ಮಂಗಳೂರು: ನಗರದಲ್ಲಿ ಮಾದಕ ವಸ್ತು ಕೊಕೇನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಬೋಳೂರು ಸುಲ್ತಾನ್ ಬತ್ತೇರಿ ದತ್ತಪ್ರಸಾದ್ ಲೇಔಟ್ ನಿವಾಸಿ ಮೋನಿಶ್(36)ನನ್ನು ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮತ್ತು ಎಕೊನಾಮಿಕ್ ಆ್ಯಂಡ್ ನಾರ್ಕೋಟಿಕ್ ಠಾಣೆಗಳ ಪೊಲೀಸರು ಬೋಳೂರು ಸುಲ್ತಾನ್ ಬತ್ತೇರಿ ಬಳಿ ಆರೋಪಿಯನ್ನು ಬಂಧಿಸಿದರು. ಆತನಿಂದ 1.60 ಲ. ರೂ. ಮೌಲ್ಯದ ಕೊಕೇನ್, 2 ಮೊಬೈಲ್, ಡಿಜಿಟಲ್ ತೂಕದ ಯಂತ್ರ, ಸ್ಕೂಟರ್ ಋಸಹಿತ 2,81,500 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಮಾದಕ ವಸ್ತು ಕೊಕೇನನ್ನು ಮುಂಬಯಿಯಿಂದ ಅಕ್ರಮವಾಗಿ ಖರೀದಿಸಿ ತಂದು ಮಂಗಳೂರಿನ ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಮಾಹಿತಿ ದೊರೆತ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದರು. ತಪಾಸಣೆ ನಡೆಸಿದಾಗ ಆತನಲ್ಲಿ 16 ಗ್ರಾಂ ಕೊಕೇನ್ ಪತ್ತೆಯಾಗಿದೆ.
ಆರೋಪಿಯು ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಕೊಕೇನ್ ಮಾರುತ್ತಿದ್ದ. ಈ ಜಾಲದಲ್ಲಿ ಹಲವರು ಭಾಗಿಯಾಗಿದ್ದು, ಅವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಯುಕ್ತ ಸಂದೀಪ್ ಪಾಟೀಲ…, ಡಿಸಿಪಿಗಳಾದ ಹನುಮಂತರಾಯ ಮತ್ತು ಲಕ್ಷ್ಮೀ ಗಣೇಶ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಆರ್ ನಾಯ್ಕ…, ಇಕೊನಾಮಿಕ್ ಆ್ಯಂಡ್ ನಾರ್ಕೋಟಿಕ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಾಮಕೃಷ್ಣ, ಸಿಸಿಬಿ ಪಿಎಸ್‌ಐಗಳಾದ ಕಬ್ಟಾಳ್ ರಾಜ್, ಶಂಕರಿ ನಾಯರಿ ಹಾಗೂ ಸಿಬಂದಿ ಕಾರ್ಯಾಚರಣೆ ನಡೆಸಿದ್ದರು.