Advertisement

ವರ್ಷಾರಂಭಕ್ಕೆ ಉಗ್ರರ ಅಟ್ಟಹಾಸ : ಟರ್ಕಿಯಲ್ಲಿ ಗುಂಡಿನ ದಾಳಿಗೆ 40 ಬಲಿ

09:08 AM Jan 01, 2017 | Team Udayavani |

ಇಸ್ತಾಂಬುಲ್‌ : ಇಲ್ಲಿ ಹೊಸವರ್ಷಾರಂಭದಲ್ಲೇ ಉಗ್ರರು ಅಟ್ಟಹಾಸ ಗೈದಿದ್ದು, ಹೊಸವರ್ಷ ಸಂಭ್ರಮವನ್ನಾಚರಿಸುತ್ತಿದ್ದ  ನೈಟ್‌ ಕ್ಲಬ್‌ನಲ್ಲಿ ಉಗ್ರನೊಬ್ಬ ಮನ ಬಂದಂತೆ ಗುಂಡಿದ ದಾಳಿ ನಡೆಸಿದ್ದು 40 ಮಂದಿ ದಾರುಣವಾಗಿ ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 

Advertisement

ರೆಯಿನಾ ನೈಟ್‌ ಕ್ಲಬ್‌ನಲ್ಲಿ ರಾತ್ರಿ 1.30 ರ ವೇಳೆ ಸಾಂತಾಕ್ಲಾಸ್‌ ವೇಷದಲ್ಲಿ ಬಂದ ಶಸ್ತ್ರಧಾರಿ ಉಗ್ರ ಮೊದಲು ಪೊಲೀಸ್‌ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆಗೈದು ಬಳಿಕ ಅಮಾಯಕರ ಮೇಲೆ ಮನ ಬಂದಂತೆ ಗುಂಡಿನ ಮಳೆಗರೆದಿದ್ದಾನೆ. 

ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್‌ ಪಡೆಗಳು ಮತ್ತು ಸೇನಾ ಪಡೆಗಳು ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದರು. ದಾಳಿ ನಡೆಸಿದ ಉಗ್ರ ಸ್ಥಳದಿಂದ ಪರಾರಿಯಾಗಿದ್ದು ಆತನಿಗಾಗಿ ವ್ಯಾಪಕ ಶೋಧ ನಡೆಸಲಾಗುತ್ತಿರುವ ಬಗ್ಗೆ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next