Advertisement

ಚುನಾವಣೆ ಸಲುವಾಗಿ ರೈತರನ್ನು ತಮ್ಮತ್ತ ಸೆಳೆಯುವ ಯತ್ನ: ಬಿ.ನಾರಾಯಣಪ್ಪ

01:17 PM Nov 26, 2022 | Team Udayavani |

ಕುರುಗೋಡು: ಕ್ಷೇತ್ರದ ಶಾಸಕ ಜೆ.ಎನ್. ಗಣೇಶ್ ಅವರಿಗೆ ರೈತಪರ ಕಾಳಜಿ ಇಲ್ಲ. ಬದಲಾಗಿ ತಮ್ಮ ಸ್ವಾರ್ಥಕ್ಕಾಗಿ ರೈತರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ರಾಮಸಾಗರ ಬಿ.ನಾರಾಯಣಪ್ಪ ಆರೋಪಿಸಿದರು.

Advertisement

ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕ್ಷೇತ್ರದ ರೈತರು ಪ್ರಮುಖವಾಗಿ ಬೆಳೆದಂತಹ ಭತ್ತ ಹಾಗೂ ಇತರ ಬೆಳೆಗಳಿಗೆ ಸರಕಾರ ಬೆಂಬಲ ಬೆಲೆ ನೀಡಿಲ್ಲ. ಅಲ್ಲದೆ, ಖರೀದಿ ಕೇಂದ್ರಗಳನ್ನು ಆರಂಭಿಸಿಲ್ಲ. ಈ ಕುರಿತು ಶಾಸಕರು ದ್ವನಿ ಎತ್ತದೆ ಮೌನವಾಗಿದ್ದಾರೆ ಎಂದು ಹೇಳಿದರು.

ಕ್ಷೇತ್ರದ ಗ್ರಾಮಗಳಲ್ಲಿನ ಮಾಗಣಿ ರಸ್ತೆಗಳು ಹಾಳಾಗಿ ರೈತರಿಗೆ ತುಂಬಾ ಸಮಸ್ಯೆಯಾಗಿದೆ. ತುಂಗಭದ್ರಾ ನದಿ ನೀರು ಹರಿಸುವುದು ವಿಶೇಷವೇನಲ್ಲ. ಈ ಹಿಂದೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಂಪ್ಲಿಯಿಂದ ಕುರುಗೋಡು ಮಾರ್ಗವಾಗಿ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯವರೆಗೆ 2 ದಿನಗಳ ಕಾಲ ಪಾದಯಾತ್ರೆ ನಡೆಸಲಾಗಿತ್ತು. ಅಂದು ರೈತರ ಹೋರಾಟದೊಂದಿಗೆ ಭಾಗಿಯಾಗಿ ರೈತರ ಪರ ನಿಲ್ಲದ ಶಾಸಕರು ಇಂದು ತಮ್ಮ ಚುನಾವಣಾ ಲಾಭಕ್ಕಾಗಿ ಸಭೆ, ನಾನಾ ಸಮಾರಂಭಗಳ ಹೆಸರಲ್ಲಿ ಇಲ್ಲಸಲ್ಲದ ಆಶ್ವಾಸನೆ ನೀಡುತ್ತಾ ರೈತರನ್ನು ತಮ್ಮತ್ತ ಸೆಳೆಯುವಂತಹ ಯತ್ನ ಮಾಡುತ್ತಿದ್ದಾರೆ ಎಂದರು.

ಈ ಎಲ್ಲ ಬೆಳವಣಿಗೆಗಳನ್ನು ಕ್ಷೇತ್ರದ ರೈತರು ಗಮನಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಶಾಸಕರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next