Advertisement

ಟೆಸ್ಟ್‌ ತಂಡಕ್ಕೆ ರೋಹಿತ್‌ ಸೇರ್ಪಡೆ: ಮೊದಲ ಟೆಸ್ಟ್ ನಂತರ ಕ್ಯಾಪ್ಟನ್ ಕೊಹ್ಲಿ ಭಾರತಕ್ಕೆ!

10:21 AM Nov 10, 2020 | keerthan |

ನವದೆಹಲಿ: ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿರುವ ‌ಭಾರತ ತಂಡಗಳನ್ನು ಪರಿಷ್ಕರಿಸಲಾಗಿದೆ. ಐಪಿಎಲ್‌ ವೇಳೆ ಗಾಯಾಳಾಗಿ ಮೂರೂ ತಂಡಗಳಿಂದ ಹೊರಗುಳಿದಿದ್ದ ರೋಹಿತ್‌ ಶರ್ಮ ಅವರನ್ನು ಟೆಸ್ಟ್‌ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ ಫಿಟ್‌ನೆಸ್‌ ಸಮಸ್ಯೆಯಿಂದಾಗಿ, ಮೊದಲು ನಡೆಯುವ ಏಕದಿನ ಹಾಗೂ ಟಿ20 ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡಲಾಗಿದೆ.

Advertisement

ಇದೇ ವೇಳೆ ತಂದೆಯಾಗಲಿರುವ ವಿರಾಟ್‌ ಕೊಹ್ಲಿ ಮೊದಲ ಟೆಸ್ಟ್‌ ಪಂದ್ಯದ ಬಳಿಕ ಭಾರತಕ್ಕೆ ವಾಪಸಾಗಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದರು.

ಗಾಯಾಳಾಗಿರುವ ಅನುಭವಿ ವೇಗಿ ಇಶಾಂತ್‌ ಶರ್ಮ ಚೇತರಿಸಿಕೊಂಡರೆ ಅವರನ್ನು ಟೆಸ್ಟ್‌ ತಂಡಕ್ಕೆ ಸೇರಿಸಿಕೊಳ್ಳಲಾಗುವುದು ಎಂದೂ ಶಾ ತಿಳಿಸಿದರು.

ಭುಜದ ನೋವಿಗೆ ಸಿಲುಕಿರುವ ವಿಶಿಷ್ಟ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಅವರನ್ನು ಟಿ20 ತಂಡದಿಂದ ಕೈಬಿಡಲಾಗಿದೆ. ಈ ಸ್ಥಾನ ಎಡಗೈ ವೇಗಿ ಟಿ.ನಟರಾಜನ್‌ ಪಾಲಾಗಿದೆ. ಗಾಯಾಳು ಕೀಪರ್‌ ಸಹಾ ಬಗ್ಗೆ ಕಾದು ನೋಡಲು ನಿರ್ಧರಿಸಲಾಗಿದೆ. ಹೆಚ್ಚುವರಿ ಕೀಪರ್‌ ಆಗಿ ಸಂಜು ಸ್ಯಾಮ್ಸನ್‌ ಏಕದಿನ ತಂಡವನ್ನು ಸೇರಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next