Advertisement

ಅನಿವಾರ್ಯ ಕಾರಣಗಳಿಂದಾಗಿ ಟಿಕೆಟ್‌ ಕ್ಯಾನ್ಸಲ್‌ ಮಾಡಿದ್ರೆ ಬೀಳುತ್ತೆ ಜಿಎಸ್‌ಟಿ!

12:01 PM Aug 07, 2022 | Team Udayavani |

ಹೊಸದಿಲ್ಲಿ: ನೀವು ರೈಲು ಟಿಕೆಟ್‌ ಬುಕ್‌ ಮಾಡಿದ್ದೀರಿ. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಟಿಕೆಟ್‌ ರದ್ದು ಮಾಡಿದರೆ ಅದಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಬೀಳುತ್ತೆ!

Advertisement

ಈ ಹೊಸ ನಿಯಮವನ್ನು ಕೇಂದ್ರ ಹಣಕಾಸು ಇಲಾಖೆ ಜಾರಿಗೊಳಿಸಿದೆ.

ಟಿಕೆಟ್‌ ರದ್ದುಗೊಳಿಸುವ ಪ್ರಕ್ರಿಯೆಯು ಸೇವೆಯೆಂದೇ ಪರಿಗಣಿಸಲ್ಪಡುವುದರಿಂದ ಟೆಕೆಟ್‌ ರದ್ದುಗೊಳಿಸುವಾಗ ವಿಧಿಸಲಾಗುವ ಶುಲ್ಕಕ್ಕೆ ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಹಾಗೂ ಕಸ್ಟಮ್ಸ್‌ ಗಳ ಮಂಡಳಿಯ (ಸಿಬಿಐಸಿ) ಪ್ರಕಟನೆಯಲ್ಲಿ ತಿಳಿಸಲಾಗಿದೆ.

ರೈಲು ಟಿಕೆಟ್‌ ಮಾತ್ರವಲ್ಲ, ಹೊಟೇಲ್‌ ರೂಂ ಬುಕ್‌ ಮಾಡಿ ಅದನ್ನು ರದ್ದು ಮಾಡಿದರೆ, ಸಿನೆಮಾ, ಕ್ರೀಡೆ ಮುಂತಾದ ಮನೋರಂಜನೆ ಟಿಕೆಟ್‌ಗಳನ್ನು ಬುಕ್‌ ಮಾಡಿ ಆನಂತರ ಟಿಕೆಟ್‌ ರದ್ದುಗೊಳಿಸಿದರೂ ಕ್ಯಾನ್ಸಲೇಷನ್‌ ಶುಲ್ಕಕ್ಕೆ ಈ ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಟ್ರಸ್ಟ್‌ಗಳ ರೂಂ ಬಾಡಿಗೆಗೆ ತೆರಿಗೆಯಿಲ್ಲ
ಯಾವುದೇ ಧಾರ್ಮಿಕ ಟ್ರಸ್ಟ್‌ಗಳ ವಸತಿ ವ್ಯವಸ್ಥೆಯ ರೂಮು ಬಾಡಿಗೆಗೆ ಪಡೆದರೆ, ಆ ಬಾಡಿಗೆಯು ಜಿಎಸ್‌ಟಿಯಿಂದ ವಿನಾಯ್ತಿ ಹೊಂದಿರುತ್ತದೆ ಎಂದು ಸಿಬಿಐಸಿ ಸ್ಪಷ್ಟಪಡಿಸಿದೆ. ಜೂನ್‌ನಲ್ಲಿ ನಡೆದಿದ್ದ ಜಿಎಸ್‌ಟಿ ಸಭೆಯಲ್ಲಿ ಹೋಟೆಲ್‌, ವಸತಿ ಗೃಹಗಳ ರೂಂಗಳ ಬಾಡಿಗೆಯ ಮೇಲೆ ಶೇ. 12ರಷ್ಟು ಜಿಎಸ್‌ಟಿ ವಿಧಿಸಲು ತೀರ್ಮಾನಿಸಲಾಗಿತ್ತು.
ಆ ಹಿನ್ನೆಲೆಯಲ್ಲಿ ಸಿಬಿಐಸಿ, ಮೇಲಿನಂತೆ ಸ್ಪಷ್ಟನೆ ನೀಡಿದೆ.

Advertisement

ವಾಣಿಜ್ಯ ಟಿಕೆಟ್‌ಗಳಿಗೆ ತೆರಿಗೆ
ವಾಣಿಜ್ಯ ಉದ್ದೇಶದ ಮನೋರಂಜನೆ ಕಾರ್ಯಕ್ರಮಗಳ, 500 ರೂ. ಮುಖ ಬೆಲೆ ಮೀರಿದ ಟಿಕೆಟ್‌ಗಳ ಮೇಲೆ ಜಿಎಸ್‌ಟಿ ವಿಧಿಸ ಲಾಗುತ್ತದೆ ಎಂದು ಹೇಳಲಾಗಿದೆ. ಇದರಲ್ಲಿ ಗಾರ್ಬಾ ನೃತ್ಯ, ಕ್ರಿಕೆಟ್‌, ಇತ್ಯಾದಿಗಳು ಸೇರಲಿವೆ.

Advertisement

Udayavani is now on Telegram. Click here to join our channel and stay updated with the latest news.

Next