Advertisement

ಬೆಂಕಿ ಹಚ್ಚಿ ಕೊಲೆ ಯತ್ನ: ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವು

09:48 AM Jul 10, 2017 | Team Udayavani |

ಕಲಬುರಗಿ: ಬೈಕನಲ್ಲಿ ಆಗಮಿಸಿದ ದುಷ್ಕರ್ಮಿಗಳು ಯುವಕನನ್ನು ಅಪಹರಿಸಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ.

Advertisement

22 ವರ್ಷದ ಶೇಕ್ ನೂರುದ್ದೀನ್ ಮೃತ ಯುವಕ. ಶೇಕ್ ನೂರುದ್ದೀನ್ ಕಲಬುರಗಿ ನಗರದ ಮಿಲ್ಲತ್ ನಗರದ ನಿವಾಸಿಯಾಗಿದ್ದು, ಜುಲೈ 5ರಂದು ನಗರದ ಜಬ್ಬಾರ್ ಪನಶೆನ್ ಹಾಲ್ ಬಳಿ ಆಟೋಗಾಗಿ ಕಾಯುತ್ತಾ ನಿಂತಿದ್ದ ಸಂದರ್ಭ ಎರಡು ಬೈಕ್ ನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ನೂರುದ್ದೀನ್ ಅವರನ್ನು ತಮ್ಮ ಬೈಕಿನಲ್ಲಿ ಅಪಹರಿಸಿ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಘಟನೆಯಿಂದ ನರಳಾಡುತ್ತಿದ್ದ ನೂರುದ್ದೀನ್ನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಾಗಿದ್ದರು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಪೋಷಕರು ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆರೋಪಿಸಿ ಕಲಬುರಗಿಯ ರಿಂಗ್‍ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next