Advertisement

ಕಲಬುರಗಿ: ಗಾಂಜಾ ದಂಧೆಕೋರರಿಂದ ಸಿಪಿಐ- ಪೊಲೀಸರ ಮೇಲೆ ಮಾರಣಾಂತಿಕ ದಾಳಿ

12:04 PM Sep 24, 2022 | Team Udayavani |

ಕಲಬುರಗಿ: ಗಾಂಜಾ ಬೆಳೆಯುತ್ತಿದ್ದ ತಂಡ ಪತ್ತೆ ಮಾಡಲು ಮಹಾರಾಷ್ಟ್ರಕ್ಕೆ ತೆರಳಿದ್ದ ಕಲಬುರಗಿ ಗ್ರಾಮೀಣ ಸಿಪಿಐ ಹಾಗೂ ಪೊಲೀಸರ ಮೇಲೆ ನಲವತ್ತು ಜನರ ತಂಡ ಮಾರಣಾಂತಿಕ ಹಲ್ಲೆ ಮಾಡಿದೆ.

Advertisement

ಕಳೆದ ರಾತ್ರಿ ಒಂಬತ್ತು ಗಂಟೆ ಸಮಯದಲ್ಲಿ ಮಹಾರಾಷ್ಟ್ರದ ಉಮ್ಮರ್ಗಾ ತಾಲೂಕಿನ ತರೂರಿ ಬಳಿ ಗಾಂಜಾ ಬೆಳೆಯುತ್ತಿದ್ದ ಗ್ಯಾಂಗ್ ಪತ್ತೆ ಮಾಡಲು ಹೋಗಿದ್ದ ಶ್ರೀಮಂತ ಇಲ್ಲಾಳ್ ಮತ್ತು ಸಿಬ್ಬಂದಿ ಮೇಲೆ ಸುಮಾರು 40 ಜನರ ತಂಡ ದಿಢೀರನೆ ದಾಳಿ ಮಾಡಿದೆ.‌

ಗಂಭೀರವಾಗಿ ಗಾಯಗೊಂಡ ಸಿಪಿಐ ಶ್ರೀಮಂತ ಇಲ್ಲಾಳ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸಿಪಿಐ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದು, ಚಿಕಿತ್ಸಾ ಕಾರ್ಯ ಮುಂದುವರೆದಿದೆ.

ಆಸ್ಪತ್ರೆಯ ಡಾ.ಸುದರ್ಶನ್ ಲಾಖೆ, ಡಾ.ರಾಕೇಶ್ ನೇತ್ರತ್ವದಲ್ಲಿ ಚಿಕಿತ್ಸೆ ನಡೆದಿದೆ. ಮಾಧ್ಯಮಗಳಿಗೆ ಖಾಸಗಿ ಆಸ್ಪತ್ರೆಯ ವೈದ್ಯ ಡಾ ಸುದರ್ಶನ ಹೇಳಿಕೆ ನೀಡಿದ್ದು, ಸದ್ಯ ಶ್ರೀಮಂತ್ ಇಲ್ಲಾಳ. ಕಂಡಿಷನ್ ಕ್ರಿಟಿಕಲ್ ಇದೆ. ದೇಹದ ವಿವಿದಡೆ ಗಾಯಗಳಾಗಿವೆ. ಪಕ್ಕೆಲಬು, ಮುಖದ ಎಲಬುಗಳು ಮುರಿದಿವೆ. ‌ಮೆದಳಿನ ಕೆಲ ಭಾಗಕ್ಕೆ ಗಾಯಗಳಾಗಿದ್ದು, ಮೆದುಳಿನಲ್ಲಿ ರಕ್ತಸ್ರಾವ ಕೂಡಾ ಆಗಿದೆ. ಮುಂಜಾನೆ ನಾಲ್ಕು ಗಂಟೆಗೆ ಆಸ್ಪತ್ರೆಗೆ ಬಂದಿದ್ದಾರೆ. ಅವರ ಆರೋಗ್ಯ ಸುಧಾರಣೆಗೆ ಎಲ್ಲಾ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ವೆಂಟಿಲೇಟರ್ ನಲ್ಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಇನ್ ದಿ ಏರ್.. ಶ್ರೀಶಾಂತ್ ಟೇಕ್ಸ್ ಇಟ್…: ಮೊದಲ ಟಿ20 ವಿಶ್ವಕಪ್ ಗೆಲುವಿಗೆ 15ರ ಸಂಭ್ರಮ

Advertisement

ಎಸ್ಪಿ ಇಶಾ ಪಂತ ಆಸ್ಪತ್ರೆಗೆ ಭೇಟಿ ನೀಡಿ, ಗಾಂಜಾ ಬೆಳೆ ಬೆಳೆಯೋ ಬಗ್ಗೆ ಮಾಹಿತಿ ಹಿನ್ನೆಲೆ ನಮ್ಮ ಸಿಬ್ಬಂದಿ ದಾಳಿ ಮಾಡಲು ಹೋಗಿದ್ದರು.‌ ಹೋದ ಮೇಲೆ ಗೊತ್ತಾಗಿದೆ ಅದು ಮಹಾರಾಷ್ಟ್ರ ಗಡಿ ಅಂತ. ಮಹಾರಾಷ್ಟ್ರದ ಉಮ್ಮರ್ಗಾ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಲು ಒಂದು ತಂಡ ಹೋದರೆ ಸಿಪಿಐ ಶ್ರೀಮಂತ್ ಇಲ್ಲಾಳ್ ಮತ್ತು ಕೆಲ ಸಿಬ್ಬಂದಿ ಸ್ಥಳದಲ್ಲೇ ಇದ್ದರು.  ಅಲ್ಲಿ ಮೂವತ್ತಕ್ಕೂ ಹೆಚ್ಚು ಗಾಂಜಾ ಗಿಡಗಳು ಕೂಡಾ ಸಿಕ್ಕಿದ್ದವು. ಆದರೆ ಮೂವತ್ತಕ್ಕೂ ಹೆಚ್ಚು ಜನ ದಿಢೀರನೆ ಅಟ್ಯಾಕ್ ಮಾಡಿದ್ದಾರೆ. ನಮ್ಮ ಸಿಪಿಐ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ. ಇದೀಗ ಅವರ ಆರೋಗ್ಯದ ಬಗ್ಗೆ ಎಲ್ಲಾ ಕ್ರಮ ಕೈಗೊಳ್ಳುತ್ತಿದ್ದೇವೆ. ಅಗತ್ಯ ಬಿದ್ದರೆ ಏರ್ ಲಿಫ್ಟ್ ಮಾಡಿ ಬೇರೆ ಕಡೆ ಚಿಕಿತ್ಸೆ ಕೊಡಿಸುವ ಬಗ್ಗೆ ಕೂಡಾ ಚಿಂತನೆ ನಡೆದಿದೆ. ಗೃಹ ಸಚಿವರು, ಎಡಿಜಿಪಿ ಎಲ್ಲರೂ ಮಾತನಾಡಿದ್ದು ಚಿಕಿತ್ಸೆಗೆ ಬೇಕಾದ ಎಲ್ಲಾ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಎಂದು ತಿಳಿಸಿದರು.

ಡಿಸಿ ಭೇಟಿ: ಶ್ರೀಮಂತ ಇಲ್ಲಾಳ ದಾಖಲಾಗಿರುವ ಖಾಸಗಿ ಆಸ್ಪತ್ರೆಗೆ ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಎಸ್ಪಿ ಇಶಾ ಪಂತ್ ಭೇಟಿ ವೈದ್ಯರು ಮತ್ತು ಕುಟುಂಬದವರ ಜೊತೆ ಮಾತುಕತೆ ನಡೆಸಿದರು. ಎಸ್ಪಿ, ಡಿಸಿ ಅವರು ಶ್ರೀಮಂತ್ ಇಲ್ಲಾಳ್ ಆರೋಗ್ಯದ ಸ್ಥಿತಿ ಬಗ್ಗೆ ಮಾಹಿತಿ ಪಡೆದರು.‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next