Advertisement

7 ಲಕ್ಷ ರೂ. ಪಡೆದ‌ ದೇಶಪಾಂಡೆ, ಅನಿರುದ್ಧ

12:17 AM Jul 28, 2019 | Team Udayavani |

ಬೆಂಗಳೂರು: ಎಂಟನೇ ಆವೃತ್ತಿ ಕರ್ನಾಟಕ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಹರಾಜು ಯಶಸ್ವಿಯಾಗಿ ಮುಗಿದೆ. ಲಭ್ಯವಿದ್ದ 237 ಆಟಗಾರರ ನಡುವೆ ತಮಗೆ ಬೇಕಾದವರನ್ನು ಕೊಳ್ಳಲು ಭರ್ಜರಿ ಚೌಕಾಶಿ ನಡೆಯಿತು.

Advertisement

ಅಚ್ಚರಿಯೆಂದರೆ ರಾಜ್ಯದ ಅತ್ಯಂತ ಖ್ಯಾತ ಕ್ರಿಕೆಟಿಗರನ್ನು ಕೊಳ್ಳಲು ಫ್ರಾಂಚೈಸಿ ಗಳು ಹಿಂದೆ ಮುಂದೆ ನೋಡಿದ್ದು! ಪ್ರಮುಖ ಆಟಗಾರರು ರಾಷ್ಟ್ರೀಯ ತಂಡ, ಎ ತಂಡ, ದುಲೀಪ್‌ ಟ್ರೋಫಿಯಲ್ಲಿ ಆಡುವುದು ಖಚಿತಗೊಂಡಿರುವುದರಿಂದ ಫ್ರಾಂಚೈಸಿಗಳು ಈ ಆಟಗಾರರನ್ನು ಆಯ್ಕೆ ಮಾಡಿಕೊಂಡು ಕೈಸುಟ್ಟುಕೊಳ್ಳಲು ಸಿದ್ಧವಿಲ್ಲ ಎಂಬ ಸಂದೇಶ ರವಾನಿಸಿದವು.

ಶನಿವಾರದ ಹರಾಜಿನಲ್ಲಿ ಗಮನ ಸೆಳೆದ ಆಟಗಾರರೆಂದರೆ ಪವನ್‌ ದೇಶಪಾಂಡೆ ಮತ್ತು ಅನಿರುದ್ಧ ಜೋಶಿ. ಇವರಿಬ್ಬರನ್ನು ಕೊಳ್ಳಲು ಫ್ರಾಂಚೈಸಿಗಳು ಗರಿಷ್ಠ ಪೈಪೋಟಿ ನಡೆಸಿದವು. ಆಲ್‌ರೌಂಡರ್‌ ಪವನ್‌ ದೇಶಪಾಂಡೆ 7.30 ಲಕ್ಷ ರೂ. ಮೊತ್ತಕ್ಕೆ ಶಿವಮೊಗ್ಗ ಲಯನ್ಸ್‌ ಪಾಲಾದರು. ಇದು ಈ ಬಾರಿಯ ಕೆಪಿಎಲ್‌ನಲ್ಲಿ ದಾಖಲಾದ ಗರಿಷ್ಠ ಮೊತ್ತ. ಪವನ್‌ ಆಲ್‌ರೌಂಡರ್‌ ಆಗಿರುವುದರಿಂದ ನೀಡಿರುವ ಮೊತ್ತ ಸೂಕ್ತವೂ ಹೌದು ಎಂದು ವಿಶ್ಲೇಷಿಸಲಾಗಿದೆ.

ಗರಿಷ್ಠ ಮೊತ್ತ ಪಡೆದುಕೊಂಡ
ಮತ್ತೂಬ್ಬ ಆಟಗಾರ ಅನಿರುದ್ಧ ಜೋಶಿ. ಇವರು ಕೂಡ ಆಲ್‌ರೌಂಡರ್‌ ಆಗಿ ಹೆಸರು ಮಾಡಿದ್ದಾರೆ. ಇವರನ್ನು ಮೈಸೂರು ವಾರಿಯರ್ಸ್‌ ತಂಡ 7.10 ಲಕ್ಷ ರೂ. ನೀಡಿ ಖರೀದಿಸಿತು. ಇದು ಈ ಕೆಪಿಎಲ್‌ನಲ್ಲಿ ದಾಖಲಾದ 2ನೇ ಗರಿಷ್ಠ ಹರಾಜು ಮೊತ್ತ.

ಪಾಂಡೆ ಕಡೆಗೂ ಮಾರಾಟ
ಭಾರತ ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶ ಪಡೆದಿರುವ ಮನೀಷ್‌ ಪಾಂಡೆ ಆರಂಭಿಕ ಸುತ್ತಿನಲ್ಲಿ ಮಾರಾಟವಾಗಲಿಲ್ಲ. ಆದರೆ ಅವರು ಆ.15ರ ವೇಳೆ ರಾಜ್ಯಕ್ಕೆ ಮರಳುವ ಭರವಸೆಯಿರುವುದರಿಂದ 2ನೇ ಸುತ್ತಿನಲ್ಲಿ ಬೆಳಗಾವಿ ಪ್ಯಾಂಥರ್ಸ್‌ 2 ಲಕ್ಷ ರೂ. ನೀಡಿ ಖರೀದಿಸಿತು.

Advertisement

ಮಾರಾಟವಾಗದವರು
ಪ್ರಮುಖ ಆಟಗಾರರಾದ ಕರುಣ್‌ ನಾಯರ್‌, ಶ್ರೇಯಸ್‌ ಗೋಪಾಲ್‌, ರೋನಿತ್‌ ಮೋರೆ ಮಾರಾಟವಾಗಲಿಲ್ಲ. ಈ ಆಟಗಾರರು ದುಲೀಪ್‌ ಟ್ರೋಫಿಯಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿರುವುದರಿಂದ ಫ್ರಾಂಚೈಸಿಗಳು ಜವಾಬ್ದಾರಿ ತೆಗೆದುಕೊಳ್ಳಲು ಬಯಸಲಿಲ್ಲ.

ಗರಿಷ್ಠ ಮೊತ್ತ ಪಡೆದವರು (ಲಕ್ಷ ರೂ.ಗಳಲ್ಲಿ)
1. ಪವನ್‌ ದೇಶಪಾಂಡೆ-7.30 (ಶಿವಮೊಗ್ಗ ಲಯನ್ಸ್‌)
2. ಅನಿರುದ್ಧ ಜೋಶಿ -7.10 (ಮೈಸೂರು ವಾರಿಯರ್ಸ್‌)
3. ಪ್ರಸಿದ್ಧ ಕೃಷ್ಣ-5.80 (ಬಳ್ಳಾರಿ ಟಸ್ಕರ್ಸ್‌)
4. ಮೊಹಮ್ಮದ್‌ ತಾಹಾ-5.70 (ಹುಬ್ಬಳ್ಳಿ ಟೈಗರ್ಸ್‌)
5. ಅಮಿತ್‌ ವರ್ಮ-5.20 (ಮೈಸೂರು ವಾರಿಯರ್ಸ್‌)

Advertisement

Udayavani is now on Telegram. Click here to join our channel and stay updated with the latest news.

Next