Advertisement

ಬಿಇಒಗೆ ಹಲ್ಲೆ; ಶಿಕ್ಷಕರ ಸಂಘ ಖಂಡನೆ

03:56 PM Aug 06, 2022 | Team Udayavani |

ಕಾಳಗಿ: ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದವೀರಯ್ಯ ರುದ್ನೂರ ಅವರ ಮೇಲೆ ಹಲ್ಲೆ ಮಾಡಿರುವ ಶಿಕ್ಷಕನ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ತಹಶೀಲ್ದಾರ್‌ ನಾಗನಾಥ ತರಗೆ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

Advertisement

ನಂತರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಂತೇಶ ಪಂಚಾಳ ಮಾತನಾಡಿ, ಸರ್ಕಾರಿ ಶಿಕ್ಷಕನಾಗಿ ಮೇಲಧಿಕಾರಿ ಮೇಲೆ ಹಲ್ಲೆ ಮಾಡಿದ್ದು ಸರಿಯಲ್ಲ. ಈ ಕೃತ್ಯ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿ ಎಂದು ಒತ್ತಾಯಿಸಿದರು.

ತಾಲೂಕು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ ಕಲಮೂಡ, ಶಿವಕುಮಾರ ಶಾಸ್ತ್ರೀ, ಶಿವಕುಮಾರ ಬಿರಾದಾರ, ದೈಹಿಕ ಶಿಕ್ಷಕ ರಮೇಶ, ಗಂಗಾಧರ ಸಾವಳಗಿ, ಸಿದ್ಧಮ್ಮ ಶೃಂಗಾರ, ಜಗನ್ನಾಥ ಬಂಡಿ, ಪದ್ಮಾವತಿ ಪಂಚಾಳ, ಸುವರ್ಣ ಪಾಟೀಲ, ಲಕ್ಷ¾ಣ ಚೌವ್ಹಾಣ, ಚಂದ್ರಕಾಂತ ಕುಮ್ಮಣ್ಣ ಇದ್ದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next