Advertisement

ಮೊದಲ ಟಿ20 ಪಂದ್ಯ: ವೆಸ್ಟ್‌ ಇಂಡೀಸ್‌ಗೆ ಸೋಲುಣಿಸಿದ ಆಸ್ಟ್ರೇಲಿಯ

07:28 PM Oct 05, 2022 | Team Udayavani |

ಕ್ವೀನ್ಸ್‌ಲ್ಯಾಂಡ್‌: ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದು ಅರ್ಧ ಶತಕ ಹೊಡೆದ ನಾಯಕ ಆರನ್‌ ಫಿಂಚ್‌ ಮತ್ತು ಕೊನೆಯ ಓವರ್‌ನಲ್ಲಿ ಸಿಡಿದು ನಿಂತ ಮ್ಯಾಥ್ಯೂ ವೇಡ್‌ ಅವರ ಸಾಹಸದಿಂದ ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು.

Advertisement

ವೆಸ್ಟ್‌ ಇಂಡೀಸ್‌ ಗಳಿಸಿದ್ದು 9 ವಿಕೆಟಿಗೆ 145 ರನ್‌. ಆಸ್ಟ್ರೇಲಿಯ ಅಗ್ರ ಕ್ರಮಾಂಕದ ಕುಸಿತಕ್ಕೊಳಗಾಗಿ 58ಕ್ಕೆ 5 ವಿಕೆಟ್‌ ಕಳೆದುಕೊಂಡಿತು. ಅಂತಿಮವಾಗಿ 19.5 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 146 ರನ್‌ ಬಾರಿಸಿ ಗೆದ್ದು ಬಂದಿತು.

ಅಂತಿಮ ಓವರ್‌, 11 ರನ್‌
ಶೆಲ್ಡನ್‌ ಕಾಟ್ರೆಲ್‌ ಪಾಲಾದ ಅಂತಿಮ ಓವರ್‌ನಲ್ಲಿ ಆಸೀಸ್‌ ಜಯಕ್ಕೆ 11 ರನ್‌ ಅಗತ್ಯವಿತ್ತು. ವೇಡ್‌ ಮೊದಲ ಎಸೆತವನ್ನೇ ಬೌಂಡರಿಗೆ ಬಡಿದಟ್ಟಿ ಲೆಕ್ಕಾಚಾರವನ್ನು ಸರಳಗೊಳಿಸಿದರು. ದ್ವಿತೀಯ ಎಸೆತದಲ್ಲಿ ಜೀವದಾನದ ಜತೆಗೆ 2 ರನ್‌ ಕೂಡ ಸಿಕ್ಕಿತು. 3ನೇ ಎಸೆತದಲ್ಲಿ ಸಿಂಗಲ್‌ ಬಂತು. ಬಳಿಕ ಮಿಚೆಲ್‌ ಸ್ಟಾರ್ಕ್‌ ಸರದಿ. ಅವರು 4ನೇ ಹಾಗೂ 5ನೇ ಎಸೆತದಲ್ಲಿ ಅವಳಿ ರನ್‌ ತೆಗೆದು ಆಸ್ಟ್ರೇಲಿಯದ ಗೆಲುವು ಸಾರಿದರು.

ಇದಕ್ಕೂ ಮುನ್ನ ಆರನ್‌ ಫಿಂಚ್‌ ಕಪ್ತಾನನ ಆಟವಾಡಿ 58 ರನ್‌ ಬಾರಿಸಿದರು (53 ಎಸೆತ, 6 ಬೌಂಡರಿ). ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಟಿಮ್‌ ಡೇವಿಡ್‌ ಸೊನ್ನೆ ಸುತ್ತಿ ಹೋದಾಗ ಪಂದ್ಯ ವಿಂಡೀಸ್‌ ಕೈಯಲ್ಲಿತ್ತು. ಆದರೆ ಫಿಂಚ್‌-ವೇಡ್‌ 6ನೇ ವಿಕೆಟಿಗೆ 69 ರನ್‌ ಒಟ್ಟುಗೂಡಿಸಿ ಹೋರಾಟ ಜಾರಿಯಲ್ಲಿರಿಸಿದರು. ಆಸೀಸ್‌ ಆರಂಭಿಕರಾದ ವಾರ್ನರ್‌, ಗ್ರೀನ್‌ ಗಳಿಕೆ ತಲಾ 14 ರನ್‌. ಮಾರ್ಷ್‌ 3 ರನ್ನಿಗೆ ಉದುರಿದರು.

ವೆಸ್ಟ್‌ ಇಂಡೀಸ್‌ ಸರದಿಯಲ್ಲಿ ಆರಂಭಕಾರ ಕೈಲ್‌ ಮೇಯರ್ 39, ಒಡಿಯನ್‌ ಸ್ಮಿತ್‌ 27 ರನ್‌ ಹೊಡೆದರು. ತ್ರಿವಳಿ ವೇಗಿಗಳಾದ ಸ್ಟಾರ್ಕ್‌, ಹೇಝಲ್‌ವುಡ್‌ ಮತ್ತು ಕಮಿನ್ಸ್‌ 7 ವಿಕೆಟ್‌ ಹಂಚಿಕೊಂಡರು.

Advertisement

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-9 ವಿಕೆಟಿಗೆ 145 (ಮೇಯರ್ 39, ಸ್ಮಿತ್‌ 27, ರೀಫ‌ರ್‌ 19, ಹೇಝಲ್‌ವುಡ್‌ 35ಕ್ಕೆ 3, ಕಮಿನ್ಸ್‌ 22ಕ್ಕೆ 2, ಸ್ಟಾರ್ಕ್‌ 40ಕ್ಕೆ 2). ಆಸ್ಟ್ರೇಲಿಯ-19.5 ಓವರ್‌ಗಳಲ್ಲಿ 7 ವಿಕೆಟಿಗೆ 146 (ಫಿಂಚ್‌ 58, ವೇಡ್‌ ಔಟಾಗದೆ 39, ಜೋಸೆಫ್ 17ಕ್ಕೆ 2, ಕಾಟ್ರೆಲ್‌ 49ಕ್ಕೆ 2).

ಪಂದ್ಯಶ್ರೇಷ್ಠ: ಆರನ್‌ ಫಿಂಚ್‌.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next