Advertisement

ಅಟ್ಟಾರಿ-ವಾಘಾ ರಿಟ್ರೀಟ್‌: ಇನ್ನು ಆನ್‌ಲೈನ್‌ನಲ್ಲೇ ಬುಕಿಂಗ್‌

09:15 PM Dec 06, 2022 | Team Udayavani |

ನವದೆಹಲಿ: ಪಂಜಾಬ್‌ನ ಅಟ್ಟಾರಿ-ವಾಘಾ ಗಡಿಯಲ್ಲಿ ಪ್ರತಿದಿನ ನಡೆಯುವ ಪಥಸಂಚಲನ (ರಿಟ್ರೀಟ್‌) ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವ ಇಚ್ಛೆ ನಿಮಗಿದೆಯೇ? ಇನ್ನು ಮುಂದೆ ನೀವು ಈ ಕಾರ್ಯಕ್ರಮದ ವೀಕ್ಷಣೆಗೆ ಆನ್‌ಲೈನ್‌ನಲ್ಲೇ ಟಿಕೆಟ್‌ ಬುಕ್‌ ಮಾಡಬಹುದು.

Advertisement

2023ರ ಜ.1ರಿಂದ ಈ ಸೌಲಭ್ಯ ಆರಂಭವಾಗಲಿದೆ. ಆಸನ ಬುಕಿಂಗ್‌ಗೆಂದೇ ಗಡಿ ಭದ್ರತಾ ಪಡೆ (ಬಿಎಸ್‌ಎಫ್) //attari.bsf.gov.in ಎಂಬ ವೆಬ್‌ ಪೋರ್ಟಲ್‌ ಆರಂಭಿಸಿದೆ. ಈವರೆಗೆ ರಿಟ್ರೀಟ್‌ ನಡೆಯುವ ಸ್ಥಳಕ್ಕೆ ಹೋದಾಗ, ನಿಮ್ಮ ಗುರುತಿನ ಚೀಟಿ ನೋಡಿ ಬಿಎಸ್‌ಎಫ್ ಯೋಧರೇ ನಿಮಗೆ ಆಸನ ಹಂಚಿಕೆ ಮಾಡುತ್ತಿದ್ದರು. ಇನ್ನು ಮುಂದೆ, ನೀವು ಆನ್‌ಲೈನ್‌ನಲ್ಲೇ ಆಸನವನ್ನು ಕಾಯ್ದಿರಿಸಬೇಕು. ಅದಕ್ಕೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.

48 ಗಂಟೆಗಳ ಮುನ್ನ ಬುಕಿಂಗ್‌ ಮಾಡಬೇಕು. ಆನ್‌ಲೈನ್‌ನಲ್ಲೇ ಫೋಟೋ ಐಡಿ ಕಾರ್ಡ್‌ ವಿವರಗಳನ್ನೂ ನೀಡಬೇಕು. ಬುಕಿಂಗ್‌ ವಿವರಗಳನ್ನು ನಿಮ್ಮ ಮೊಬೈಲ್‌ ಸಂಖ್ಯೆಗೆ ಎಸ್ಸೆಮ್ಮೆಸ್‌ ಮೂಲಕ ರವಾನಿಸಲಾಗುತ್ತದೆ ಎಂದು ಬಿಎಸ್‌ಎಫ್ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next