Advertisement

ಕುಕ್ಕೆ: ಪ್ರವಾಸಿಗರಿಗೆ, ಮಕ್ಕಳಿಗೆ ಹುಚ್ಚುನಾಯಿ ಹಾವಳಿ ಭೀತಿ

11:21 AM Aug 04, 2018 | |

ಸುಬ್ರಹ್ಮಣ್ಯ : ನಗರದಲ್ಲಿ ಹುಚ್ಚು ನಾಯಿಗಳ ಹಾವಳಿ ತೀವ್ರಗೊಂಡಿದೆ. ಇದು ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಇಲ್ಲಿನ ಪಶುವೈದ್ಯ ಆಸ್ಪತ್ರೆಯಲ್ಲಿ ಪಶು ವೈದ್ಯರ ಸಹಿತ ಸಿಬಂದಿ ಕೊರತೆ ಇರುವುದು ದೊಡ್ಡ ಸಮಸ್ಯೆಯಾಗಿದೆ.

Advertisement

ಪಶುಸಂಗೋಪನ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶುವೈದ್ಯ ಆಸ್ಪತ್ರೆ ಕಾಶಿಕಟ್ಟೆ ಬಳಿ ಇದೆ. ಇಲ್ಲಿ ಡಿ ದರ್ಜೆಯ ನೌಕರ ಹೊರತುಪಡಿಸಿ ವೈದ್ಯರ ಸಹಿತ ಯಾವುದೇ ಸಿಬಂದಿ ಇಲ್ಲ. ಇಲ್ಲಿ ಜಾನುವಾರು ಅಧಿಕಾರಿಯಾಗಿ ಈ ಹಿಂದೆ ಕರ್ತವ್ಯದ್ದವರು ಎರಡು ತಿಂಗಳ ಹಿಂದೆ ಜಾನುವಾರು ಅಭಿವೃದ್ಧಿ ಅಧಿಕಾರಿಯಾಗಿ ಭಡ್ತಿ ಹೊಂದಿ ಸುಳ್ಯಕ್ಕೆ ವರ್ಗಾವಣೆಯಾಗಿದ್ದಾರೆ. ಅವರೇ ಇಲ್ಲಿ ಈಗ ನಿಯೋಜನೆ ಮೇರೆಗೆ ಕರ್ತವ್ಯದಲ್ಲಿದ್ದಾರೆ. ಎರಡು ಕಡೆ ಕರ್ತವ್ಯ ನಿರ್ವಹಿಸುವುದರಿಂದ ಹೆಚ್ಚಿನ ಅವಧಿ ಸೇವೆಗೆ ಲಭ್ಯರಾಗುತ್ತಿಲ್ಲ.

ಈ ಆಸ್ಪತ್ರೆ ಸುಬ್ರಹ್ಮಣ್ಯ ಯೇನೆಕಲ್ಲು, ಐನಕಿದು ಹರಿಹರ ಈ ಗ್ರಾಮಗಳ ವ್ಯಾಪ್ತಿ ಹೊಂದಿದೆ. ಸಹಾಯಕ ನಿರ್ದೇಶಕ ಹುದ್ದೆ ಇರುವ ಕಾರಣ ಕೊಲ್ಲಮೊಗ್ರು ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡ ಇದರ ಆಡಳಿತಕ್ಕೆ ಬರುತ್ತದೆ. ಸಹಾಯಕ ನಿದೇಶಕ, ಪಶುವೈದ್ಯ ಪರೀಕ್ಷಕ, ಜಾನುವಾರು ಅ ಕಾರಿ ಹಾಗೂ ಡಿ ದರ್ಜೆ ನೌಕರ ಹುದ್ದೆ ಸಹಿತ ನಾಲ್ಕು ಹುದ್ದೆ ಖಾಲಿ ಇದ್ದು ಡಿ ದರ್ಜೆ ನೌಕರ ಒಬ್ಬರೇ ಈಗ ಕರ್ತವ್ಯದಲ್ಲಿರುವರು. ಕೃಷಿಕರು ತಾವು ಸಾಕಿದ ಪ್ರಾಣಿ-ಪಕ್ಷಿಗಳ ತುರ್ತು ಚಿಕಿತ್ಸೆಗೆ ಈ ಕೇಂದ್ರಕ್ಕೆ ಬರುತ್ತಿದ್ದರು. ಜಾನುವಾರು, ನಾಯಿ, ಆಡು, ಕುರಿ ಕುಕ್ಕುಟ ಹೀಗೆ ಪ್ರಾಣಿ-ಪಕ್ಷಿಗಳಿಗೆ ರೋಗ – ರುಜಿನಗಳು ಕಾಣಿಸಿಕೊಂಡಾಗ, ರೋಗ ನಿವಾರಣೆಗೆ ಔಷಧಿ, ಚುಚ್ಚುಮದ್ದು ಕೊಡಿಸಿ, ತೆರಳುತ್ತಿದ್ದರು. 

ನಿಭಾಯಿಸುವ ಪ್ರಯತ್ನ 
ಭಡ್ತಿ ದೊರೆತ ಕಾರಣ ಸುಳ್ಯಕ್ಕೆ ವರ್ಗಾವಣೆಯಾಗಿದೆ. ಸುಬ್ರಹ್ಮಣ್ಯ ಕೇಂದ್ರದಲ್ಲೂ ನಿಯೋಜನೆ ಮೇರೆಗೆ ಕರ್ತವ್ಯದಲ್ಲಿ ಇರುವೆ. ಸಾಧ್ಯವಾದಷ್ಟು ಈ ಕೇಂದ್ರದಲ್ಲೂ ಸೇವೆಗೆ ತೊಡಗಿಸಿಕೊಂಡಿರುವೆ. 
– ದೇವಿಪ್ರಸಾದ್‌ ಕಾನತ್ತೂರ
 ಜಾನುವಾರು ಅಭಿವೃದ್ಧಿ ಅಧಿಕಾರಿ

ಪ್ರತಿಭಟಿಸುತ್ತೇವೆ
ಇಲಾಖೆ ಕಡೆಯಿಂದ ಪಶುಚಿಕಿತ್ಸಾ ಘಟಕಕ್ಕೆ ತುರ್ತು ಸಿಬಂದಿ ನೇಮಿಸಿ. ಇಲ್ಲವಾದಲ್ಲಿ ಸ್ಥಳೀಯ ಕೃಷಿಕರು, ನಾಗರಿಕರ ಸಹಿತ ಪ್ರತಿಭಟಿಸುತ್ತೇವೆ.
– ರಾಜೇಶ್‌ ಎನ್‌.ಎಸ್‌.
ಗ್ರಾ.ಪಂ. ಸದಸ್ಯ, ಸುಬ್ರಹ್ಮಣ್ಯ

Advertisement

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next