Advertisement

ಅನಧಿಕೃತ ಖಾಸಗಿ ಆಸ್ಪತ್ರೆ ಮೇಲೆ ದಾಳಿ

02:50 PM Dec 07, 2018 | Team Udayavani |

ಕಲಬುರಗಿ: ನಗರದಲ್ಲಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಬೀಗ ಜಡಿದು ಬಿಸಿ ಮುಟ್ಟಿಸಿದ್ದಾರೆ. ಅವಧಿ ಮುಗಿದ ನಂತರವೂ ನೋಂದಣಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸದೆ ಇರುವ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ ಮಾಡಿ ನವೀಕರಣಕ್ಕೆ ಅವಧಿ ವಿಸ್ತರಿಸಲಾಗಿತ್ತು.

Advertisement

ಆದರೂ, ಕೆಲವು ಖಾಸಗಿ ಆಸ್ಪತ್ರೆಗಳನ್ನು ಹೊರತು ಪಡಿಸಿ ಬಹಳಷ್ಟು ಆಸ್ಪತ್ರೆಗಳು ನವೀಕರಿಸದೆ ಕಾರ್ಯ ನಿರ್ವಹಿಸುತ್ತಿದ್ದವು. ನೋಂದಣಿ ನವೀಕರಣಕ್ಕೆ ಎರಡು ಬಾರಿ ಅವಕಾಶ ನೀಡಿದ್ದರೂ ರಾಜಾರೋಷವಾಗಿ ಖಾಸಗಿ ಆಸ್ಪತ್ರೆಗಳು ನಡೆಯುತ್ತಿದ್ದವು.

ಅಲ್ಲದೇ, ನಕಲಿ ವೈದ್ಯರು ಆರಂಭಿಸಿದ ಖಾಸಗಿ ಕ್ಲಿನಿಕ್‌ ಗಳನ್ನು ತಕ್ಷಣವೇ ಮುಚ್ಚಿ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳು ಹಾಗೂ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಅಧ್ಯಕ್ಷರು ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಮಾಧವರಾವ್‌ ಕೆ. ಪಾಟೀಲ, ತಾಲೂಕು ಆರೋಗ್ಯಾಧಿಕಾರಿ ಡಾ| ರಾಜಕುಮಾರ ಕುಲಕರ್ಣಿ, ಜಿಲ್ಲಾ ಆಯುಷ್ಯ ಅಧಿಕಾರಿ ಡಾ| ನಾಗರತ್ನ ಚಿಮ್ಮಲಗಿ, ಭಾರತೀಯ
ವೈದ್ಯಕೀಯ ಸಂಘದ ಅಧ್ಯಕ್ಷ ಡಾ| ವಿಜಯ ಕುಮಾರ ಕಪ್ಪಿಕೇರಿ ನೇತೃತ್ವದಲ್ಲಿ ಏಳು ತಂಡಗಳು ದಿಢೀರ್‌ ದಾಳಿ ನಡೆಸಿದವು.

ನೋಂದಣಿ ನವಿಕರಣಗೊಳಿಸದ ಆಸ್ಪತ್ರೆಗಳು-23, ನೋಂದಣಿ ಮಾಡಿಸದೆ ಇರುವ ಅಸ್ಪತ್ರೆಗಳು-6, ಮುಚ್ಚಿರುವ ಆಸ್ಪತ್ರೆಗಳು-12, ಮತ್ತು ನವಿಕರಣಗೊಳಿಸಿದ ಆಸ್ಪತ್ರೆಗಳು-15 ಸೇರಿದಂತೆ ಒಟ್ಟು 56 ಆಸ್ಪತ್ರೆಗಳನ್ನು ಪರಿಶೀಲಿಸಿ, ಪರವಾನಗಿ ಇಲ್ಲದ ಆಸ್ಪತ್ರೆಗಳಿಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. ಡಾ| ವೇಣುಗೋಪಾಲ, ಡಾ| ರಿಯಾಜ್‌ ಸುಳ್ಳದ, ಡಾ| ಬಾಬುರಾವ್‌ ಚವ್ಹಾಣ, ಡಾ| ಮುಕುಂದ ಕುಲಕರ್ಣಿ, ಡಾ| ಸಂಧ್ಯಾರಾಣಿ, ಡಾ| ಆನಂದ, ಡಾ| ಸುನೀಲ ಶೇರಿಕಾರ, ಡಾ| ಕೆ.ಬಿ. ಬಬಲಾದಿ, ಡಾ| ಮಾರುತಿರಾವ್‌ ಕಾಂಬಳೆ, ಡಾ| ಆರ್‌.ಸಿ. ಹೂಗಾರ, ಡಾ| ರೇಣುಕಾ ಕಟ್ಟಿ,
ಡಾ| ನಸಿರೋದ್ದಿನ್‌ ಮತ್ತು ಪುಂಡಲಿಕ ಗಂಜಿ, ಮಹೇಶಸಿಂಗ್‌ ಠಾಕೂರ, ರವಿ, ಆಕಾಶರೆಡ್ಡಿ ತಂಡದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next