Advertisement

Constitution ಮೇಲಿನ ದಾಳಿಕೋರರು ಚಾಂಪಿಯನ್ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ: ತೇಜಸ್ವಿ

08:36 PM Dec 14, 2024 | Team Udayavani |

ನವದೆಹಲಿ:’ ದೇಶದಲ್ಲಿ ದಶಕಗಳಿಂದ ನಡೆಯುತ್ತಿರುವ ಬೂಟಾಟಿಕೆ ನಾಟಕದಲ್ಲಿ ಸಂವಿಧಾನದ ಮೇಲಿನ ದಾಳಿಕೋರರು ಸಂವಿಧಾನದ ಚಾಂಪಿಯನ್ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಶನಿವಾರ ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Advertisement

“ಭಾರತದ ಸಂವಿಧಾನದ 75 ವರ್ಷಗಳ ಅದ್ಭುತ ಪಯಣ” ಕುರಿತು ಎರಡು ದಿನಗಳ ಚರ್ಚೆಯಲ್ಲಿ ಭಾಗವಹಿಸಿದ ಬೆಂಗಳೂರು ದಕ್ಷಿಣ ಸಂಸದ, ”ಕಾಂಗ್ರೆಸ್‌ನಂತಹ ಪಕ್ಷಗಳು ಭಾರತವನ್ನು ನಾಗರಿಕ ರಾಜ್ಯ ಅಥವಾ ರಾಷ್ಟ್ರವೆಂದು ಪರಿಗಣಿಸದೆ ಕೇವಲ ಹಾಚ್‌ಪಾಚ್ ಯೂನಿಯನ್ ಆಫ್ ಸ್ಟೇಟ್ಸ್ ಬಿಂಬಿಸಿವೆ” ಎಂದು ಆರೋಪಿಸಿದರು.

“ಸಂವಿಧಾನದ ಮೇಲಿನ  ಆಕ್ರಮಣಕಾರರು ತಮ್ಮನ್ನು ತಾವು ಸಂವಿಧಾನದ ಚಾಂಪಿಯನ್ ಎಂದು ಬಿಂಬಿಸಿಕೊಳ್ಳುವ ದೊಡ್ಡ ಬೂಟಾಟಿಕೆ ನಾಟಕವನ್ನು ಬಹಳ ಸಮಯದಿಂದ ಈ ದೇಶದಲ್ಲಿ ನಡೆಸಲಾಗುತ್ತಿದೆ. ಈ ಬೂಟಾಟಿಕೆಯನ್ನು ಬಯಲಿಗೆಳೆಯಬೇಕು” ಎಂದು ಕಿಡಿ ಕಾರಿದರು.

ಸಂವಿಧಾನದಲ್ಲಿ “ಸಮಾಜವಾದಿ” ಮತ್ತು “ಜಾತ್ಯತೀತ” ಪದಗಳ ಅಳವಡಿಕೆಯು ಅದನ್ನು ಕಠಿನಗೊಳಿಸುವ ಪ್ರಯತ್ನವಾಗಿದೆ ಎಂದು ಸೂರ್ಯ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next