Advertisement

ಆರೆಸ್ಸೆಸ್‌ ಕಾರ್ಯಕರ್ತರ ಹತ್ಯೆ: ನ್ಯಾಯಾಂಗ ತನಿಖೆಗೆ ಆಗ್ರಹ

09:45 AM Aug 05, 2017 | Team Udayavani |

ಹೊಸದಿಲ್ಲಿ: ಕೇರಳದಲ್ಲಿ ನಡೆದಿರುವ ಆರ್‌ಎಸ್‌ಎಸ್‌ ಕಾರ್ಯಕರ್ತರ ‘ರಾಜಕೀಯ ಹತ್ಯೆ’ ಪ್ರಕರಣಗಳ ನ್ಯಾಯಾಂಗ ತನಿಖೆಯಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಸ್‌) ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಆಗ್ರಹಿಸಿದ್ದಾರೆ. 

Advertisement

‘2016ರಿಂದ ಈವರೆಗೆ ಕೇರಳದಲ್ಲಿ 16 ಆರೆಸ್ಸೆಸ್‌ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ರಾಜ್ಯದ ಬಡವರು ಹಾಗೂ ಹಿಂದುಳಿದ ವರ್ಗಗಳ ಕಾರ್ಮಿಕರಿಗೆ ಸಂಘದ ಸದಸ್ಯತ್ವ ನೀಡುವ ಮೂಲಕ ಆರ್‌ಎಸ್‌ಎಸ್‌ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳುತ್ತಿದೆ. ಇದನ್ನು ಸಹಿಸದ ಆಡಳಿತ ಪಕ್ಷ ಸಿಪಿಎಂ, ಸಂಘ ಪರಿವಾರದ ಸದಸ್ಯರ ಹತ್ಯೆ ಮಾಡುತ್ತಿದೆ. ಹತ್ಯೆಗಳ ಕುರಿತು ಕೂಡಲೇ ನ್ಯಾಯಾಂಗ ತನಿಖೆಯಾಗಬೇಕು,’ ಎಂದು ಅವರು ಆಗ್ರಹಿಸಿದ್ದಾರೆ. ಇದೇ ವೇಳೆ, ಕೇರಳದ ರಾಜಕೀಯ ಅಶಾಂತಿಗೆ ಸಂಬಂಧಿಸಿ ಬಿಜೆಪಿ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಸಿಪಿಎಂ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next