Advertisement
ಉಮೇಶ್‌ಪಾಲ್ ಹತ್ಯೆಯ ಪ್ರಮುಖ ಆರೋಪಿಗಳ ಪೈಕಿ ಒಬ್ಬಳಾಗಿರುವ ಪರ್ವೀನ್ ತಂದೆ ಪೊಲೀಸ್ ಪೇದೆಯಾಗಿದ್ದರು. ಮದುವೆಯಾಗುವವರೆಗೆ ಆಕೆಗೆ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. ಅತೀಕ್ ವಿವಾಹದ ಅನಂತರ ಆಕೆಯೂ ಕ್ರಿಮಿನಲ್ ದಾರಿ ಹಿಡಿದಳು ಎನ್ನಲಾಗಿದೆ. ಆಕೆಯ ಪುತ್ರ ಅಸದ್ ಅಹ್ಮದ್‌ನ ಎನ್‌ಕೌಂಟರ್ ಬಳಿಕ ಪರ್ವೀನ್ ಪೊಲೀಸರಿಗೆ ಶರಣಾಗುತ್ತಾಳೆಂಬ ನಿರೀಕ್ಷೆ ಇತ್ತು. ಆದರೆ ಆಕೆ ಪರಾರಿಯಾಗಿದ್ದಾಳೆ. ಅತೀಕ್‌ಹತ್ಯೆಯ ಮೂವರು ಆರೋಪಿಗಳಾದ ಸನ್ನಿ ಸಿಂಗ್, ಲವೆÉàಶ್ ತಿವಾರಿ, ಅರುಣ್ ಮೌರ್ಯನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಪೀಠ ಮೂವರ ಪೊಲೀಸ್ ಕಸ್ಟಡಿಯನ್ನು 4 ದಿನಗಳ ಅವಧಿಗೆ ವಿಸ್ತರಿಸಿದೆ.
ಹತ್ಯೆಗೊಳಗಾಗಿರುವ ಪಾತಕಿ ಅತೀಕ್ ಸಮಾಧಿಗೆ ಪ್ರಯಾಗ್‌ರಾಜ್‌ನಲ್ಲಿ ಕಾಂಗ್ರೆಸ್ ನಾಯಕ ರಾಜ್‌ಕುಮಾರ್ ಸಿಂಗ್ ತ್ರಿವರ್ಣಧ್ವಜ ಹೊದಿಸಿದ್ದಾರೆ. ಅಷ್ಟು ಮಾತ್ರವಲ್ಲ ಅತೀಕ್ ಒಬ್ಬ ಹುತಾತ್ಮ, ಆತನಿಗೆ ಭಾರತರತ್ನ ಕೊಡಬೇಕು ಎಂದು ಹೇಳಿದ್ದಾರೆ. ಇದರಿಂದ ಸಿಟ್ಟಾಗಿರುವ ಕಾಂಗ್ರೆಸ್ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ. ಐವರು ಪೊಲೀಸರ ಅಮಾನತು
ಅತೀಕ್ ಅಹ್ಮದ್, ಅಶ್ರಫ್ನ ಹತ್ಯೆ ಸಂಬಂಧಿಸಿದಂತೆ ಉತ್ತರಪ್ರದೇಶದ 5 ಮಂದಿ ಪೊಲೀಸರನ್ನು ಅಮಾನತು ಗೊಳಿಸಲಾಗಿದೆ. ಅಮಾನತುಗೊಂಡ ಪೊಲೀಸರು ಇವರು ಹತ್ಯೆ ನಡೆದ ಠಾಣಾ ವ್ಯಾಪ್ತಿಯಲ್ಲಿ ಬರುತ್ತಾರೆ.