ನವದೆಹಲಿ: ಸ್ವಾತಂತ್ರ್ಯ ಹೋರಾಟದಲ್ಲಿನ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಕೊಡುಗೆಗಳನ್ನು ಹತ್ತಿಕ್ಕಲು ಪ್ರಯತ್ನಿಸಲಾಗಿತ್ತು. ಆದರೆ ಇಂದು (ನೇತಾಜಿ ಜನ್ಮದಿನ) ಇಡೀ ದೇಶವೇ ಅವರನ್ನು ನೆನಪಿಸಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಇದನ್ನೂ ಓದಿ:ಪಣಿಯೂರು: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
ಅವರು ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಜನ್ಮ ದಿನದಂದು ಸಮರ್ಪಿಸಲಾದ ಉದ್ದೇಶಿತ ಸ್ಮಾರಕದ ಮಾದರಿಯನ್ನು ಅವರು ವರ್ಚುವಲಿ ಸೋಮವಾರ (23ವರ್ಷ) ಉದ್ಘಾಟಿಸಿ ಮಾತನಾಡಿದರು, ಅಂಡಮಾನ್ ನಿಕೋಬಾರ್ ನಲ್ಲಿ ನೇತಾಜಿ ಸ್ಮಾರಕ ನಿರ್ಮಾಣಗೊಳ್ಳಲಿದೆ ಎಂದರು.
ಈ ಸ್ಮಾರಕವು ಪ್ರವಾಸಿಗರು, ಜನರಲ್ಲಿ ದೇಶಭಕ್ತಿಯ ಭಾವನೆಗಳನ್ನು ತುಂಬುತ್ತದೆ , ಈ ಸಂದರ್ಭದಲ್ಲಿ ಕೇಂದ್ರಾಡಳಿತ ಪ್ರದೇಶ ಅಂಡಮಾನ್ ನಿಕೋಬಾರ್ ದ್ವೀಪದಲ್ಲಿರುವ 21 ದ್ವೀಪಗಳಿಗೆ ಪರಮ ವೀರ್ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಡಲಾಗಿದೆ.
Related Articles
ಅಂಡಮಾನ್-ನಿಕೋಬಾರ್ ದ್ವೀಪದಲ್ಲಿರುವ ದ್ವೀಪಗಳಿಗೆ ಪರಮ್ ವೀರ್ ಚಕ್ರ ಪ್ರರಸ್ತಿ ಪುರಸ್ಕೃತರಾದ ನೈಬ್ ಸುಬೇದಾರ್ ಬನಾ ಸಿಂಗ್, ಕ್ಯಾಪ್ಟನ್ ವಿಕ್ಷಮ್ ಬಾತ್ರಾ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಮೇಜರ್ ಸೋಮನಾಥ್ ಶರ್ಮ, ಸುಬೇದಾರ್ ಮತ್ತು ಕ್ಯಾಪ್ಟನ್ ಕರಮ್ ಸಿಂಗ್ ಸೇರಿ 21 ಮಂದಿಯ ಹೆಸರನ್ನು ದ್ವೀಪಗಳಿಗೆ ಇಡಲಾಗಿದೆ ಎಂದು ವರದಿ ತಿಳಿಸಿದೆ.