ಬೆಂಗಳೂರು: ಮಹಿಳೆಯರ ನೈಟಿ ಹಾಗೂ ಮುಖಗವಸು ಧರಿಸಿ ಫೈನಾನ್ಸ್ ಕಂಪನಿಯ ರೋಲಿಂಗ್ ಶೆಟರ್ ಮುರಿದು ಇಬ್ಬರು ಕಳ್ಳರು ಚಿನ್ನಾಭರಣ ದೋಚಲು ಯತ್ನಿಸಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಗೋಪಾಲನಗರ ಮುಖ್ಯ ರಸ್ತೆಯಲ್ಲಿರುವ ಫೈನಾನ್ಸ್ ಕಂಪನಿಯಲ್ಲಿ ಬುಧವಾರ ತಡರಾತ್ರಿ 2 ಗಂಟೆ ಸುಮಾರಿಗೆ ಇಬ್ಬರು ಕಳ್ಳರು, ಮಹಿಳೆಯರ ನೈಟಿ ಮತ್ತು ಮುಖಗವಸು ಧರಿಸಿ ಮಳಿಗೆಗೆ ಬಂದು, ಗ್ಯಾಸ್ ಕಟರ್‌ನಿಂದ ರೋಲಿಂಗ್ ಶೆಟರ್ ಮುರಿದು ಸ್ಟ್ರಾಂಗ್ ರೂಮ್‌ನ ಲಾಕ್ ಮುರಿದಿದ್ದಾರೆ. ಬಳಿಕ ಚಿನ್ನಾಭರಣ, ನಗದು ಇಟ್ಟಿದ್ದ ಲಾಕರ್ ಮುಟ್ಟುತ್ತಿದ್ದಂತೆ ಸೈರನ್ ಕೂಗಿಕೊಂಡಿದೆ. ಅದರಿಂದ ಹೆದರಿದ ಆರೋಪಿಗಳು ಸ್ಥಳದಲ್ಲೇ ಗ್ಯಾಸ್ ಕಟರ್ ಬಿಟ್ಟು ಪರಾರಿಯಾಗಿದ್ದಾರೆ.
ಇದನ್ನೂ ಓದಿ:ಮೆಡಿಕಲ್ ಸೀಟ್ ನೆಪದಲ್ಲಿ ವಂಚನೆ: ವಂಚಿಸಿದ ಹಣ ಕೇಳಿದ್ದಕ್ಕೆ ಹನಿಟ್ರ್ಯಾಪ್
ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಸಿಸಿ ಕ್ಯಾಮೆರಾ ಪರಿಶೀಲಿಸಲಾಗಿದೆ. ಆದರೆ, ಆರೋಪಿ ಗಳ ಮುಖ ಚಹರೆ ಪತ್ತೆಯಾಗಿಲ್ಲ. ಹೆಚ್ಚಿನ ತಾಂತ್ರಿಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.