Advertisement

B Dayananda: ಹೋಟೆಲ್‌, ಪಬ್‌, ಡಿಸ್ಕೋಥೆಕ್‌ ಮೇಲೆ ದಾಳಿ, 970 ಕೇಸ್‌ ದಾಖಲು

12:55 PM Oct 18, 2023 | Team Udayavani |

ಬೆಂಗಳೂರು: ನಿಯಮ ಉಲ್ಲಂಘಿಸಿದ ಹೋಟೆಲ್‌, ಪಬ್‌, ಡಿಸ್ಕೋಥೆಕ್‌, ಹುಕ್ಕಾ ಬಾರ್‌ಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ಕೋಟ್ಪಾ ಕಾಯ್ದೆ, ಜೆ.ಜೆ.ಕಾಯ್ದೆ, ಅಬಕಾರಿ ಕಾಯ್ದೆ ಅಡಿ ನಿಯಮ ಉಲ್ಲಂಘಿಸಿದ ಆರೋಪದಡಿ 970 ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಗರದ ಪಬ್, ಡಿಸ್ಕೋಥೆಕ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳನ್ನು ಕೋಟ್ಪಾ ಕಾಯ್ದೆ ಅಡಿ ಧೂಮಪಾನ ವಲಯ ನಿರ್ಮಿಸಬೇಕೆಂದು ನಿಯಮವಿದೆ. ಆದರೆ ಕೆಲ ಮಾಲೀಕರು ನಿಬಂಧನೆ ಉಲ್ಲಂಘಿಸಿದ್ದರು. ಜತೆಗೆ ಅವಧಿ ಮೀರಿ ತೆರೆಯುವುದು, 18 ವರ್ಷದೊಳಗಿನವರಿಗೆ ತಂಬಾಕು, ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಜನರಿಂದ ದೂರುಗಳು ಬಂದಿದ್ದವು. ಹೀಗಾಗಿ ಅ.14, 15ರಂದು ಸಿಸಿಬಿ ಪೊಲೀಸರು ನಗರಾದ್ಯಂತ 1,051 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ನಿಯಮ ಉಲ್ಲಂ ಸಿದ ಆರೋಪದಡಿ 970 ಪ್ರಕರಣಗಳನ್ನು ದಾಖಲಿಸಿ, ದಂಡ ವಸೂಲಿ ಮಾಡಿದ್ದಾರೆ ಎಂದರು.

4,698 ಧೂಮಪಾನ ನಿಷೇಧ ಫ‌ಲಕ: ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಕೋಟ್ಪಾ ಕಾಯ್ದೆಯಡಿ 4,698 ಧೂಮಪಾನ ನಿಷೇಧ ಫ‌ಲಕಗಳನ್ನು ಅಳಡಿಸಲಾಗಿದೆ. ಧೂಮಪಾನ ಮತ್ತು ಮದ್ಯಪಾನ ನಿಷೇಧಿತ ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸುವ ಸಾರ್ವಜನಿಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ನಿಯಮ ಉಲ್ಲಂಘಿಸುವ ಹೊಟೇಲ್, ಪಬ್, ಡಿಸ್ಕೋಥೆಕ್‌, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಮೇಲೆ ದಾಳಿ ಮುಂದುವರಿಯಲಿದ್ದು, ಪದೇ ಪದೆ ನಿಯಮ ಉಲ್ಲಂಘಿಸುವವರ ಮಾರಾಟ ಪರವಾನಗಿ ರದ್ದುಪಡಿಸುವುದಾಗಿಯೂ ಪೊಲೀಸ್‌ ಆಯುಕ್ತರು ಎಚ್ಚರಿಕೆ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next