ಉದಯಪುರ : ರಾಜಸ್ಥಾನದ ಉದಯಪುರದಲ್ಲಿ ರೈಲ್ವೇ ಹಳಿ ಸ್ಫೋಟಿಸುವ ಯತ್ನಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಬಂಧನ ಮಾಡಲಾಗಿದೆ.
ನಾವು ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ, ಅವರಲ್ಲಿ ಒಬ್ಬ ಬಾಲಾಪರಾಧಿಯಾಗಿದ್ದು, ಆರೋಪಿಯು ಈ ಹಿಂದೆಯೂ ಹಿಂದೂಸ್ಥಾನ್ ಝಿಂಕ್ ತೆಗೆದುಕೊಂಡ ಭೂಮಿಗೆ ಬದಲಾಗಿ ಪರಿಹಾರ ಮತ್ತು ಉದ್ಯೋಗದ ಕುರಿತು ವಿವಾದವನ್ನು ಹೊಂದಿದ್ದ ಎಂದು ಎಡಿಜಿ ಎಸ್‌ಒಜಿ/ಎಟಿಎಸ್ ಅಶೋಕ್ ರಾಥೋರ್ ಹೇಳಿದ್ದಾರೆ.
”ವಿಚಾರಣೆ ವೇಳೆ ತಾವು ಯಾರಿಗೂ ತೊಂದರೆ ಕೊಡಲು ಬಯಸಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಅವರು ತಮ್ಮ ವಿವಾದವನ್ನು ಪರಿಹರಿಸಲು ಅಧಿಕಾರಿಗಳ ಗಮನವನ್ನು ಸೆಳೆಯಲು ಮಾತ್ರ ಬಯಸಿದ್ದರು.ಡುಂಗರ್‌ಪುರದ ಸೋಮ್ ನದಿಯ ಬಳಿ ಪತ್ತೆಯಾದ ಜಿಲೆಟಿನ್ ಕಡ್ಡಿಗಳಿಗೂ ಆರೋಪಿಗಳಿಗೂ ಯಾವುದೇ ಸಂಬಂಧವಿಲ್ಲ” ಎಂದು ಅಶೋಕ್ ರಾಥೋಡ್ ತಿಳಿಸಿದ್ದಾರೆ.
ಉದಯಪುರ ಜಿಲ್ಲೆಯ ಜಾವರ್-ಮೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬ್ರಾಡ್ ಗೇಜ್ ರೈಲ್ವೆ ಹಳಿಯಲ್ಲಿ ಸ್ಫೋಟ ಸಂಭವಿಸಿತ್ತು. ಸ್ಥಳೀಯ ಗ್ರಾಮಸ್ಥರು ಬೆಳಗ್ಗೆ ಟ್ರ್ಯಾಕ್ ನೋಡಲು ಆಗಮಿಸಿದಾಗ ಹಳಿ ಒಡೆದಿದ್ದು, ಹಲವು ನಟ್ ಬೋಲ್ಟ್‌ಗಳು ನಾಪತ್ತೆಯಾಗಿದ್ದವು.