Advertisement
ನಗರದ ಕಾಟ್ವೇ ಭವನದಲ್ಲಿ ಭಾನುವಾರ ವಿವಿಧ ಸಮಾಜಗಳ ಮುಖಂಡರೊಡನೆ ಅಬಿವೃದ್ಧಿ ಕಾರ್ಯಗಳ ಚರ್ಚೆ ನಡೆಸಿದ ಅವರು, ವಿವಿಧ ಸಮಾಜಗಳ ಬೇಡಿಕೆಗಳು ವಿಭಿನ್ನವಾಗಿವೆ. ವೈಯಕ್ತಿಕವಾಗಿ ಎಲ್ಲರ ಭೇಟಿ ಅಸಾಧ್ಯವಾಗಿರುವುದರಿಂದ ಆಯಾ ಸಮಾಜದ ಮುಖಂಡರ ಸಭೆ ಕರೆದು ಅವರ ಅನಿಸಿಕೆ, ಅಭಿಪ್ರಾಯ ಕೇಳುತ್ತಿದ್ದೇನೆ, ಅಹವಾಲು ಸ್ವೀಕರಿಸುತ್ತಿದ್ದೇನೆ ಎಂದರು.
Related Articles
Advertisement
ಪ್ರಾಸ್ತಾವಿಕವಾಗಿ ಮಾತನಾಡಿದ ನಗರಸಭೆ ಸದಸ್ಯ ಶಂಕರ್ ಖಟಾವಕರ್, ಕ್ಷೇತ್ರದ ಇತಿಹಾಸದಲ್ಲೇ ಇಂತಹ ಕಾರ್ಯಕ್ರಮವನ್ನು ಯಾವುದೇ ಶಾಸಕರು ನಡೆಸಿಲ್ಲ. ಪಕ್ಷಾತೀತ, ಜಾತ್ಯತೀತವಾದ ರಾಮಪ್ಪರ ಕಳಕಳಿ, ಈ ಕಾರ್ಯಕ್ರಮದ ಮೂಲಕ ಗೊತ್ತಾಗುತ್ತಿದೆ ಎಂದರು.
ನಗರಸಭೆ ಸದಸ್ಯ ಬಿ.ರೇವಣಸಿದ್ದಪ್ಪ ಮಾತನಾಡಿ, ಕಾರ್ಮಿಕ, ಕಾರ್ಮಿಕ ಮುಖಂಡ, ನಗರಸಭೆ ಸದಸ್ಯ, ಅಧ್ಯಕ್ಷರಾಗಿ ನಂತರ ಶಾಸಕರಾಗಿರುವ ಎಸ್.ರಾಮಪ್ಪರಿಗೆ ಬಡವರ ಸಂಕಷ್ಟದ ಅರಿವಿದೆ ಎಂದರು. ನಗರಸಭೆ ಅಧ್ಯಕ್ಷೆ ಸುಜಾತಾ ರೇವಣಸಿದ್ದಪ್ಪ, ನಗರಸಭೆ ಸದಸ್ಯರಾದ ಕೆ.ಮರಿದೇವ್, ಎಸ್.ಎಂ. ವಸಂತ್, ರತ್ನಮ್ಮ, ಕೃಷ್ಣಸಾ ಭೂತೆ, ಟಿ.ಜೆ. ಮುರಿಗೇಶಪ್ಪ, ಜಿ.ಕೆ. ವಿಠೊಬರಾವ್, ಸಿ.ಎನ್. ಹುಲಿಗೇಶ್, ಎಚ್. ವಿಶ್ವನಾಥಪ್ಪ, ಪರಶುರಾಮ್ ಕಾಟ್ವೆ, ಹಂಚಿನ ನಾಗಣ್ಣ, ರುದ್ರಾಚಾರ್, ಮಂಜುನಾಥ್ ನಿಡಗಲ್ ಮತ್ತಿತರರಿದ್ದರು. ಕಾರ್ಯಕ್ರಮದಲ್ಲಿ ಬಂಜಾರಾ ಸಮಾಜ, ನೇಕಾರ ಸಮುದಾಯ, ಭಾವಸಾರ, ಮೇದಾರ, ನಾಯಕ, ವಾಲ್ಮೀಕಿ, ಎಸ್.ಎಸ್.ಕೆ., ಮರಾಠ, ಛಲವಾದಿ, ಕುರುಹಿನಶೆಟ್ಟಿ, ಆರ್ಯವೈಶ್ಯ, ಕುಂಬಾರ, ಕುರುಬ, ಸ್ವಕುಳಸಾಳಿ, ಪದ್ಮಸಾಲಿ, ಬ್ರಾಹ್ಮಣ, ಭೋವಿ, ಗಂಗಾಮತ, ರೆಡ್ಡಿ ಸಮುದಾಯಗಳ ಮುಖಂಡರು ಅಹವಾಲು ಸಲ್ಲಿಸಿದರು. ಎಲ್ಲ ಸಮಾಜಗಳ ಮುಖಂಡರನ್ನು ಶಾಸಕರು ಸನ್ಮಾನಿಸಿದರು.
ಸಿಂಹ ಕಾಡಿನಲ್ಲಿರಬೇಕು, ನಾಡಿನಲ್ಲಲ್ಲಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಇತ್ತೀಚಿಗೆ ತಮ್ಮ ಜನ್ಮದಿನದಂದು ಸಿಂಹ ಸುಮ್ಮನಿದೆ ಎಂದರೆ ಮಲಗಿದೆ ಎಂದರ್ಥವಲ್ಲ, ಮುಂದಿನ ಹೋರಾಟಕ್ಕೆ ಸಿದ್ಧವಾಗುತ್ತಿದೆ ಎಂದು ಹೇಳಿದ್ದಕ್ಕೆ ಕಾರ್ಯಕ್ರಮದಲ್ಲಿ ತಿರುಗೇಟು ನೀಡಿದ ಎಸ್.ರಾಮಪ್ಪ, ಹುಲಿ, ಸಿಂಹದಂತಹ ಕ್ರೂರ ಮೃಗಗಳು ಕಾಡಿನಲ್ಲಿರಬೇಕೆ ವಿನಃ ನಾಡಿನಲ್ಲಲ್ಲ. ಆದ್ದರಿಂದಲೇ ಮತದಾರರು ಅವರನ್ನು ಮನೆಗೆ ಕಳಿಸಿದ್ದಾರೆ. ಸೋಲಿನ ಹತಾಶೆಯಲ್ಲಿರುವ ಶಿವಶಂಕರ್ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದರು. ತಾಲೂಕಿಗೆ 360 ಕೋ.ರೂ. ಅನುದಾನ ತಂದಿದ್ದೇನೆ ಎಂದು ಹೇಳುತ್ತಾರೆ. ಆದರೆ ಅಷ್ಟೊಂದು ಹಣದಲ್ಲಿ ಯಾವ ಅಭಿವೃದ್ಧಿ ಕಾರ್ಯ ಮಾಡಿದ್ದಾರೋ ಕಾಣುತ್ತಿಲ್ಲ. ವೇದಿಕೆ ಮೇಲೆ ಸುಳ್ಳು ಹೇಳುತ್ತಾ ಹೋದರೆ ಜನರು ನಂಬುವುದಿಲ್ಲ. ಮತ್ತೂಬ್ಬರನ್ನು ಹೀಗಳೆಯುವ ಬದಲು ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ನನ್ನನ್ನ ಟೀಕಿಸುವವರಿಗೆ ತಕ್ಕ ಉತ್ತರ ಕೊಡುತ್ತೇನೆ ಎಂದರು.