Advertisement

ಸಬ್ ರಿಜಿಸ್ಟರ್ ಕಚೇರಿಯ ಕಿಟಕಿ ಮುರಿದು ಕಳ್ಳತನಕ್ಕೆ ಯತ್ನ

11:43 AM Jun 23, 2022 | Team Udayavani |

ಕುಣಿಗಲ್: ಇಲ್ಲಿನ ಉಪನೋಂದಣಾಧಿಕಾರಿ ಕಚೇರಿಯ ಕಿಟಕಿಯ ಸರಳನ್ನು ಮುರಿದು, ಕಳ್ಳತನಕ್ಕೆ ಯತ್ನಿಸಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.

Advertisement

ಕಳ್ಳರು ಬುಧವಾರ ಮಧ್ಯ ರಾತ್ರಿಯಲ್ಲಿ ಕಚೇರಿಯ ಕಿಟಕಿ ಕಬ್ಬಿಣ ಮುರಿದು ಕಚೇರಿ ಒಳಗೆ ಪ್ರವೇಶಿಸಿ, ಬೀರುವಿನ ಬೀಗ ಹೊಡೆದು, ಬೀರಿನಲ್ಲಿ ಇದ್ದ ಸೀಡಿ ಬಾಕ್ಸ್ ಗಳನ್ನು ತೆಗೆದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಅಲ್ಲದೆ, ಇತರೆ ಎಲ್ಲಾ ಕಡೆ ಹಣಕ್ಕಾಗಿ ಹುಡುಕಾಡಿದ್ದಾರೆ. ಆದರೆ ಯಾವುದೇ ನಗದು ಸಿಗದ ಕಾರಣ ಬಂದ ದಾರಿಗೆ ಸುಂಕವಿಲ್ಲದಂತೆ ಕಳ್ಳರು ತೆರಳಿದ್ದಾರೆ. ಎಂದಿನಂತೆ ಗುರುವಾರ‌ ಕಚೇರಿಗೆ ಉಪನೊಂದಣಾಧಿಕಾರಿ ಯಶೋದ ಆಗಮಿಸಿದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ.

ಇದನ್ನೂ ಓದಿ:ಕಲ್ಲಡ್ಕ: ಜ್ವರದಿಂದ ಬಳಲುತ್ತಿದ್ದ ಒಂದನೇ ತರಗತಿ ವಿದ್ಯಾರ್ಥಿನಿ ಸಾವು

ಪಟ್ಟಣದ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next