ಮುಂಬೈ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಜರಂಗಬಲಿಯ ಪ್ರಯೋಗ ಬಿಜೆಪಿಗೆ ಕೈಹಿಡಿಯಲಿಲ್ಲ. ಹಾಗಾಗಿ ಮಹಾರಾಷ್ಟ್ರ ರಾಜಕೀಯದಲ್ಲಿ ಔರೇಂಗಜೇಬ್ ಅನ್ನು ಹೊಸ ಸಾಧನವಾಗಿ ಬಳಸುತ್ತಿದೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ಮುಖವಾಣಿ “ಸಾಮ್ನಾ”ದ ಸಂಪಾದಕೀಯದಲ್ಲಿ ಬರೆಯಲಾಗಿದೆ. “ಕಳೆದ ತಿಂಗಳು ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹನುಮಂತನ ಗದೆಯಿಂದ ಏಟು ಬಿದ್ದಿದೆ. ಈಗ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಔರೇಂಗಜೇಬ್ ಬೇಕಾಗಿದ್ದಾನೆ.
ಆದರೆ ಇದು ಹಿಂದುತ್ವವನ್ನು ವಿನಾಶದ ಹಾದಿಗೆ ಕೊಂಡೊಯ್ಯುವುದು’ ಎಂದು ಹೇಳಿದೆ. “300 ವರ್ಷಗಳ ಹಿಂದೆಯೇ ಔರೇಂಗಜೇಬ್ ಮೃತಪಟ್ಟಿದ್ದಾನೆ. ಆದರೆ ರಾಜಕೀಯ ಪಕ್ಷಗಳು ಪುನಃ ಆತನ ಜೀವನವನ್ನು ಜನರ ಸ್ಮರಣೆಗೆ ತರಲು ಪ್ರಯತ್ನಿಸುತ್ತಿವೆ’ ಎಂದು ದೂರಿದೆ. ಟಿಪ್ಪು ಸುಲ್ತಾನ್ ಫೋಟೋನೊಂದಿಗೆ ವಿವಾದಿತ ಆಡಿಯೋ ಕ್ಲಿಪ್ ಇರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಖಂಡಿಸಿ, ಕೊಲ್ಹಾಪುರದಲ್ಲಿ ಬುಧವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.
ಇನ್ನೊಂದೆಡೆ, ಅಹ್ಮಮದ್ನಗರ ಜಿಲ್ಲೆಯ ಸಂಗಮ್ನೆàರ್ನಲ್ಲಿ ನಡೆದ ಮೆರವಣಿಗೆಯಲ್ಲಿ ಔರೇಂಗಜೇಬ್ ಭಾವಚಿತ್ರ ಪ್ರದರ್ಶಿಸಿದ ಸಂಬಂಧ ಕೆಲವರ ವಿರುದ್ಧ ಪ್ರಕರಣ ದಾಖಲಾಗಿದೆ.