ಅಂಕೋಲಾ : ರಾಜಕಾರಣದಲ್ಲಿ ಇರುವವರು ಚುನಾವಣಾ ಸಂದರ್ಭದಲ್ಲಿ ಆರೋಪ ಪ್ರತ್ಯಾರೋಪಗಳನ್ನ ಮಾಡುವುದು ಸಹಜ ಈಗಾಗಲೇ ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಎಲ್ಲಾ ಪ್ರಯತ್ನಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಡೆಯುತ್ತಿವೆ . ಪೂರ್ವಶಾಸ್ತ್ರ ಅಧ್ಯಯನದ ವರದಿ ಬಂದ ಕೂಡಲೇ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಇದನ್ನು ಅರಿತು ಚುನಾವಣಾ ಸಂದರ್ಭದಲ್ಲಿ ರಾಜಕಾರಣದಲ್ಲಿ ಇರುವವರು ಚುರುಕಾಗುತ್ತಾರೆ ಅಂತವರಿಗೆ ಸರಿಯಾದ ಉತ್ತರ ಕೊಡುತ್ತೇವೆ ಎಂದು ಉತ್ತರ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿಯವರು ಹೇಳಿದ್ದಾರೆ.
ಅಂಕೋಲಾ ತಾಲೂಕಿನ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಯತ್ನ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ ಆದಾಗಿಯೂ ಕೇಂದ್ರದಿಂದ ಇನ್ನಷ್ಟು ಮಾಹಿತಿಗಳನ್ನ ಕೇಳಿದ್ದಾರೆ. ಅದನ್ನು ಕೂಡ ಸದ್ಯದಲ್ಲೇ ರವಾನಿಸಲಿದ್ದೇವೆ ಜೊತೆಗೆ ಪೂರ್ವಶಾಸ್ತ್ರ ಅಧ್ಯಯನ ವರದಿಯು ಬಂದ ಮೇಲೆ ಅದರ ಆಧಾರದ ಮೇಲೆ ಅತಿ ಶೀಘ್ರದಲ್ಲಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಈಗಾಗಲೇ ಹಾಲಕ್ಕಿ ಸಮುದಾಯವನ್ನ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಎಲ್ಲ ಕಾರ್ಯಗಳು ನಡೆಯುತ್ತಿರುವಾಗಲೇ ಮತ್ತೆ ಚುನಾವಣಾ ಹತ್ತಿರ ಬಂದ ಕೂಡಲೇ ಇಂತಹ ಪ್ರತಿಭಟನೆಗಳು ಆರೋಪಗಳು ಸಾಮಾನ್ಯವಾಗಿದೆ. ಇದಕ್ಕೆ ನಾವು ಮುಂದಿನ ದಿನದಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದುರು. ಗೌಳಿ ಸಮುದಾಯದವರು ಪ್ರವರ್ಗ ಒಂದರಲ್ಲಿ ಬರುತ್ತಿರುವುದನ್ನ ಹೇಳಿದ್ದಾರೆ ಅವರನ್ನು ಕೂಡ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಪ್ರಕ್ರಿಯೆ ನಡೆದಿದೆ ಎಂದರು.