Advertisement

ಶಿವಾನಂದ ಸ್ವಾಮೀಜಿ ಮೇಲೆ ಹಲ್ಲೆ: ಸೂಕ್ತ ಕ್ರಮಕ್ಕೆ ಒತ್ತಾಯ

12:27 PM Jun 02, 2020 | Suhan S |

ಕೊಪ್ಪಳ: ಕಲಬುರಗಿಯ ಅಫಜಲಪುರ ತಾಲೂಕಿನ ರೇವೂರು ಗ್ರಾಮದ ಶಿವಯೋಗಿ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳ ಮೇಲೆ ಪೊಲೀಸ್‌ ಶರಣಗೌಡ ಅವರು ಹಲ್ಲೆ ಮಾಡಿದ್ದು, ಕೂಡಲೇ ಅವರನ್ನ ಸೇವೆಯಿಂದ ವಜಾ ಮಾಡಬೇಕೆಂದು ಒತ್ತಾಯಿಸಿ ವೀರಶೈವ ಲಿಂಗಾಯತ ಯುವ ವೇದಿಕೆ ಹಾಗೂ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ಸೋಮವಾರ ಎಸ್ಪಿಗೆ ಮನವಿ ಸಲ್ಲಿಸಲಾಯಿತು.

Advertisement

ಸ್ವಾಮೀಜಿ ಶಿವಾನಂದ ಶಿವಾಚಾರ್ಯರು ಭಕ್ತರಿಂದ ಧಾನ್ಯ ಸಂಗ್ರಹಕ್ಕೆಂದು ತೆರಳುವ ವೇಳೆ ಅರ್ಜುಣಗಿ ತಾಂಡಾ ಚೆಕ್‌ಪೋಸ್ಟ್‌ ಬಳಿ ಪೇದೆ ಶರಣಗೌಡ ಅವರು ಸ್ವಾಮೀಜಿಗೆ ಬಾಸುಂಡೆ ಬರುವಂತೆ ಹೊಡೆದಿದ್ದು ಅಮಾನವೀಯ. ಪೇದೆಯನ್ನು ಅಮಾನತು ಮಾಡಲಾಗಿದೆ. ಆದರೆ ಕೂಡಲೇ ಆತನನ್ನು ಸೇವೆಯಿಂದ ವಜಾ ಮಾಡಬೇಕೆಂದು ಯುವ ವೇದಿಕೆ ಆಗ್ರಹಿಸಿತು.

ಇನ್ನೂ ಮಹಾರಾಷ್ಟ್ರದ ರುದ್ರಪಶುಪತಿ ಅವರನ್ನು ಹತ್ಯೆ ಮಾಡಲಾಗಿದೆ. ಈ ಪ್ರಕರಣ ನ್ಯಾಯಾಂಗ ತನಿಖೆಗೆ ಒಳಪಡಿಸಿ ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಗರದಲ್ಲಿ ಸ್ವಾಮೀಜಿಗಳು, ಯುವ ವೇದಿಕೆ ಸದಸ್ಯರು ಒತ್ತಾಯಿಸಿ ಎಸ್ಪಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next