Advertisement

ಬದುಕು: ಆಂಟಿ ಎನ್ನುವುದು ಕೆಟ್ಟ ಪದ ಏಕಾಯ್ತು?

01:30 AM Sep 20, 2020 | mahesh |

“ಆಂಟಿ’ ಎಂದು ಕರೆಸಿಕೊಳ್ಳಲು ನನಗೇನೂ ತೊಂದರೆ ಇಲ್ಲ. ಸತ್ಯವೇನೆಂದರೆ ನನ್ನನ್ನು ಹಾಗೆಯೇ ಕರೆಯಿರಿ ಅಂತ ಮಕ್ಕಳಿಗೆ ಹೇಳುತ್ತೇನೆ. ನನ್ನ ಮಕ್ಕಳ ಸ್ನೇಹಿತರು ಈಗ 20-25ರ ವಯೋಮಾನದಲ್ಲಿದ್ದಾರೆ, ಅವರೆಲ್ಲ ನನ್ನನ್ನು ಆಂಟಿ ಎಂದೇ ಕರೆಯುತ್ತಾರೆ. ಹಾಗೆ ಕರೆಸಿಕೊಳ್ಳುವುದು ಗೌರವದ ಸಂಕೇತವಾಗಿಯೇ ಕಾಣುತ್ತದೆ.

Advertisement

ಇತ್ತೀಚೆಗೆ ಜಾಹೀರಾತೊಂದರಲ್ಲಿ ನಟಿಸುವ ಅವಕಾಶ ಎದುರಾಗಿತ್ತು. ನನ್ನ ಬಳಿ ಬಂದ ಜಾಹೀರಾತು ನಿರ್ಮಾಣ ತಂಡ, “”ಮೇಡಂ, ನೀವು ಇದರಲ್ಲಿ 23 ವರ್ಷದ ಯುವತಿಯೊಬ್ಬಳ ತಾಯಿಯ ಪಾತ್ರ ಮಾಡಬೇಕಾಗುತ್ತೆ. ನಿಮಗೆ ಏನೂ ಅಭ್ಯಂತರ ಇಲ್ಲವಲ್ಲಾ..?” ಅಂತ ಪ್ರಶ್ನಿಸಿದರು. ಅವರ ಮಾತು ಕೇಳಿ ನನಗೆ ಗೊಂದಲವಾಗಿದ್ದಂತೂ ನಿಜ. ಇದರಲ್ಲಿ ಅಭ್ಯಂತರ ಆಗುವಂಥದ್ದು ಏನಿದೆ? ಈ ರೀತಿ ಆಗಿದ್ದು ಮೊದಲ ಬಾರಿಯೇನೂ ಅಲ್ಲ. ಹಿಂದೆಯೂ ಜಾಹೀರಾತುಗಳಲ್ಲಿ ತಾಯಿಯ ಪಾತ್ರ ನಿರ್ವಹಿಸಬೇಕೆಂದು ಅನೇಕರು ನನ್ನನ್ನು ಅಪ್ರೋಚ್‌ ಮಾಡಿದ್ದಾರೆ. ಹಾಗೆ ಕೇಳುವಾಗೆಲ್ಲ ಅವರು ತುಂಬಾ ಹಿಂಜರಿಕೆಯಿಂದಲೋ ಅಥವಾ ಕ್ಷಮೆಯಾಚಿಸುವ ಧ್ವನಿಯಲ್ಲೋ ಕೇಳುತ್ತಾರೆ-“”ದಯವಿಟ್ಟೂ ತಪ್ಪು ಭಾವಿಸಬೇಡಿ ಮೇಡಂ, ಈ ಪಾತ್ರ ನಿರ್ವಹಿಸಲು ನಿಮಗೆ…. ಓಕೆ ಅಲ್ವಾ?”

ಇತ್ತೀಚೆಗೆ ಕಾಸ್ಮೋಪಾಲಿಟನ್‌ ನಿಯತಕಾಲಿಕೆಗೆ ಈ ವಿಚಾರವಾಗಿಯೇ ಒಂದು ಲೇಖನ ಬರೆದಿದ್ದೆ. ಅದೇಕೆ ನಾವು ಒಂದು ಸಮಾಜವಾಗಿ ವಯಸ್ಸಿನ ಬಗ್ಗೆ ಇಷ್ಟೊಂದು ಭ್ರಮೆಯನ್ನು ಬೆಳೆಸಿಕೊಂಡಿದ್ದೇವೆ? ವಯಸ್ಸು ಮಾಗುವ ಪ್ರಕ್ರಿಯೆಯನ್ನು ಕೆಟ್ಟದು ಎಂಬಂತೆ ನೋಡುತ್ತೇವೆ? ವಯಸ್ಸಾದವರಿಗೆ ತಮಗೆ ವಯಸ್ಸಾಯಿತು ಎನ್ನುವುದೇ ಮುಜುರಗದ ವಿಷಯ ಆಗುವಂತೆ ಮಾಡಿದ್ದೇವೆ? ಈ ಎಲ್ಲ ಕಾರಣಕ್ಕಾಗಿಯೇ ಇಂದು “”ವಯಸ್ಸಿಗೆ ತಕ್ಕಂತೆ ಚೆನ್ನಾಗಿ ಕಾಣುತ್ತಿರಾ..” ಎನ್ನುವ ಮಾತಿಗಿಂತಲೂ “”ನೀವು ಚೆನ್ನಾಗಿ ಮೆಂಟೇನ್‌ ಮಾಡಿದ್ದೀರಾ” ಎನ್ನುವ ಮಾತಿಗೆ ಹೆಚ್ಚು ಬೆಲೆ ಬಂದುಬಿಟ್ಟಿದೆ.

ಈಗ ನನಗೆ 50 ವರ್ಷ. ಬದುಕಿನಲ್ಲಿ ಅರ್ಧದಷ್ಟು ಹಾದಿಯನ್ನು ಕ್ರಮಿಸಿದ್ದೇನೆ. ಹೌದು, ಆರೋಗ್ಯವಂತವಾಗಿರಲು ನಾನು ತುಂಬಾ ಶ್ರಮಪಟ್ಟಿದ್ದೇನೆ, ನಿಯಮಿತವಾಗಿ ವ್ಯಾಯಾಮ ಮಾಡುತ್ತೇನೆ. ನನ್ನ ಕೂದಲನ್ನು ಕಲರ್‌ ಮಾಡುತ್ತೇನೆ. ಈ ಹಿಂದೆ ಬೋಟಾಕ್ಸ್ ಗೆ ನಾನು ಬ್ರ್ಯಾಂಡ್‌ ರಾಯಭಾರಿಯಾಗಿಯೂ ದುಡಿದಿದ್ದೇನೆ ಮತ್ತು ನನ್ನ ತ್ವಚೆಯನ್ನು ಆರೋಗ್ಯವಂತವಾಗಿಡಲು ಬಹಳಷ್ಟು ತೈಲಗಳು ಹಾಗೂ ಲೋಷನಳನ್ನು ಬಳಸುತ್ತೇನೆ.

ಹಾಗಂತ, “ಆಂಟಿ’ ಎಂದು ಕರೆಸಿಕೊಳ್ಳಲು ನನಗೇನೂ ತೊಂದರೆ ಇಲ್ಲ. ಸತ್ಯವೇನೆಂದರೆ ನನ್ನನ್ನು ಹಾಗೆಯೇ ಕರೆಯಿರಿ ಅಂತ ಮಕ್ಕಳಿಗೆ ಹೇಳುತ್ತೇನೆ. ನನ್ನ ಮಕ್ಕಳ ಸ್ನೇಹಿತರು ಈಗ 20-25ರ ವಯೋಮಾನದಲ್ಲಿದ್ದಾರೆ, ಅವರೆಲ್ಲ ನನ್ನನ್ನು ಆಂಟಿ ಎಂದೇ ಕರೆಯುತ್ತಾರೆ. ಅವರಿಗೆ 5-6 ವರ್ಷವಿದ್ದಾಗಲೂ ಹೀಗೆಯೇ ಕರೆಯುತ್ತಿದ್ದರು. ನನಗಂತೂ ಆ ಮಕ್ಕಳ ಬಾಯಿಂದ ಹಾಗೆ ಕರೆಸಿಕೊಳ್ಳುವುದು ಖುಷಿಯ ವಿಚಾರ. ಆಂಟಿ ಎಂದು ಕರೆಸಿಕೊಳ್ಳುವುದು ಗೌರವದ ಸಂಕೇತವಾಗಿಯೇ ಕಾಣುತ್ತದೆ.

Advertisement

ಆಘಾತವಾಗುವ ಸಂಗತಿಯೆಂದರೆ, ಈ ಸಮಯದಲ್ಲಿ ಆಂಟಿ ಎನ್ನುವ ಪದಕ್ಕೆ ಎಷ್ಟು ಋಣಾತ್ಮಕ ಅರ್ಥಗಳು ಹುಟ್ಟಿಕೊಂಡುಬಿಟ್ಟಿವೆ ಎಂಬುದು. “”ಅಯ್ಯೋ ನೀವೊಳ್ಳೆ ಆಂಟಿ ಥರ ಕಾಣಿ¤ದ್ದೀರಿ..” “”ಆಂಟಿ ಥರಾ ಮಾತಾಡ್ಬೇಡ್ರಿ..” “”ನನ್ನ ಆಂಟಿ ಅನ್ನೋಕ್ಕೆ ಎಷ್ಟು ಧೈರ್ಯ ನಿನಗೆ…?”ಎಂದೇ ಈ ಪದವನ್ನು ನೆಗೆಟಿವ್‌ ಆಗಿ ವಾಕ್ಯಗಳಲ್ಲಿ ಬಳಸಲಾಗುತ್ತದೆ.

ನಾನು ಪ್ರಸಕ್ತ ಒಂದು ವೆಬ್‌ ಸೀರೀಸ್‌ನಲ್ಲಿ ನಟಿಸುತ್ತಿದ್ದೇನೆ. ಈ ಕಥೆ ಪ್ಯಾರಿಸ್‌ನಲ್ಲಿ ನಡೆಯುತ್ತದೆ. ನನ್ನದು ಮಧ್ಯವಯಸ್ಕ ಕಲಾವಿದೆಯ ಪಾತ್ರ. ಆ ಕಥೆಯಲ್ಲಿ ನನಗೆ 23 ವರ್ಷದ ಮಗಳಿರುತ್ತಾಳೆ. ನಿಜ ಜೀವನದಲ್ಲೂ ನನಗೆ ಅಜಮಾಸು ಇದೇ ವಯಸ್ಸಿನ ಮಗಳಿದ್ದಾಳೆ ಎಂಬ ಕಾರಣಕ್ಕೋ, ನಾನೂ ಒಬ್ಬ ತಾಯಿ ಎನ್ನುವ ಕಾರಣಕ್ಕಷ್ಟೇ ನಾನು ಈ ಪಾತ್ರವನ್ನು ಒಪ್ಪಿಕೊಳ್ಳಲಿಲ್ಲ. ಅದೊಂದು ಸುಂದರ ಪಾತ್ರ, ನಾನು ಆ ಪಾತ್ರವನ್ನು ಚೆನ್ನಾಗಿ ನಿರ್ವಹಿಸಬಲ್ಲೆ ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ. ಆ ಪಾತ್ರಕ್ಕೆ ಸರಿಹೊಂದುತ್ತದೆ ಎನ್ನುವ ಕಾರಣಕ್ಕಾಗಿ ಕೂದಲಿಗೆ ಬಣ್ಣ ಬಳಿಯುವುದನ್ನು ನಿಲ್ಲಿಸಿ ಬಿಳಿ ಕೂದಲು ಹೆಚ್ಚಾಗುವಂತೆ ಮಾಡಿಕೊಂಡೆ.

ಅದೇಕೋ ತಿಳಿಯದು, ಹೆಣ್ಣುಮಗಳಿಗೆ 30 ವರ್ಷ ಆಯಿತು ಎಂದರೆ ಆಕೆಗೆ ವಯಸ್ಸೇ ಆಗಿಹೋಯಿತು, ಬಿಳಿ ಕೂದಲು ಎಂದರೆ ಕೆಟ್ಟದ್ದು, ಮುಖದ ಮೇಲೆ ಸುಕ್ಕು ಬಂದರೆ ಅದು ಅಸಹ್ಯ ಎನ್ನುವ ಮನಸ್ಥಿತಿಗಳೇ ಕಾಣಿಸುತ್ತವೆ. ಈ ಕಾರಣಕ್ಕಾಗಿಯೇ ಅದೆಷ್ಟೋ ಹೆಣ್ಣುಮಕ್ಕಳು ತಮ್ಮ ವಯಸ್ಸಿಗಿಂತಲೂ ಚಿಕ್ಕವರಂತೆ ಕಾಣಬೇಕು ಎನ್ನುವ ಒತ್ತಡಕ್ಕೆ ಸಿಲುಕಿಬಿಡುತ್ತಾರೆ. ಹಾಗೆ ಕಾಣಿಸಿಕೊಳ್ಳಲು ಆಗದಿ¨ªಾಗ ಸೋತ ಭಾವನೆ, ಕೀಳರಿಮೆಯಲ್ಲಿ ಸಿಲುಕುತ್ತಾರೆ.

ನಾವು ಈ ಹೊಸ ತಲೆಮಾರಿಗೆ ಕಲಿಸಬೇಕಾದ ಮುಖ್ಯ ಪಾಠವೆಂದರೆ-ಹಿರಿಯರನ್ನು ಗೌರವಿಸಬೇಕು ಎನ್ನುವುದಷ್ಟೇ ಅಲ್ಲ, ಬದಲಾಗಿ ವಯಸ್ಸು ಹೆಚ್ಚಾಗುವ ಪ್ರಕ್ರಿಯೆಯನ್ನೂ ಗೌರವಿಸಬೇಕು ಎನ್ನುವುದು. ಬಿಳಿ ಬಣ್ಣವೇ ಶ್ರೇಷ್ಠ ಎಂಬ ಮನಸ್ಥಿತಿಯ ವಿರುದ್ಧ ಈಗಾಗಲೇ ನಾವು ಸಾಕಷ್ಟು ಯಶಸ್ಸನ್ನು ಗಳಿಸಿದ್ದೇವೆ. ಚರ್ಮದ ಬಣ್ಣದಲ್ಲಿ ಶ್ರೇಷ್ಠ-ಕನಿಷ್ಠ ಇರುವುದಿಲ್ಲ ಎಂಬ ಜ್ಞಾನೋದಯ ಜಗತ್ತಿಗೆ ಆಗುತ್ತಿದೆ. ಈಗ ನಾವೆಲ್ಲರೂ “ಮುಪ್ಪು ಎನ್ನುವುದು ಮುಜುಗರದ’ ವಿಷಯ ಎನ್ನುವ ಭಾವನೆಯ ವಿರುದ್ಧ ಒಟ್ಟಾಗಿ ಹೋರಾಡಬೇಕಿದೆ.

ನಾವೆಲ್ಲರೂ ಪ್ರಕೃತಿಯ ಅವಿಭಾಜ್ಯ ಅಂಗಗಳು. ಪ್ರಕೃತಿ ಕುರೂಪಿಯಾಗಿರಲು ಸಾಧ್ಯವೇ? ಒಂದು ವಯೋಮಾನ ಸುಂದರವಾದದ್ದು, ಒಂದು ವಯೋಮಾನ ಅಲ್ಲ ಎನ್ನುವಂಥ ಮನಸ್ಥಿತಿಯಿಂದ ಮುಕ್ತರಾಗೋಣ.

ಮನಶಾಸ್ತ್ರದಲ್ಲಿ ಒಂದು ಮಾತಿದೆ- ನಿಮ್ಮ ವರ್ತನೆ ಎಲ್ಲಾ ಕೆಲಸಗಳಲ್ಲೂ ಒಂದೇ ರೀತಿ ಇರುತ್ತದೆ. ಏಕೆಂದರೆ ನಿಮ್ಮ ಭಾವನೆಗಳು ಯೋಚನೆಗಳಾಗಿ ಬದಲಾಗುತ್ತವೆ ನಂತರ ಅವು ವರ್ತನೆಯ ರೂಪದಲ್ಲಿ ಹೊರಗೆ ಕಾಣಿಸಿಕೊಳ್ಳುತ್ತವೆ. ನಿಮ್ಮಲ್ಲಿ ನೆಗೆಟಿವಿಟಿ ಅಧಿಕವಿದ್ದರೆ, ಅದು ಎಲ್ಲಾ ಕೆಲಸಗಳ ಮೇಲೂ ತನ್ನ ಪ್ರಭಾವ ಬೀರುತ್ತದೆ. ನಮ್ಮ ಪ್ರತಿಯೊಂದು ಆಲೋಚನೆಯ ಹಿಂದೆಯೂ ಒಂದು ಪ್ಯಾಟರ್ನ್ ಎನ್ನುವುದು ಇರುತ್ತದೆ. ಆ ಪ್ಯಾಟರ್ನ್ ಎಲ್ಲ ಸಂದರ್ಭಗಳಲ್ಲೂ ಪುನರಾವರ್ತನೆಯಾಗುತ್ತಿರುತ್ತದೆ. ಆದರೆ ಮನುಷ್ಯನ ಮನಸ್ಥಿತಿ, ಅವನು ಯೋಚಿಸುವ ರೀತಿ ಕಾಲಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ. ಇಂಥ ಬದಲಾವಣೆಯು ಕೇವಲ ವ್ಯಕ್ತಿಗಳಲ್ಲಷ್ಟೇ ಕಾಣಿಸಿಕೊಳ್ಳುವುದಿಲ್ಲ. ಇಡೀ ಸಾಮೂಹಿಕ ಚಿಂತನಾ ಕ್ರಮವೂ ತಲೆಮಾರಿನಿಂದ ತಲೆಮಾರಿಗೆ ಬದಲಾಗುತ್ತಾ ಹೋಗುತ್ತದೆ.

ಬರೀ 20 ವರ್ಷದ ಹಿಂದಿನ ವಿಚಾರವನ್ನೇ ನೋಡಿ. ಯಾವುದೇ ಸಂಗತಿಯಿರಲಿ, ವಸ್ತುಗಳಿರಲಿ ಅಥವಾ ಸಂಬಂಧಗಳಿರಲಿ ಅವು ಜೀವನಪರ್ಯಂತ ಇರಬೇಕು, ದೀರ್ಘ‌ಕಾಲಿಕ ಬಾಳಿಕೆ ಬರಬೇಕು ಎಂಬ ಭಾವನೆಯಿತ್ತು. ಮದುವೆಯಿರಲಿ, ನಿಮ್ಮ ಕೆಲಸವಿರಲಿ, ನಿಮ್ಮ ಮನೆಯಿರಲಿ, ನಿಮ್ಮ ಮನೆಯ ಸಾಮಾನುಗಳಿರಲಿ, ನಿಮ್ಮ ಫ್ರಿಡ್ಜ್ ಅಥವಾ ಕಾರ್‌ ಇರಲಿ ಜೀವನ ಪರ್ಯಂತ ಜತೆಗಿರಬೇಕು ಎಂಬ ಭಾವನೆ ಇತ್ತು. ಕಾರ್‌ ಹಳೆಯದಾಗಿದ್ದರೂ, ಅದನ್ನು ಪದೇ ಪದೇ ರಿಪೇರಿ ಮಾಡಿಸಿ, ಅದನ್ನೇ ಮುಂದುವರಿಸಲಾಗುತ್ತಿತ್ತು. ಫ್ರಿಡ್ಜ್ ಅಂತೂ ತುಕ್ಕು ಹಿಡಿದರೂ ಅದನ್ನೇ ಬಳಸಲಾಗುತ್ತಿತ್ತು.

ಆದರೆ, ಈ ತಲೆಮಾರಿನ ಮನಸ್ಥಿತಿ ಸಂಪೂರ್ಣ ಭಿನ್ನವಾದದ್ದು. ಈ ತಲೆಮಾರಿಗೆ ವೈಯಕ್ತಿಕ ಸ್ವಾತಂತ್ರ್ಯವೆನ್ನುವುದು ಬಹುಮುಖ್ಯ. ಹೀಗಾಗಿ ಕೆಟ್ಟ ದಾಂಪತ್ಯದಿಂದ ಹೊರಗೆದ್ದು ಬರಲು ಅವರು ಹಿಂಜರಿಯುವುದಿಲ್ಲ, ಆಗಾಗ ನೌಕರಿಯ ಪಥವನ್ನೇ ಬದಲಿ ಸುತ್ತಿರುತ್ತಾರೆ, ಹೊಸ ಉದ್ಯೋಗಗಳನ್ನು ಅಥವಾ ಜೀವನಶೈಲಿಯನ್ನು ಬೆನ್ನತ್ತಿ ಮನೆಗಳನ್ನು, ಊರುಗಳನ್ನು ಬದಲಿಸುತ್ತಾ ಹೋಗುತ್ತಿದ್ದಾ , ಕಡಿಮೆ ದರದ ಚೀಪ್‌ ಫ‌ರ್ನಿಚರ್ಗಳನ್ನು ಮನೆಗೆ ತರುತ್ತಾರೆ. ಅದೇ ಬ್ರಾಂಡ್ನ ಹೊಸ ಆವೃತ್ತಿ ಬಂದಾಗ ಎಕ್ಸ್ಚೇಂಜ್ ಆಫ‌ರ್‌ಗೆ ಬದಲಿಸುತ್ತಾರೆ.

ಈಗಿನ ತಲೆಮಾರಿಗೆ ಹೊಸತನ ಬೇಕು. ಈ ಸಂಗತಿಯನ್ನು ನೀವು ಗಮನಿಸಿರಬಹುದು. ಯಾವುದೇ ಹಿರಿಯರ ಫೋನ್‌ಗಳನ್ನು ನೋಡಿ, ಅದಾಗಲೇ ಹಳತಾಗಿರುತ್ತದೆ. ಅದರಲ್ಲಿನ ಸಾಫ್ಟವೇರ್‌ಗಳೂ ಹಳತಾಗಿ, ಏನೂ ಉಪಯೋಗವಿಲ್ಲದಂತಿರುತ್ತದೆ. ಆದರೆ, ಅತ್ತ ಯುವ ಜನತೆ ವರ್ಷದಿಂದ ವರ್ಷಕ್ಕೆ ಹೊಸ ಮಾಡೆಲ್‌ಗಳಿಗೆ ಅಪ್‌ಗ್ರೇಡ್‌ ಆಗುತ್ತಾರೆ. ಈಗಂತೂ ಕೆಲವು ಫೋನ್‌ಗಳು ಹೇಗೆ ಇರುತ್ತವೆಂದರೆ, ಅದರಲ್ಲಿ ಬ್ಯಾಟರಿಯನ್ನೂ ತೆಗೆಯಲು ಸಾಧ್ಯವಾಗುವುದಿಲ್ಲ.

ಹೀಗಾಗಿ, ಈಗ ಜೀವನಪರ್ಯಂತ ಬಾಳಿಕೆ ಬರುವಂಥದ್ದು ಏನಾದರೂ ಉಳಿದಿದೆಯೆಂದರೆ, ಅದು ಖುದ್ದು ಜೀವನವೊಂದೇ. ಆದರೆ ಈಗ ಸಾಂಕ್ರಾಮಿಕವು ಎಲ್ಲರ ಜೀವನಶೈಲಿಗೂ ಹಠಾತ್ತನೆ ಬ್ರೇಕ್‌ ಹಾಕಿದೆ. ಗ್ಯಾಜೆಟ್ಟುಗಳು, ವಸ್ತುಗಳು ಹಾಗೂ ಸಂಬಂಧಗಳ ಬಗ್ಗೆ ಯೋಚಿಸಲು ಬದುಕನ್ನು ಮರುಹಳಿ ಏರಿಸಲು ಇದು ಎಲ್ಲಾ ವಯೋಮಾನದವರಿಗೂ ಸುಸಮಯ.

ಪೂಜಾ ಬೇಡಿ, ಬಾಲಿವುಡ್‌ ನಟಿ

Advertisement

Udayavani is now on Telegram. Click here to join our channel and stay updated with the latest news.

Next