Advertisement

ಈ ಮಕ್ಕಳಿಗೆ ನೆಲವೇ ಹಾಸಿಗೆ

11:42 AM Sep 26, 2019 | Naveen |

ರವೀಂದ್ರ ಮುಕ್ತೇದಾರ
ಔರಾದ: ವಸತಿ ನಿಲಯ ಆರಂಭವಾಗಿ ವರ್ಷಗಳು ಕಳೆದರೂ ರಾತ್ರಿ ಮಲಗಲು ಬೆಡ್‌ ಹಾಗೂ ಕಾಟಾ ಇಲ್ಲದೆ ವಿದ್ಯಾರ್ಥಿನಿಯರಿಗೆ ನೆಲವೇ ಅನಿವಾರ್ಯವಾಗಿದೆ. ಇದು ತಾಲೂಕಿನ ವನಮಾರಪಳ್ಳಿ(ಮರಪಳ್ಳಿ) ಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಹಾಗೂ ಡಾ| ಬಿ.ಆರ್‌. ಅಂಬೇಡ್ಕರ ವಸತಿ ನಿಲಯದ 375 ವಿದ್ಯಾರ್ಥಿನಿಯರ ಹಲವು ವರ್ಷದ ಸಮಸ್ಯೆ.

Advertisement

ತಾಲೂಕಿನ ವನಮಾರಪಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಯಲ್ಲಿ 253 ವಿದ್ಯಾರ್ಥಿನಿಯರು ಹಾಗೂ ದಾಬಕಾ ಅಂಬೇಡ್ಕರ್‌ ವಸತಿ ನಿಲಯದಲ್ಲಿನ 122 ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. ತಾಲೂಕಿನ ದಾಬಕಾ ಗ್ರಾಮದಲ್ಲಿ ವಸತಿ ನಿಲಯ ನಡೆಸಲು ಸೂಕ್ತ ಸ್ಥಳವಿಲ್ಲ ಎಂದು ಅಧಿಕಾರಿಗಳು ಮರಪಳ್ಳಿ ವಸತಿ ಶಾಲೆಗೆ ಸ್ಥಳಾಂತರ ಮಾಡಿದ್ದಾರೆ. ಹಿಗಾಗಿಯೇ ಎರಡು ವಸತಿ ನಿಲಯಗಳು ಒಂದೇ ಸೂರಿನಡಿ ನಡೆಯುತ್ತಿವೆ.

ಕಿತ್ತೂರು ರಾಣಿ ಚನ್ನಮ್ಮ 2009-10ನೇ ಸಾಲಿನಲ್ಲಿ ಆರಂಭವಾಗಿದೆ. ಈ ಹಿಂದೆ ತಾಲೂಕು ಕೇಂದ್ರ ಸ್ಥಾನದಲ್ಲಿ ಖಾಸಗಿ ಕಟ್ಟಡದಲ್ಲಿ ವಸತಿ ನಿಲಯ ನಡೆಯುತ್ತಿತ್ತು. ಎರಡು ವರ್ಷಗಳ ಹಿಂದೆ ಮರಪಳ್ಳಿಯಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅದರಂತೆ ಅಂಬೇಡ್ಕರ್‌ ವಸತಿ ನಿಲಯ 2016-17ನೇ ಸಾಲಿನಲ್ಲಿ ಆಂಭವಾಗಿದೆ. ಎರಡು ವಸತಿ ನಿಲಯದಲ್ಲಿ 375 ವಿದ್ಯಾರ್ಥಿನಿಯರು ಒಂದೇ ಕಟ್ಟಡದ ಪ್ರತಿಯೊಂದು ಕೋಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ನೆಲದ ಮೇಲೆ ಮಲಗುತ್ತಿದ್ದಾರೆ. ವನಮಾರಪಳ್ಳಿ ವಸತಿ ನಿಲಯಕ್ಕೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಪಂ ಸಿಇಒ, ಜಿಪಂ ಅಧ್ಯಕ್ಷರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ನಿಲಯಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ.

ಆದರೂ ಇಲ್ಲಿನ ವಿದ್ಯಾರ್ಥಿನಿಯರಿಗೆ ಸರ್ಕಾರದಿಂದ ಸಿಗಬೇಕಾದ ಸೌಕರ್ಯಗಳು ಇಂದಿಗೂ ಸಿಕ್ಕಿಲ್ಲ. ಆಟದ ಮೈದಾನ ಸೇರಿದಂತೆ ಇನ್ನಿತರ ಕ್ರೀಡಾ ಸಾಮಗ್ರಿಗಳು ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next