ಶಿರ್ವ/ಕಾಪು: ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿರ್ವ ದ ಸಮಾಜ ಸೇವಕ ಅನಂತ್ರಾಯ ಶೆಣೈ ಅವರ ನೇತ್ರತ್ವದಲ್ಲಿ ಶಿರ್ವ ಪತಂಜಲಿ ಯೋಗ ಸಮಿತಿಯ ಕಚೇರಿ ಯಲ್ಲಿ ಆಟಿ ಅಮಾವಾಸ್ಯೆ ಯಂದು ಹಾಲೆ ಮರದ ಕಷಾಯ ವಿತರಿಸಲಾಯಿತು.
ಜನರು ಜಾತಿ ಮತ ಭೇದವಿಲ್ಲದೆ ಮುಂಜಾನೆ 5 ಗಂಟೆಯಿಂದಲೇ ಕಷಾಯವನ್ನು ಪಡೆದುಕೊಂಡರು. ಬಾಟಲಿಯಲ್ಲಿ ಕಷಾಯ ಮತ್ತು ಮೆಂತೆ ಗಂಜಿ ನೀಡುವ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸುಮಾರು10 ಜನರ ತಂಡವು ಭಾಗವಹಿಸಿದ್ದು ಮುಂಜಾನೆ 7 ಗಂಟೆಯ ವೇಳೆಗೆ 250ಕ್ಕೂ ಹೆಚ್ಚು ಜನ ಕಷಾಯವನ್ನು ಸೇವಿಸಿ ಮನೆಮಂದಿಗೆ ಕೊಂಡೊಯ್ಯಲು ಬಂದಿದ್ದರು.
ಮೂಳೂರು ಆಟಿ ಕಷಾಯ ವಿತರಣೆ
ಮೂಳೂರು ಹಿಂದೂ ರಕ್ಷಾ ವೆಲ್ಪೇರ್ ಟ್ರಸ್ಟ್ ವತಿಯಿಂದ ಆಟಿ ಅಮಾವಾಸ್ಯೆ ಯಂದು ಹಾಲೆ ಮರದ ಕಷಾಯ ವಿತರಿಸಲಾಯಿತು. ನೂರಾರು ಮಂದಿ ಕಷಾಯ ಸ್ವೀಕರಿಸಿದರು.
ಕಾಪು : ಬಿರುವೆರ್ ಕಾಪು ಸೇವಾ ಸಮಿತಿಯ ವತಿಯಿಂದ ಕಾಪು ಪೇಟೆಯಲ್ಲಿ ಹಾಲೆ ಮರದ ತೊಗಟೆಯಲ್ಲಿ ಸಿದ್ದ ಪಡಿಸಿದ ಕಷಾಯ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಗುರುವಾರ ಮುಂಜಾನೆ 3 ಗಂಟೆಗೆ ಇನ್ನಂಜೆ, ಮಡುಂಬು, ಕಾಪು ಮೊದಲಾದ ಕಡೆಗಳಲ್ಲಿ ಹಾಲೆ ಮರದ ಕೆತ್ತೆಯನ್ನು ಸಂಗ್ರಹಿಸಿ ಸಾಂಪ್ರದಾಯಿಕ ಶೈಲಿಯಲ್ಲಿ ಆಟಿದ ಕಷಾಯವನ್ನು ಸಿದ್ಧಪಡಿಸಲಾಗಿದೆ.
ಸುಮಾರು 50 ಲೀಟರ್ ನಷ್ಟು ಹಾಲೆ ಮರದ ಕೆತ್ತೆಯ ಕಷಾಯವನ್ನು ಕಾಪು ಪೇಟೆಯಲ್ಲಿ ನೂರಾರು ಮಂದಿ ನಾಗರಿಕರಿಗೆ ಉಚಿತವಾಗಿ ವಿತರಿಸುವ ಮೂಲಕ ಬಿರುವೆರ್ ಕಾಪು ಸೇವಾ ಸಮಿತಿಯ ಸದಸ್ಯರು ಮಾದರಿಯಾಗಿದ್ದಾರೆ.