Advertisement

Yadagiri; ವಂದೇ ಭಾರತ್ ರೈಲು ತಡೆಯಲು ಯತ್ನ: ಕರವೇ ಕಾರ್ಯಕರ್ತರ ಬಂಧನ

02:58 PM Mar 12, 2024 | Team Udayavani |

ಯಾದಗಿರಿ: ಯಾದಗಿರಿ ನಗರದ ರೈಲ್ವೆ ನಿಲ್ದಾಣದಲ್ಲಿ ‘ವಂದೇ ಭಾರತ್’ ರೈಲು‌‌ ನಿಲುಗಡೆಗೆ ಆಗ್ರಹಿಸಿ ಕರವೇ ಜಿಲ್ಲಾ ಘಟಕ ಬೃಹತ್ ಪ್ರತಿಭಟನೆ ನಡೆಸಿತು.

Advertisement

ಯಾದಗಿರಿಗೆ ನಿಲ್ದಾಣಕ್ಕೆ ಆಗುತ್ತಿರುವ ತಾರತಮ್ಯವನ್ನು ಮುಂದಿಟ್ಟುಕೊಂಡು ಕರವೇ ಜಿಲ್ಲಾ ಘಟಕದ‌ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ ಅವರ ನೇತೃತ್ವದಲ್ಲಿ ನಗರ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಬೆಳಿಗ್ಗೆ 9 ಗಂಟೆಗೆ ಪ್ರತಿಭಟನೆ ನಡೆಸಿ, ನಿಲ್ಲಬೇಕು,‌ ನಿಲ್ಲಬೇಕು, ವಂದೇ ಭಾರತ್ ರೈಲು‌ ನಿಲ್ಲಬೇಕೆಂದು ಘೋಷಣೆ ಕೂಗಿದರು.

ನಗರದ ರೈಲ್ವೆ ನಿಲ್ದಾಣಕ್ಕೆ 10.30 ಸಮಯಕ್ಕೆ ಹಾದು ಹೋದ ವಂದೇ ಭಾರತ್ ರೈಲನ್ನು ತಡೆಯಲು ರೈಲ್ವೆ ಮುಂಭಾಗದಲ್ಲಿದ್ದ ಕರವೇ ಕಾರ್ಯಕರ್ತರು ನಿಲ್ದಾಣದೊಳಗೆ ನುಗ್ಗಲು ಮಂದಾದರು, ಆದರೆ ಮುಂಜಾಗ್ರತೆಯ ಹಿನ್ನೆಲೆಯಲ್ಲಿ ನಿಲ್ದಾಣದ ಅಂಗಳದಲ್ಲಿ ಬಿಡಾರ ಹೂಡಿದ್ದ ಓರ್ವ ಡಿವೈಎಸ್ಪಿ, 2 ಸಿಪಿಐ, 3 ಪಿಎಸ್.ಐ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಪೊಲೀಸ್ ತುಕಡಿಗಳ‌ ನಿಯೋಜನೆ ಮಾಡಲಾಗಿತ್ತು. ಘೋಷಣೆ ಕೂಗುತ್ತಾ ನಿಲ್ದಾಣದೊಳಕ್ಕೆ ತೆರಳುತ್ತಿದ್ದ ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು, ಜಿಲ್ಲಾ ಪೊಲೀಸ್ ಗ್ರೌಂಡ್ ನಲ್ಲಿ ಇರಿಸಿದರು.

ಪ್ರತಿಭಟನೆಯಲ್ಲಿ ಕರವೇ ತಾಲೂಕಾಧ್ಯಕ್ಷ ಮಲ್ಲು‌ ಮಾಳಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವರಾಧ್ಯ ದಿಮ್ಮೆ, ಅಂಬರೀಶ್ ಹತ್ತಿಮನಿ‌ ಸೇರಿದಂತೆ ಇನ್ನು ಅನೇಕ ಕರವೇ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next