Advertisement

ಗಮನ ಸೆಳೆದ ಅಗ್ನಿ ಶಾಮಕದಳದ ಅಣುಕು ಪ್ರದರ್ಶನ

05:27 PM Jan 23, 2018 | Team Udayavani |

ಯಾದಗಿರಿ: ನಗರದ ಪಿ.ಎಸ್‌ ದೋಕಾ ಜೈನ್‌ ಸ್ಕೂಲ್‌ ಆವರಣದಲ್ಲಿ ಅಗ್ನಿ ಶಾಮಕ ಇಲಾಖೆಯಿಂದ ಅಗ್ನಿ ಅವಘಡಗಳಿಂದ ಪಾರಾಗುವ ಕುರಿತು ನಡೆಸಲಾದ ಅಣಕು ಕಾರ್ಯಾಚರಣೆ ವಿದ್ಯಾರ್ಥಿಗಳ ಗಮನ ಸೆಳೆಯಿತು.

Advertisement

ಬೆಂಕಿ ಹತ್ತಿದ್ದಂತೆ ಮೊದಲು ನೋಡಿದ ಶಾಲಾ ಜವಾನ, ಓಡೋಡಿ ಹೋಗಿ, ಸಿಬ್ಬಂದಿಗೆ ತಿಳಿಸಿದರು. ನಂತರ ಅಪಾಯದ ಸೈರನ್‌ ಮೊಳಗಿಸಿ, ಶಾಲಾ ಮಕ್ಕಳನ್ನು ಹೊರಗಡೆಗೆ ಕರೆತರುವ ಪ್ರಯತ್ನ ಮಾಡಲಾಯಿತು. ನಂತರ
ಅಗ್ನಿ ಶಾಮಕ ಇಲಾಖೆ ಹಾಗೂ ಅಂಬ್ಯುಲೆನ್ಸ್‌ಗೆ ಕರೆ ಮಾಡಿ ಮಾಹಿತಿ ನೀಡಲಾಯಿತು. ಅಗ್ನಿ ಶಾಮಕ ಇಲಾಖೆ ಸಿಬ್ಬಂದಿ ದೌಡಾಯಿಸಿ ಬಂದು ಶಾಲಾ ಕಟ್ಟಡದಲ್ಲಿ ಸಿಲುಕಿದ ಐದು ವಿದ್ಯಾರ್ಥಿಗಳನ್ನು ರಕ್ಷಿಸಿದರು. ವಿದ್ಯಾರ್ಥಿಗಳಿಗೆ ಆಗಿರುವ ಗಾಯ, ಇನ್ನಿತರಗಳಿಗೆ ಪ್ರಥಮ ಚಿಕಿತ್ಸೆ ನೀಡುವುದರೊಂದಿಗೆ 108 ಅಂಬ್ಯುಲೆನ್ಸ್‌ ಮೂಲಕ ಹೆಚ್ಚಿನ ಚಿಕಿತ್ಸೆಗೆ ಕರೆದ್ಯೊಯುವ ರೀತಿಯ ಅಣಕು ಪ್ರದರ್ಶನ ನಡೆಯಿತು. ಬೆಂಕಿ ನಂದಿಸುವ ವಾಹನದ ಮೂಲಕ ನೋಜಲ್‌ ಹಿಡಿದುಕೊಂಡು ಪೈಪುಗಳ ಮೂಲಕ ನೀರು ಚಿಮ್ಮಿಸುವ ಹರಸಾಹಸದೊಂದಿಗೆ ಬೆಂಕಿ ನಂದಿಸಿದರು. ಇದರಿಂದಾಗಿ ಅಗ್ನಿ ಅವಘಡ ಸಂಭವಿಸಿದಾಗ ಯಾವ ರೀತಿ ಸುರಕ್ಷತೆ ಆಗಿರಬೇಕೆಂಬುದು ಅಗ್ನಿ ಶಾಮಕ ದಳವರ ಅಣಕು ಪ್ರದರ್ಶನದಿಂದ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ದೊರಕುವಂತಾಯಿತು.

ಜಿಲ್ಲಾ ಅಗ್ನಿ ಶಾಮಕದಳದ ಅಧಿಕಾರಿ ಹನುಮನಗೌಡ ಮಾತನಾಡಿ, ಅಗ್ನಿ ಅವಘಡ ಸಂಭವಿಸಿದಾಗ ಸುರಕ್ಷತೆಯಿಂದ ಪಾರಾಗಬೇಕಾಗುತ್ತದೆ. ದೊಡ್ಡ ಬಿಲ್ಡಿಂಗ್‌ ಇದ್ದರೆ ಲಿಫ್ಟ್‌ಗಳನ್ನು ಬಳಸಬಾರದು. ಒದ್ದೆ ಬಟ್ಟೆಯನ್ನು ಮುಖಕ್ಕೆ ಕಟ್ಟಿಕೊಂಡು ಅಗ್ನಿ ಅವಘಡದಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದರು. ವಿದ್ಯುತ್‌ ಬೆಂಕಿ ನಂದಿಸುವಾಗ ಯಾವುದೇ ಕಾರಣಕ್ಕೂ ನೀರು ಮಾತ್ರ ಬಳಸಬಾರದು ಎಂದು ಅಗ್ನಿ ನಂದಿ ಸುವ ಕುರಿತು ಸ್ವ-ವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಅಗ್ನಿ ಶಾಮಕದಳ ಸಿಬ್ಬಂದಿಗಳಾದ ಕೆ.ನರಸಪ್ಪ, ವಿ.ಬಿ. ರಾಠೊಡ, ಕೆ. ಹುಸೇನ್‌, ತಿರುಮಲ ರೆಡ್ಡಿ, ರಾಘವೇಂದ್ರ, ಮಹಿಬೂಬ ಸಾಬ, ಈರಣ್ಣ, ದೇವೆಂದ್ರ, ಶಂಕ್ರಪ್ಪ, ಮಲ್ಲಿಕಾರ್ಜುನ ಸೇರಿದಂತೆ ಶಾಲಾ ಸಿಬ್ಬಂದಿ
ಹಾಗೂ ವಿದ್ಯಾರ್ಥಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next