Advertisement

ಪರಿತ್ಯಕ್ತ ಶಿವನ ವಿಗ್ರಹಕ್ಕೆ  ಶೀಘ್ರ ಆಕರ್ಷಕ ಪಾರ್ಕ್‌

11:29 AM Apr 09, 2018 | Team Udayavani |

ಪುತ್ತೂರು: ಹಿಂದೊಮ್ಮೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಎದುರು ಆಕರ್ಷಣೆಗೆ ಕಾರಣವಾಗಿದ್ದ ಶಿವನ ವಿಗ್ರಹ ಇದೀಗ ಮೂಲೆ ಸೇರಿದೆ. ಅದೇ ವಿಗ್ರಹವನ್ನು ಬಳಸಿ ಸುಂದರ ಪಾರ್ಕ್‌ ಆಗಿಸಿ ಜನಾಕರ್ಷಣೆಯ ಕೇಂದ್ರವಾಗಿಸುತ್ತ ದೇವಾಲಯದ ಆಡಳಿತ ಮಂಡಳಿ ಯೋಜನೆ ರೂಪಿಸಿದೆ. ಕಾರಣಾಂತರಗಳಿಂದ ಆಕರ್ಷಕ ವಿಗ್ರಹ ನೆಲ್ಲಿಕಟ್ಟೆ ಖಾಸಗಿ ಬಸ್‌ ನಿಲ್ದಾಣದ ಬಳಿ ಗದ್ದೆಯಲ್ಲಿ ಮೂಲೆಗಿಡಲಾಗಿತ್ತು. ಇದನ್ನು ನಿರ್ವಹಣೆ ಮಾಡದ ಬಗ್ಗೆ ಸಾರ್ವಜನಿಕರು, ಭಕ್ತರಲ್ಲಿ ಅಸಮಾಧಾನಕ್ಕೂ ಕಾರಣವಾಗಿತ್ತು.

Advertisement

ನಿರ್ವಹಣೆಯಿಲ್ಲ
ಗದ್ದೆಯಲ್ಲಿದ್ದ ವಿಗ್ರಹದ ನಿರ್ವಹಣೆ ನಡೆದಿರಲಿಲ್ಲ. ಬ್ರಹ್ಮಕಲಶೋತ್ಸವ ಸಂದರ್ಭ ತಾತ್ಕಾಲಿಕವಾಗಿ ಕಲ್ಲುಹಾಸಿ ವಿಗ್ರಹ ವನ್ನು ಕೂರಿಸಿ ಸಣ್ಣ ಪಾರ್ಕ್‌ನಂತೆ ಮಾಡಲಾಗಿತ್ತು. ಸುತ್ತಲೂ ಬೇಲಿಹಾಕಿ ಕೆಲವು ಆಲಂಕಾರಿಕ ಗಿಡಗಳನ್ನು ನೆಡಲಾಗಿತ್ತು. ಅದು ಬಿಟ್ಟರೆ ಬೇರೇನೂ ಆಗಿರಲಿಲ್ಲ.

ಹೊಸ ಯೋಜನೆ
ಶಿವನ ಆಕರ್ಷಕ ವಿಗ್ರಹವನ್ನು ಧಾರ್ಮಿಕ ಹಿನ್ನೆಲೆಯಲ್ಲಿ ಅಲ್ಲದಿದ್ದರೂ ಆಕರ್ಷಣೆ ದೃಷ್ಟಿಯಿಂದ ಪುನರ್‌ ರೂಪುಗೊಳಿಸಬೇಕು ಎನ್ನುವ ಉದ್ದೇಶದಿಂದ ದೇವಾಲಯದ ಆಡಳಿತ ಮಂಡಳಿಯು 12 ಲಕ್ಷ ರೂ. ವೆಚ್ಚದ ಕಾರ್ಯ ಯೋಜನೆಯನ್ನು ಹಾಕಿ ಕೊಂಡಿದೆ. ಸುಮಾರು 200 ಸುತ್ತಳತೆಯ ಟ್ರ್ಯಾಕ್ ನಿರ್ಮಿಸಿ, ಆಕರ್ಷಕ ಗಾರ್ಡನ್‌ ನೊಂದಿಗೆ ಮಧ್ಯದಲ್ಲಿ ಶಿವನ ಮೂರ್ತಿ ಇಡಲು ಯೋಜಿಸಲಾಗಿದೆ. ಇದಕ್ಕೆ ಕಾಂಪೌಂಡ್‌ ಕೂಡ ನಿರ್ಮಾಣವಾಗಲಿದೆ. 

ನಿರ್ವಹಣೆ ಅಗತ್ಯ
ಯಾವುದೋ ಕಾರಣಕ್ಕೂ ಶಿವನ ಮೂರ್ತಿ ಸ್ಥಳಾಂತರಿಸಿರಬಹುದು. ಆದರೆ ನಿರ್ವಹಣೆ ಮಾಡದೆ ಆಕರ್ಷಕ ಮೂರ್ತಿ ಹಾಳು ಮಾಡುವುದು ಸರಿಯಲ್ಲ. ವ್ಯವಸ್ಥಿತ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎನ್ನುವುದು ಭಕ್ತರಾದ ನಮ್ಮ ಅನಿಸಿಕೆ.
ಕುಸುಮಾಧರ ಪುತ್ತೂರು
  ಸ್ಥಳೀಯರು

ಶೀಘ್ರ ಚಾಲನೆ
ಶಿವನ ವಿಗ್ರಹದ ನಿರ್ವಹಣೆಗೆ ಸಂಬಂಧ ಆಕರ್ಷಕ ಪಾರ್ಕ್‌ ನಿರ್ಮಿಸಿ ವ್ಯವಸ್ಥೆಗೊಳಿಸುವ 12 ಲಕ್ಷ ರೂ. ಕಾರ್ಯ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಈ ನಿಟ್ಟಿನಲ್ಲಿ ಒಂದೆರಡು ಮಂದಿ ಕಾಮಗಾರಿ ನಡೆಸಲೂ ಮುಂದೆ ಬಂದಿದ್ದಾರೆ. ಶೀಘ್ರದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗುವುದು. 
ಎನ್‌. ಸುಧಾಕರ ಶೆಟ್ಟಿ,
ಅಧ್ಯಕ್ಷರು, ಶ್ರೀ ಮಹಾಲಿಂಗೇಶ್ವರ
ದೇವಸ್ಥಾನದ ವ್ಯವಸ್ಥಾಪನ ಸಮಿತಿ

Advertisement

ರಾಜೇಶ್‌ ಪಟ್ಟೆ 

Advertisement

Udayavani is now on Telegram. Click here to join our channel and stay updated with the latest news.

Next