Advertisement

ಆ್ಯತ್ಲೆಟಿಕ್ಸ್‌ ಕೂಟ  : 3ನೇ ದಿನ 3 ನೂತನ ಕೂಟ ದಾಖಲೆ

11:17 PM Jan 06, 2022 | Team Udayavani |

ಮೂಡುಬಿದಿರೆ : ಮಂಗಳೂರು ವಿ.ವಿ. ಆಶ್ರಯದಲ್ಲಿ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಸಹಯೋಗ, ಅಸೋಸಿಯೇಶನ್‌ ಆಫ್‌ ಇಂಡಿಯನ್‌ ಯುನಿವರ್ಸಿಟೀಸ್‌ ಸಹಭಾಗಿತ್ವದಲ್ಲಿ ನಡೆಯುತ್ತಿರುವ 81ನೇ ಅಖೀಲ ಭಾರತ ಅಂತರ್‌ ವಿ.ವಿ. ಪುರುಷರ ಆ್ಯತ್ಲೆಟಿಕ್ಸ್‌ ಕೂಟದ ಮೂರನೇ ದಿನವಾದ ಗುರುವಾರ 3 ನೂತನ ಕೂಟ ದಾಖಲೆಗಳು ನಿರ್ಮಾಣಗೊಂಡಿವೆ. 5000 ಮೀ. ಓಟ, ಪೋಲ್‌ವಾಲ್ಟ್ ಮತ್ತು ಡಿಸ್ಕಸ್‌ ತ್ರೋದಲ್ಲಿ ಈ ದಾಖಲೆಗಳು ಮೂಡಿಬಂದವು. ಮಂಗಳೂರು ವಿ.ವಿ. 44 ಅಂಕಗಳೊಂದಿಗೆ ಮುನ್ನಡೆ ಸಾಧಿಸಿದ್ದು, 33 ಅಂಕ ಗಳಿಸಿರುವ ಲವ್ಲಿ ಪ್ರೊಫೆಶನಲ್‌ ವಿ.ವಿ. ದ್ವಿತೀಯ ಸ್ಥಾನದಲ್ಲಿದೆ.

Advertisement

5000 ಮೀ. ಓಟ
5000 ಮೀ. ಓಟದಲ್ಲಿ ಕುರುಕ್ಷೇತ್ರ ಯುನಿವರ್ಸಿಟಿಯ ಪ್ರಿನ್ಸ್‌ (14 ನಿ. 5.48 ಸೆ.) ಕೂಟ ದಾಖಲೆ ನಿರ್ಮಿಸಿದರು. ಹಿಂದಿನ ಕೂಟ ದಾಖಲೆ ಮಂಗಳೂರು ವಿವಿಯ ನರೇಂದ್ರ ಪ್ರತಾಪ್‌ ಸಿಂಗ್‌ (14 ನಿ. 17.77 ಸೆ.) ಅವರದ್ದಾಗಿತ್ತು. ಲವ್ಲಿ ಪ್ರೊಫೆಶನಲ್‌ ಯುನಿವರ್ಸಿಟಿಯ ಅಜಯ್‌ (14ನಿ. 5.87ಸೆ) ದ್ವಿತೀಯ, ಮಹರ್ಷಿ ದಯಾನಂದ ಯುನಿವರ್ಸಿಟಿಯ ಲೋಕೇಶ್‌ ಚೌಧಾರ್‌ (14 ನಿ. 5.88 ಸೆ.) ತೃತೀಯ ಸ್ಥಾನಿಯಾದರು.

ಪೋಲ್‌ವಾಲ್ಟ್ ದಾಖಲೆ
ಪೋಲ್‌ವಾಲ್ಟ್ನಲ್ಲಿ ಕೊಟ್ಟಾಯಂ ಮಹಾತ್ಮಾ ಗಾಂಧಿ ಯುನಿವರ್ಸಿಟಿಯ ಸಿದ್ದಾರ್ಥ್ ಎ.ಕೆ. (4.92 ಮೀ. ) ಅವರಿಂದ ನೂತನ ಕೂಟ ದಾಖಲೆ ನಿರ್ಮಾಣಗೊಂಡಿತು. ಹಿಂದಿನ ಕೂಟ ದಾಖಲೆ (2018) ಯುನಿವರ್ಸಿಟಿ ಆಫ್‌ ಕ್ಯಾಲಿಕಟ್‌ನ ಜೆಸ್ಸನ್‌ ಕೆ.ಜಿ. ಅವರದಾಗಿತ್ತು.(4.91 ಮೀ.). ಕೊಟ್ಟಾಯಂ ಮಹಾತ್ಮಾ ಗಾಂಧಿ ಯುನಿವರ್ಸಿಟಿಯ ಗಾಡ್‌ವಿನ್‌ ದಾಮಿಯನ್‌ ದ್ವಿತೀಯ (4.85 ಮೀ.), ವಿಬಿಎಸ್‌ಪಿಯು, ಜಾನ್‌ಪುರ್‌ನ ಧೀರೇಂದ್ರ ಕುಮಾರ್‌ (4.85 ಮೀ.) ತೃತೀಯ ಸ್ಥಾನಿಯಾದರು.

110 ಮೀ. ಹರ್ಡಲ್ಸ್‌
110 ಮೀ. ಹರ್ಡಲ್ಸ್‌ನಲ್ಲಿ ಆಚಾರ್ಯ ನಾಗಾರ್ಜುನ ಯುನಿವರ್ಸಿಟಿಯ ಎಲ್‌. ಯಶವಂತ್‌ ಕುಮಾರ್‌ ಪ್ರಥಮ (14.32 ಸೆ.), ಯುನಿವರ್ಸಿಟಿ ಆಫ್‌ ಮದ್ರಾಸ್‌ನ ನಿಶಾಂತ್‌ರಾಜ ಜಿ. ದ್ವಿತೀಯ (14.41 ಸೆ.) ಹಾಗೂ ಯುನಿವರ್ಸಿಟಿ ಆಫ್‌ ಕೇರಳದ ಮುಹಮ್ಮದ್‌ ಲಝಾನ್‌ (14.49 ಸೆ.) ತೃತೀಯ ಸ್ಥಾನ ಗಳಿಸಿದರು.

ಡಿಸ್ಕಸ್‌ ತ್ರೋನಲ್ಲಿ ಸಿರ್ಸದ ಚೌಧರಿ ದೇವಿಲಾಲ್‌ ಯುನಿವರ್ಸಿಟಿಯ ವಿಕಾಸ್‌ (55.38 ಮೀ.) ನೂತನ ಕೂಟ ದಾಖಲೆ ಸ್ಥಾಪಿಸಿದರು ಹಿಂದಿನ ದಾಖಲೆ ಪಂಜಾಬ್‌ ಯುನಿವರ್ಸಿಟಿಯ ಗಗನ್‌ದೀಪ್‌ ಸಿಂಗ್‌ (55.33 ಮೀ.) ಅವರದಾಗಿತ್ತು. ಅಭಿನವ್‌, ಲವಿÉ ಪ್ರೊಫೆಶನಲ್‌ ಯುನಿವರ್ಸಿಟಿ (53.58 ಮೀ.) ದ್ವಿತೀಯ; ಭಾನು ಶರ್ಮ, ಮಂಗಳೂರು ವಿವಿ (52.62 ಮೀ.) ತೃತೀಯ ಸ್ಥಾನಿಯಾದರು.

Advertisement

ಡೆಕಥ್ಲಾನ್‌ ಫ‌ಲಿತಾಂಶ: 1. ಯಮನ್‌ದೀಪ್‌ ಶರ್ಮ, ಲವ್ಲಿ ಪ್ರೊಫೆಶನಲ್‌ ವಿವಿ (6779 ಅಂಕ), 2. ಸುನಿಲ್‌ ಕುಮಾರ್‌, ಲವ್ಲಿ ಪ್ರೊಫೆಶನಲ್‌ ವಿವಿ, (6460 ಅಂಕ), 3. ಸ್ಟಾಲಿನ್‌ ಜೋಸ್‌, ತಮಿಳುನಾಡು ಫಿಸಿಕಲ್‌ ಎಜ್ಯುಕೇಶನ್‌ ಆ್ಯಂಡ್‌ ನ್ಪೋರ್ಟ್ಸ್ ಯುನಿವರ್ಸಿಟಿ (6050 ಅಂಕ).

ಇಂದು ಕೂಟ ಮುಕ್ತಾಯ
ಪಂದ್ಯಾವಳಿ ಶುಕ್ರವಾರ ಸಮಾಪನಗೊಳ್ಳಲಿದೆ. ಹಾಫ್‌ ಮ್ಯಾರಥಾನ್‌, 3000 ಮೀ. ಸ್ಟೀಪಲ್‌ ಚೇಸ್‌, ಹ್ಯಾಮರ್‌ ತ್ರೋ, 800 ಮೀ. ಓಟ, ಉದ್ದ ಜಿಗಿತ, 200 ಮೀ. ಓಟ, 400 ಮೀ. ಹರ್ಡಲ್ಸ್‌, ಜಾವೆಲಿನ್‌ ತ್ರೊ, 4×100 ಮೀ. ರಿಲೇ ಮತ್ತು 4×400 ಮೀ. ರಿಲೇ ಸ್ಪರ್ಧೆಗಳ ಅಂತಿಮ ಹಣಾಹಣಿ ನಡೆಯಲಿದೆ.

ಸಮಾರೋಪ ಸಮಾರಂಭ
ಶುಕ್ರವಾರ ಮಂಗಳೂರು ವಿ.ವಿ. ಉಪಕುಲಪತಿ ಡಾ| ಪಿ. ಎಸ್‌. ಯಡಪಡಿತ್ತಾಯ ಅವರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಶಾಸಕ ಉಮಾನಾಥ ಕೋಟ್ಯಾನ್‌ ಪ್ರಶಸ್ತಿ ವಿತರಿಸಲಿದ್ದಾರೆ. ಅದಾನಿ ಯುಪಿಸಿಎಲ್‌ ಗ್ರೂಪ್‌ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಕಿಶೋರ್‌ ಆಳ್ವ, ಮಾಜಿ ಕ್ರೀಡಾ ಸಚಿವ ಕೆ. ಅಭಯಚಂದ್ರ, ಮಂ.ವಿ.ವಿ. ಹಣಕಾಸು ಆಧಿಕಾರಿ ಡಾ| ಬಿ. ನಾರಾಯಣ್‌, ಕುಲಸಚಿವ ಡಾ. ಕಿಶೋರ್‌ ಕುಮಾರ್‌ ಸಿ.ಕೆ., ಮೂಡುಬಿದಿರೆ ಪುರಸಭಾ ಅಧ್ಯಕ್ಷ ಪ್ರಸಾದ್‌ ಕುಮಾರ್‌ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಆತಿಥೇಯ ಆಳ್ವಾಸ್‌ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಸಂಘಟನಾ ಕಾರ್ಯದರ್ಶಿ, ಮಂ.ವಿ.ವಿ. ದೈ.ಶಿ.ವಿಭಾಗ ನಿರ್ದೇಶಕ ಡಾ| ಜೆರಾಲ್ಡ್‌ ಎಸ್‌. ಡಿಸೋಜ ಉಪಸ್ಥಿತರಿರುವರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next