Advertisement

ಆತ್ಮನಿರ್ಭರ ಭಾರತ ಅದ್ಭುತ ಉಪಕ್ರಮ: ಅಮೆರಿಕ

09:21 PM May 23, 2023 | Team Udayavani |

ವಾಷಿಂಗ್ಟನ್‌: ಭಾರತದಲ್ಲಿ ಈವರೆಗೆ ತಂದಿರುವ ಉಪಕ್ರಮಗಳ ಪೈಕಿ ಆತ್ಮನಿರ್ಭರ ಭಾರತ ಚಿಂತನೆಯು ಮಹತ್ತರವಾದದು. ದೇಶವನ್ನು ಸ್ವಾವಲಂಬಿಗೊಳಿಸುವ ಅದರಲ್ಲಿಯೂ ರಕ್ಷಣಾ ಕ್ಷೇತ್ರವನ್ನು ಸ್ವಾವಲಂಬಿಯಾಗಿಸುವ ಭಾರತದ ಪ್ರಯತ್ನದಲ್ಲಿ ಅಮೆರಿಕ ಪಾಲುದಾರನಾಗಿರುತ್ತದೆ ಎಂದು ಭಾರತ ಮೂಲದ ಅಮೆರಿಕದ ಉನ್ನತ ಅಧಿಕಾರಿ ವಿವೇಕ್‌ ಲಾಲ್‌ ಹೇಳಿದ್ದಾರೆ.

Advertisement

ಜನರಲ್‌ ಆ್ಯಟಾಮಿಕ್ಸ್‌ ಗ್ಲೋಬಲ್‌ ಕಾರ್ಪೋರೇಶನ್‌ನ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಲಾಲ್‌, ಸಂದರ್ಶನವೊಂದರಲ್ಲಿ ಭಾರತದಲ್ಲಿ ಮೋದಿ ಆಡಳಿತದ ಸುಧಾರಣೆ ಕುರಿತು ಮಾತನಾಡಿದ್ದಾರೆ.

ಈ ವೇಳೆ “ಆತ್ಮನಿರ್ಭರ ಭಾರತ ಮೋದಿ ಅವರ ಶ್ರೇಷ್ಠ ಉಪಕ್ರಮವಾಗಿದ್ದು ಅದು ಯಶಸ್ವಿಯಾಗುವುದು ದೀರ್ಘಾವಧಿಯ ಪ್ರಕ್ರಿಯೆಯಾಗಿದೆ. ಮೋದಿ ಅವರ ಕನಸನ್ನು ನನಸು ಮಾಡಲು ಅಮೆರಿಕ ಪಾಲುದಾರನಾಗಲಿದ್ದು ಉಭಯ ರಾಷ್ಟ್ರಗಳ ಜಂಟಿ ಕಾರ್ಯಾಚರಣೆ ಭಾರತಕ್ಕೆ ಮಾತ್ರವಲ್ಲ, ಅಮೆರಿಕಕ್ಕೂ ಯಶಸ್ಸು ನೀಡಲಿದೆ’ ಎಂದಿದ್ದಾರೆ. ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ನಿಶ್ಚಯವಾಗಿರುವ ಹಿನ್ನೆಲೆ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next