ದುಬೈ: 2018ರಲ್ಲಿ ಇರಾನ್‌ನ ಮಿಲಿಟರಿ ಪೆರೇಡ್ ಮೇಲೆ ದಾಳಿ ನಡೆಸಿ, ಕನಿಷ್ಠ 25 ಮಂದಿಯ ಸಾವಿಗೆ ಕಾರಣನಾದ ಇರಾನಿಯನ್-ಸ್ವಿಡಿಶ್ ದ್ವಿಪೌರತ್ವ ಹೊಂದಿದ್ದ ವ್ಯಕ್ತಿಯನ್ನು ಶನಿವಾರ ಗಲ್ಲಿಗೇರಿಸಲಾಗಿದೆ. ಫರಾಜೊಲ್ಲಾ ಚಾಹಬ್ ಅಲಿಯಾಸ್ ಹಬೀಬ್ ಅಸೌದ್ ಗಲ್ಲಿಗೇರಿಸಲ್ಪಟ್ಟ ವ್ಯಕ್ತಿ. ಈತ ಆಹ್ವಾಜ್ ವಿಮೋಚನೆಗೆ ಹೋರಾಡುತ್ತಿರುವ ಅರಬ್ ಹೋರಾಟ ಚಳವಳಿಯ ನಾಯಕನಾಗಿದ್ದ. ಈ ಸಂಘಟನೆಯು ಇರಾನ್‌ನ ತೈಲ ಸಮೃದ್ಧ ಖುಜೆಸ್ತಾನ್ ಪ್ರಾಂತ್ಯದಲ್ಲಿ ತೈಲ ಪೈಪ್‌ಲೈನ್ ಮೇಲಿನ ಬಾಂಬ್ ದಾಳಿ ಮತ್ತು ಇತರೆ ದಾಳಿಗಳಲ್ಲಿ ಭಾಗಿಯಾಗಿದೆ. 2018ರ ಮಿಲಿಟರಿ ಪೆರೇಡ್ ಮೇಲಿನ ದಾಳಿಯನ್ನು ತಾನೇ ನಡೆಸಿದ್ದಾಗಿ ಈ ಸಂಘಟನೆ ಹೊಣೆ ಹೊತ್ತುಕೊಂಡಿತ್ತು. ಈ ದಾಳಿಗೆ ಸಂಬಂಧಸಿದಂತೆ ಇರಾನ್ ಪೊಲೀಸರು ಚಾಹಬ್‌ನನ್ನು ಬಂಧಿಸಿದ್ದರು.
Advertisement
ಮಿಲಿಟರಿ ಪೆರೇಡ್ ಮೇಲೆ ದಾಳಿ: ಇರಾನ್‌ನಲ್ಲಿ ವ್ಯಕ್ತಿಗೆ ಗಲ್ಲು
09:54 PM May 06, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.