Advertisement

1993 ರ ಮಾದರಿ ದಾಳಿಯ ಬೆದರಿಕೆ : ಎಟಿಎಸ್ ನಿಂದ ಓರ್ವನ ಬಂಧನ

10:50 PM Jan 08, 2023 | Team Udayavani |

ಮುಂಬಯಿ: ಪೊಲೀಸರಿಗೆ ಕರೆ ಮಾಡಿ ನಗರದಲ್ಲಿ 1993 ರ ಮಾದರಿಯ ಸರಣಿ ಬಾಂಬ್ ಸ್ಫೋಟಗಳ ಬೆದರಿಕೆಯೊಡ್ಡಿದ ಒಂದು ದಿನದ ನಂತರ, ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಓರ್ವನನ್ನು ಭಾನುವಾರ ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ಮುಂಬೈ ಪೊಲೀಸ್ ನಿಯಂತ್ರಣ ಕೊಠಡಿಗೆ ಶನಿವಾರ ಸಂಜೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, ಎರಡು ತಿಂಗಳ ನಂತರ ಮಾಹಿಮ್, ಭೆಂಡಿ ಬಜಾರ್, ನಾಗ್ಪಾಡಾ, ಮದನ್‌ಪುರ ಮತ್ತು ಇತರ ಪ್ರದೇಶಗಳಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಲಿವೆ. ಕೋಮು ಗಲಭೆಗಳನ್ನು ನಡೆಸಲು ವಿವಿಧ ರಾಜ್ಯಗಳ ಜನರನ್ನು ಮುಂಬೈಗೆ ಕರೆಸಲಾಗಿದೆ ಎಂದು ಬೆದರಿಕೆ ಹಾಕಿದ್ದ ಎಂದು ಎಟಿಎಸ್ ಅಧಿಕಾರಿ ತಿಳಿಸಿದ್ದಾರೆ.

ಕರೆ ಮಾಡಿದವರನ್ನು ಪತ್ತೆಹಚ್ಚಲು ಎಟಿಎಸ್ ಎರಡು ವಿಶೇಷ ತಂಡಗಳನ್ನು ರಚಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆತನನ್ನು ಮಲಾಡ್‌ನ ಉಪನಗರದಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ.

ಆರೋಪಿಯ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ದೌರ್ಜನ್ಯ, ಭೂಕಬಳಿಕೆ ಸೇರಿದಂತೆ 12 ಪ್ರಕರಣಗಳು ದಾಖಲಾಗಿವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಾರ್ಚ್ 12, 1993 ರಂದು ಮುಂಬೈನಲ್ಲಿ ಕನಿಷ್ಠ 12 ಬಾಂಬ್ ಸ್ಫೋಟಗಳು ಸಂಭವಿಸಿ, 257 ಜನರು ಅಸುನೀಗಿದ್ದರು ಮತ್ತು ಕನಿಷ್ಠ 1,400 ಜನರು ಗಾಯಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next