Advertisement

ಔರಂಗಜೇಬ್ ಸಮಾಧಿಗೆ 5 ದಿನಗಳ ಕಾಲ ಪ್ರವೇಶವಿಲ್ಲ: ಅಜಿತ್ ಪವಾರ್

12:21 PM May 19, 2022 | Team Udayavani |

ಮುಂಬಯಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಮೊಘಲ್ ದೊರೆ ಔರಂಗಜೇಬ್ ಸಮಾಧಿಯನ್ನು 5 ದಿನಗಳ ಕಾಲ ಮುಚ್ಚಲಾಗುವುದು ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಗುರುವಾರ ಹೇಳಿದ್ದಾರೆ.

Advertisement

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರ ಕಿರಿಯ ಸಹೋದರ ಅಕ್ಬರುದ್ದೀನ್ ಓವೈಸಿ ಇತ್ತೀಚೆಗೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಸಮಾಧಿಗೆ ಭೇಟಿ ನೀಡಿದ ನಂತರ ದೊಡ್ಡ ವಿವಾದ ಭುಗಿಲೆದ್ದಿದೆ. ಇದರ ನಂತರ, ಮಾಜಿ ಮುಖ್ಯಮಂತ್ರಿ ಮತ್ತು ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಓವೈಸಿಯನ್ನು ಗುರಿಯಾಗಿಸಿಕೊಂಡು ಟೀಕಾ ಪ್ರಹಾರ ನಡೆಸಿದ್ದರು. ಓವೈಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂ ಉದ್ಧವ್ ಠಾಕ್ರೆ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದರು.

ಇದನ್ನೂ ಓದಿ : ಜ್ಞಾನವಾಪಿ ಮಸೀದಿ ವಿವಾದ: ಮೇ 20ರವರೆಗೆ ವಿಚಾರಣೆ ಬೇಡ- ವಾರಾಣಸಿ ಕೋರ್ಟ್ ಗೆ ಸುಪ್ರೀಂ

ಎರಡು ದಿನಗಳ ಹಿಂದೆಯಷ್ಟೇ ಎಂಎನ್‌ಎಸ್ ವಕ್ತಾರ ಗಜಾನನ ಕಾಳೆ ಅವರು ಸಮಾಧಿಯ ಅಸ್ತಿತ್ವವನ್ನು ಪ್ರಶ್ನಿಸಿ ಗೋರಿ ಕೆಡವಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಅವರ ಬೆದರಿಕೆಯನ್ನು ಅನುಸರಿಸಿ, ಸ್ಥಳೀಯ ಮಸೀದಿ ಸಮಿತಿಯು ಪ್ರದೇಶವನ್ನು ಲಾಕ್ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಅನ್ನು ಸಂಪರ್ಕಿಸಿತ್ತು. ಆ ಹಿನ್ನೆಲೆಯಲ್ಲಿ ಎಎಸ್‌ಐ ಅಧಿಕಾರಿಗಳು ಐದು ದಿನಗಳ ಕಾಲ ಸ್ಥಳವನ್ನು ಮುಚ್ಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next