಿಷ್ಠ ಸ್ಕೋರ್ ಮಾಡಿದರು.

Advertisement

ಮೊದಲ ಮೂರು ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದ ಆಸ್ಟ್ರೇಲಿಯಾ ಅದಾಗಲೇ ಸರಣಿ ಗೆದ್ದಿತ್ತು. ಸಿಡ್ನಿಯಲ್ಲಿ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಪ್ರವಾಸಿ ಇಂಗ್ಲೆಂಡ್ ,ಅಂತಿಮವಾಗಿ ಗರು 5-0 ಕ್ಲೀನ್ ಸ್ವೀಪ್ ಅನ್ನು ತಪ್ಪಿಸಿಕೊಂಡಿದೆ.

ಸಂಕ್ಷಿಪ್ತ ಸ್ಕೋರ್ ಗಳು

ಆಸ್ಟ್ರೇಲಿಯಾ 303 & 155

ಇಂಗ್ಲೆಂಡ್ 188 & 124

ಆಸೀಸ್ 146 ರನ್ ಗಳ ಗೆಲುವು

Advertisement

Udayavani is now on Telegram. Click here to join our channel and stay updated with the latest news.

Next