Advertisement

ತಂದೆಗೆ ಮಗಳ ಸಾವಿನ ಸುದ್ದಿ ತಿಳಿಸದೆನಿರ್ಲಕ್ಷ್ಯ ಮಾಡಿದ್ದ ಎಟಿಐ ಹೇಮಾವತಿ ಅಮಾನತು

01:48 PM Sep 08, 2019 | Suhan S |

ಗಂಗಾವತಿ: ಮಗಳ ಸಾವಿನ ಸುದ್ದಿಯನ್ನು ತಂದೆಗೆ ತಿಳಿಸದೆ ಡ್ಯೂಟಿ ಹಾಕಿದ್ದ ಈಶಾನ್ಯ ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದ ಡಿಪೋ ನಿಯಂತ್ರಣಾಧಿಕಾರಿ ಹೇಮಾವತಿ ಅವರನ್ನು ಅಮಾನತು ಮಾಡಿ ಈಶಾನ್ಯ ಸಾರಿಗೆ ಸಂಸ್ಥೆಯ ಕೊಪ್ಪಳ ಡಿಸಿ ಮಹಮದ್ ಫಯಾಜ್ ಆದೇಶ ಮಾಡಿದ್ದಾರೆ.

Advertisement

ಬುಧವಾರ ಬಾಗಲಕೋಟೆ ಜಿಲ್ಲೆಯ ರಾಂಪೂರ ಗ್ರಾಮದಲ್ಲಿ ಕವಿತಾ(11) ಇವರು ಟೈಪೈಡ್ ಜ್ವರದಿಂದ ಬಳಲಿ ಮೃತಪಟ್ಟಿದ್ದರು . ಮಗಳ ಸಾವಿನ ಸುದ್ದಿಯನ್ನು ಗಂಗಾವತಿ ಡಿಪೋ ದಲ್ಲಿ ಕಂಡಕ್ಟರ್ ಆಗಿರುವ ಮಂಜುನಾಥ ಇವರಿಗೆ ತಿಳಿಸದೆ ಕೊಲ್ಲಾಪುರ ಮಾರ್ಗಕ್ಕೆ ಡ್ಯೂಟಿ ಹಾಕಲಾಗಿತ್ತು. ಕವಿತಾ ಸಾವನ್ನಪ್ಪಿರುವ ಕುರಿತು ಮನೆಯವರು ಗಂಗಾವತಿ ಬಸ್ ಡಿಪೋ ದಲ್ಲಿ ಕರ್ತವ್ಯ ದಲ್ಲಿದ್ದ ನಿಯಂತ್ರಣಾಧಿಕಾರಿ ಗಮನಕ್ಕೆ ತಂದರೂ ಕರ್ತವ್ಯ ಕ್ಕೆ ತೆರಳಿದ್ದ ಮಂಜುನಾಥ ಅವರಿಗೆ ಮಾಹಿತಿ ನೀಡಿರಲಿಲ್ಲ.

ಗುರುವಾರ ಸಂಜೆ ಡ್ಯೂಟಿ ಇಂದ ಇಳಿದ ನಂತರ ಮಂಜುನಾಥ ಗೆ ಗೊತ್ತಾಗಿ ಎಟಿಐ ಹೇಮಾವತಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ಹೃದಯವಿದ್ರಾವಕ ಘಟನೆ ಪತ್ರಿಕೆ ಮತ್ತು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿತ್ತು. ನಂತರ ಈಶಾನ್ಯ ಸಾರಿಗೆ ಹಿರಿಯ ಅಧಿಕಾರಿಗಳಾದ ಡಿಟಿಒ ಗೌಡಗೇರಿ ಮತ್ತು ಡಿಟಿಒ ದೇವಾನಂದ್ ಬಿರದಾರ್ ಶುಕ್ರವಾರ ಮತ್ತು ಶನಿವಾರ ಭೇಟಿ ನೀಡಿ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ  ಈಶಾನ್ಯ ಸಾರಿಗೆ ಸಂಸ್ಥೆಯ ಡಿಸಿ ಅವರಿಗೆ ವರದಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಟಿಐ ಹೇಮಾವತಿ ಅವರನ್ನು ಅಮಾನತು ಮಾಡಲಾಗಿದೆ.

ಮಗಳ ಸಾವಿನ ಸುದ್ದಿ ತಿಳಿಸದೆ ಈಶಾನ್ಯ ಸಾರಿಗೆ ಸಂಸ್ಥೆ ಅಧಿಕಾರಿ ಎಂದು ಉದಯವಾಣಿ ದಿನಪತ್ರಿಕೆಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು. ಈಶಾನ್ಯ ಸಾರಿಗೆ ಸಂಸ್ಥೆ ನೌಕರರು ಮತ್ತು ಎಐಟಿಸಿಯು ಮತ್ತು ಸಿಐಟಿಯು ಕರವೇ ಕಾರ್ಯಕರ್ತರು ಶನಿವಾರ ಬೃಹತ್‌ ಪ್ರತಿಭಟನೆ ನಡೆಸಿ ಎಟಿಐ ಅಧಿಕಾರಿ ಅಮಾನತುಗೊಳಿಸುವಂತೆ ಒತ್ತಾಯಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next