ಬಂಟ್ವಾಳ: ಮೆಲ್ಕಾರಿನ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆಗೆ ದಾಳಿ ನಡೆಸಿದ ಬಂಟ್ವಾಳ ಪೊಲೀಸರು ಆಟಕ್ಕೆ ಬಳಸಿದ್ದ ಚೀಟಿ ಹಾಗೂ ನಗದನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಟ್ವಾಳ ಬಡ್ಡಕಟ್ಟೆ ನಿವಾಸಿ ಗುರುರಾಜ್ ಪ್ರಕರಣದ ಆರೋಪಿಯಾಗಿದ್ದು, ಮೆಲ್ಕಾರಿನಲ್ಲಿ ಮಟ್ಕಾ ಆಡುತ್ತಿರುವ ಕುರಿತು ಬಂದ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ನಗರ ಇನ್ಸ್‌ಪೆಕ್ಟರ್ ವಿವೇಕಾನಂದ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ. ಆರೋಪಿಯಿಂದ ಮಟ್ಕಾ ಚೀಟಿ ಹಾಗೂ 2,260 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement