Advertisement

ಸೆ.17ರಿಂದ ಅ.2ರವರೆಗೆ ಪ್ರಧಾನಿ ಮೋದಿಯವರ ಗಿಫ್ಟ್‌ಗಳ ಹರಾಜು

08:51 PM Sep 11, 2022 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಣ್ಯರಿಂದ ಬಂದಿರುವಂತಹ ಉಡುಗೊರೆಗಳನ್ನು ಸೆ.17ರಿಂದ ಅ.2ರವರೆಗೆ ಹರಾಜು ನಡೆಸಲಾಗುವುದು.

Advertisement

//pmmementos.gov.in ವೆಬ್‌ಸೈಟ್‌ನಲ್ಲಿ ಹರಾಜು ಈ ಪ್ರಕ್ರಿಯೆ ನಡೆಯಲಿದೆ ಎಂದು ನ್ಯಾಷನಲ್‌ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಅದ್ವೈತ ಗದನಾಯಕ ಅವರು ತಿಳಿಸಿದ್ದಾರೆ.

ಈ ಹರಾಜಿನಲ್ಲಿ ಬರುವ ಹಣವನ್ನು ನಮಾಮಿ ಗಂಗೆ ಯೋಜನೆಗೆ ಬಳಸಿಕೊಳ್ಳಲಾಗುವುದು. ಕ್ರೀಡಾಪಟುಗಳು ಪ್ರಧಾನಿ ಅವರಿಗೆ ಕೊಟ್ಟಿರುವ ಜೆರ್ಸಿ, ಗ್ಲೌಸ್‌ ಸೇರಿ ಅನೇಕ ಕ್ರೀಡಾ ವಸ್ತುಗಳು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಕೊಟ್ಟಂತಹ ವಿಶೇಷ ಕಲಾಕೃತಿಗಳು, ರಾಮಮಂದಿರ ಹಾಗೂ ಕಾಶಿ ವಿಶ್ವನಾಥ ದೇಗುಲದ ಮಾದರಿಗಳೂ ಹರಾಜಾಗಲಿವೆ. ವಸ್ತುಗಳ ಮೂಲ ಬೆಲೆ 100 ರೂ.ನಿಂದ 10 ಲಕ್ಷ ರೂ.ವರೆಗಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next