ಕಾಸರಗೋಡು: ಚಿನ್ಮಯ ವಿದ್ಯಾಲಯದ ಸುವರ್ಣ ಮಹೋತ್ಸವದ ಅಂಗವಾಗಿ ನಿರ್ಮಿಸಲಾದ ಅಟಲ್ ಟಿಂಕರಿಂಗ್ ಲ್ಯಾಬ್ ಚಿನ್ಮಯ ವಿದ್ಯಾಲಯದ ಯಶಸ್ಸಿನ ಕಿರೀಟ ಕ್ಕೇರಿದ ಇನ್ನೊಂದು ಗರಿ.
ಕೇಂದ್ರ ಸರಕಾರದ ಅನುದಾನದಿಂದ ಚಿನ್ಮಯ ವಿದ್ಯಾಲಯ ದಲ್ಲಿ ಸ್ಥಾಪಿಸಲ್ಪಟ್ಟ ಈ ಪ್ರಯೋಗಾಲಯದಲ್ಲಿ ಕಂಪ್ಯೂಟರ್, ತಾಂತ್ರಿಕ, ಗಣಿತ, ವಿಜ್ಞಾನ ಎಂಬಿತ್ಯಾದಿ ವಿಷಯಗಳಿಗೆ ಸಂಬಂಧಿಸಿದ ವಿವಿಧ ಉಪಯುಕ್ತ ಮಾದರಿಗಳನ್ನು ವಿದ್ಯಾರ್ಥಿ ಗಳ ಚಟುವಟಿಕೆಗಳಿಗೆ ಪೂರಕವಾಗುವಂತೆ ಪ್ರದರ್ಶಿಸಲಾಗಿದೆ.
ತ್ರಿಡಿ ಪ್ರಿಂಟ್, ರೊಬೋಟಿಕ್ ಸಲಕರಣೆ ಗಳು, ಸೂಕ್ಷ್ಮದರ್ಶಕ ಉಪಕರಣಗಳು, ದೂರದರ್ಶನ ಲ್ಯಾಪ್‌ಟಾಪ್ಸ್, ಸೆನ್ಸರ್ ಮಾದರಿಗಳು, ಇಲೆಕ್ಟ್ರಾನಿಕ್ ಉಪ ಕರಣ ಗಳು, ಆರ್ಡಿನೋ ಪ್ಯಾಕ್ ಮೊದಲಾದವು ಗಳು ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗೆಗಿನ ಹೆಚ್ಚಿನ ಜ್ಞಾನವನ್ನು ಒದಗಿಸುತ್ತವೆ.
ನುರಿತ ಸಂಪನ್ಮೂಲ ವ್ಯಕ್ತಿಗಳು ಪ್ರಯೋಗಾಲಯವನ್ನು ಸಂದರ್ಶಿಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಕೌಶಲಗಳನ್ನು ಹೊರಹೊಮ್ಮಿಸಲು ನೆರವಾಗುವರು. ಪರಿಸರದ ಇತರ ವಿದ್ಯಾಲಯಗಳ ವಿದ್ಯಾರ್ಥಿಗಳೂ, ಅಧ್ಯಾಪಕರೂ ಅಟಲ್ ಟಿಂಕರಿಂಗ್ ಲ್ಯಾಬ್‌ನ ಪ್ರಯೋಜನವನ್ನು ಪಡೆಯಬಹುದಾಗಿ ಅಧಿಕೃತರು ಘೋಷಿಸಿರುವರು.
ಚಿನ್ಮಯ ವಿದ್ಯಾಲಯದ ಕಂಪ್ಯೂಟರ್ ಅಧ್ಯಾಪಿಕೆ ವಿದ್ಯಾಶ್ರೀ ಅವರು ಈ ಬಗ್ಗೆ ಈಗಾಗಲೇ ತರಬೇತಿ ಹೊಂದಿದ್ದು, ವಿದ್ಯಾರ್ಥಿಗಳಿಗೆ ಇದರ ಉಪಯೋಗಗಳ ಬಗ್ಗೆ ಮಾಹಿತಿ ನೀಡುತ್ತಿದ್ದು ಬಿಡುವಿಲ್ಲದೆ ಕಾರ್ಯವೆಸಗುತ್ತಿದ್ದಾರೆ.