Advertisement

ಯುವಕನ ಅಪಹರಣಕ್ಕೆ ಯತ್ನ: ಬಂಧನ

01:29 AM Aug 11, 2020 | mahesh |

ವಿಟ್ಲ: ಪ್ರೀತಿಸಿ ಮದುವೆಯಾದ ಕಾರಣಕ್ಕೆ ಯುವಕನ ಅಪಹರಣಕ್ಕೆ ಯತ್ನಿಸಿದ ಘಟನೆಗೆ ಸಂಬಂ ಧಿಸಿದಂತೆ ವಿಟ್ಲ ಠಾಣಾಧಿಕಾರಿ ವಿನೋದ್‌ ರೆಡ್ಡಿ ಮತ್ತು ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

Advertisement

ಬಂಧಿತ ಹಳೆಯ ಆರೋಪಿ ವಿಟ್ಲ ನಿವಾಸಿ ಸಾದಿಕ್‌ ಯಾನೆ ಬ್ಲೇಡ್‌ ಸಾದಿ ಕ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈತ ಪುಣಚ ಗ್ರಾಮದ ನಿವಾಸಿ ಅಬ್ದುಲ್‌ ಬಶೀರ್‌ ಅವರನ್ನು ಜು. 29ರಂದು ಅಪಹರಿಸಲು ಯತ್ನಿಸಿದ್ದರು.

ಜು. 29ರಂದು ಅಪರಾಹ್ನ ಬಕ್ರೀದ್‌ ಹಬ್ಬಕ್ಕೆ ಬಟ್ಟೆ ಖರೀದಿಗೆ ಅಬ್ದುಲ್‌ ಬಶೀರ್‌ ವಿಟ್ಲದಲ್ಲಿರುವ ಎಂಪಯರ್‌ ಮಾಲ್‌ಗೆ
ಬಂದಿದ್ದರು. ಆಗ ಅವರ ಪರಿಚಯದ ಸಿದ್ದಿಕ್‌ ಮಾತನಾಡಲಿಕ್ಕಿದೆಯೆಂದು ಕರೆದು ಸ್ಕಾರ್ಪಿ ಯೋದಲ್ಲಿ ಕುಳಿತುಕೊಳ್ಳಲು ಹೇಳಿದಾಗ ಆರೋಪಿ ಸಾ ದಿಕ್‌ ಯಾನೆ ಬ್ಲೇಡ್‌ ಸಾದಿಕ್‌ ಕಾರಿನೊಳಗಿದ್ದ. ಆತನನ್ನು ಗಮನಿಸಿ ಕಾರು ಹತ್ತಲು ಬಶೀರ್‌ ಹಿಂಜರಿದಾಗ ಇಬ್ಬರು ಸೇರಿ ಬಶೀರ್‌ನನ್ನು ಕಾರಿನೊಳಗೆ ಬಲವಂತ ವಾಗಿ ದೂಡಿ ಕೂರಿಸಿಕೊಂಡು ಪುತ್ತೂರು ಕಡೆಗೆ ಹೋಗಿದ್ದು, ಅನಂತರ ಕಾರು ಕಂಬಳಬೆಟ್ಟುವಿನಲ್ಲಿ ಯಾವುದೋ ಕಾರಣಕ್ಕೆ ನಿಲ್ಲಿಸಿದಾಗ ಬಶೀರ್‌ ಕಾರಿನಿಂದ ಜಿಗಿದು ತಪ್ಪಿಸಿಕೊಂಡು ಪರಾರಿಯಾಗಿ ಮನೆಗೆ ಬಂದಿದ್ದ.

ಆ ಬಳಿಕವೂ ಬಶೀರ್‌ ಮೊಬೈಲ್‌ಗೆ ಸಂದೇಶ ಮತ್ತು ಕರೆ ಮಾಡಿ ಕೊಲ್ಲುವುದಾಗಿ ಸಾದಿಕ್‌ ಬೆದರಿಕೆ ಹಾಕುತ್ತಲೇ ಇದ್ದ. ಅಬೂಬಕರ್‌ ಅವರ ಪುತ್ರಿಯನ್ನು ಪ್ರೀತಿಸಿ ಮದುವೆ ಯಾದ ವಿಚಾರದಲ್ಲಿ ಸಾದಿಕ್‌ ಮತ್ತು ಸಿದ್ದಿಕ್‌ ಅಪಹರಣ ಮಾಡಿದ್ದಾರೆ ಮತ್ತು ಕೊಲ್ಲುವ ಸಂಚು ಹೂಡಿದ್ದಾರೆ ಎಂದು ಬಶೀರ್‌ ವಿಟ್ಲ ಠಾಣೆ ಯಲ್ಲಿ ತಡವಾಗಿ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಿದ ವಿಟ್ಲ ಪೊಲೀಸರು ಸಾದಿಕ್‌ನನ್ನು ಸೋಮವಾರ ಬೆಳಗ್ಗೆ ವಿಟ್ಲದಲ್ಲಿ
ಬಂಧಿ ಸಿದ್ದಾರೆ.

ಒಟ್ಟು 14 ಪ್ರಕರಣ
ಸಾದಿಕ್‌ ಮೇಲೆ ವಿಟ್ಲದಲ್ಲಿ 10, ಪುತ್ತೂರು ಗ್ರಾಮಾಂತರದಲ್ಲಿ 1, ಪುತ್ತೂರು ಟೌನ್‌ 2, ಉಪ್ಪಿನಂಗಡಿ ಠಾಣೆಯಲ್ಲಿ 1 ಪ್ರಕರಣ ಸಹಿತ ಒಟ್ಟು 14 ಪ್ರಕರಣಗಳು ದಾಖಲಾಗಿವೆ. ಪುತ್ತೂರು ಶೂಟ್‌ ಔಟ್‌ ಪ್ರಕರಣದ ರೂವಾರಿಯಾಗಿ ಓರ್ವನ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿ ಕಳೆದ ತಿಂಗಳಷ್ಟೆ ಈತ ಹೊರಬಂದಿದ್ದ.

Advertisement
Advertisement

Udayavani is now on Telegram. Click here to join our channel and stay updated with the latest news.

Next