Advertisement
ಆಡಿ ಎಸ್5 ಸ್ಫೋರ್ಟ್ ಬ್ಯಾಕ್ ಕಾರನ್ನು ಇತ್ತೀಚೆಗಷ್ಟೇ ಸಂಸ್ಥೆ ಭಾರತೀಯ ಮಾರುಕಟ್ಟೆಗೆ ಬಿಟ್ಟಿತ್ತು. ಇಲ್ಲಿನ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಕೆಲ ಬದಲಾವಣೆಗಳನ್ನು ಮಾಡಿ ಆರ್‌ಎಸ್ 5 ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದೆ. ಈ ಕಾರಿನ ಬೆಲೆ1.5ಕೋಟಿ ರೂಪಾಯಿ (ಎಕ್ಸ್ ಶೋರೂಂ) ಇರುವ ಸಾಧ್ಯತೆ ಇದೆ.
ಈಗ ನೀವು ಕೊರೊನಾಲಸಿಕೆ ಪ್ರಮಾಣಪತ್ರವನ್ನು ವಾಟ್ಸ್‌ಆ್ಯಪ್ ಮೂಲಕ ಕೆಲವೇ ಸೆಕೆಂಡುಗಳಲ್ಲಿ ಪಡೆಯಬಹುದು. ಸರ್ಕಾರ ನೀಡಿರುವ ಸಂಖ್ಯೆಗೆ ವಾಟ್ಸ್‌ಆ್ಯಪ್ ಸಂದೇಶಕಳುಹಿಸುವ ಮೂಲಕ ಪ್ರಮಾಣಪತ್ರ ಪಡೆಯಲು ಸಾಧ್ಯಎಂದುಕೇಂದ್ರಆರೋಗ್ಯ ಸಚಿವ ಮನಸುಖ ಮಾಂಡವಿಯ ಮಾಹಿತಿ ನೀಡಿದ್ದಾರೆ. ನೀವೇನು ಮಾಡಬೇಕು?
● My Gov ಕೊರೊನಾ ಹೆಲ್ಪ್ ಡೆಸ್ಕ್ ವಾಟ್ಸ್‌ಆ್ಯಪ್ ಸಂಖ್ಯೆ +91 9013151515 ಅನ್ನು ನಿಮ್ಮ ಮೊಬೈಲ್‌ನ ಸಂಪರ್ಕ ಪಟ್ಟಿಯಲ್ಲಿ My Gov ಎಂದು ಸೇವ್ ಮಾಡಿಕೊಳ್ಳಿ.
Related Articles
Advertisement
● ನೀವು ಸಾಮಾನ್ಯವಾಗಿ ಸಂದೇಶ ಕಳುಹಿಸಲು ಬಳಸುವ ಚಾಟ್ ವಿಂಡೋವನ್ನು ಓಪನ್ ಮಾಡಿ
● ಅಲ್ಲಿ ಸಂದೇಶ ಬರೆಯುವ ಸ್ಥಳದಲ್ಲಿ Download Certificate ಎಂದು ಟೈಪ್ ಮಾಡಿ, ಕಳುಹಿಸಿ.
● ಅಷ್ಟರಲ್ಲಿ ನಿಮ್ಮ ನೋಂದಾಯಿತ ಮೊಬೈಲ್‌ಗೆ 6 ಅಂಕಿಗಳ ಒಟಿಪಿ(ಒನ್ ಟೈಂ ಪಾಸ್‌ವರ್ಡ್) ಬರುತ್ತದೆ. ಅದನ್ನು My Gov ಚಾಟ್‌ಬಾಕ್ಸ್‌ನಲ್ಲಿ ನಮೂದಿಸಿ ಕಳುಹಿಸಿ.
● ತಕ್ಷಣ ನಿಮ್ಮ ವಾಟ್ಸ್‌ಆ್ಯಪ್‌ಗೆ “ಕೊರೊನಾ ಲಸಿಕೆಯ ಪ್ರಮಾಣಪತ್ರ’ ಬರುತ್ತದೆ.