Advertisement

ವಿಶ್ವ ಯೋಗ ದಿನ: ಕ್ರೀಡಾಪಟುಗಳಿಂದಲೂ ಯೋಗಾಸನ

11:18 PM Jun 21, 2022 | Team Udayavani |

ಹೊಸದಿಲ್ಲಿ: ಜೂ. 21ರ ಮಂಗಳವಾರ ವಿಶ್ವ ಯೋಗ ದಿನ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ನಡೆಯಿತು. ಈ ವೇಳೆ ಭಾರತ ಮತ್ತು ವಿದೇಶೀ ಕ್ರೀಡಾಪಟುಗಳೂ ಯೋಗಾಸನಗಳನ್ನು ಮಾಡಿದರು. ಕ್ರಿಕೆಟಿಗರು, ಹಾಕಿ ತಾರೆಯರು, ಕಬಡ್ಡಿ ಪಟುಗಳು, ಬಾಕ್ಸರ್‌ಗಳು ಆಸನಗಳನ್ನು ಮಾಡಿ ಅದನ್ನು ಟ್ವೀಟ್‌ ಮಾಡಿದ್ದಾರೆ. ಮಿಥಾಲಿ ರಾಜ್‌, ಸೂರ್ಯಕುಮಾರ್‌ ಯಾದವ್‌, ಚೇತೇಶ್ವರ ಪೂಜಾರ, ರಾಣಿ ರಾಂಪಾಲ್‌, ನಿಖತ್‌ ಝರೀನ್‌, ಇಶಾಂತ್‌ ಶರ್ಮ, ಹರ್ಭಜನ್‌ ಸಿಂಗ್‌ ಟ್ವೀಟ್‌ ಮಾಡಿದವರಲ್ಲಿ ಸೇರಿದ್ದಾರೆ.

Advertisement

ಸಿಕಂದರಾಬಾದ್‌ನ ಪರೇಡ್‌ ಮೈದಾನದಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಕೇಂದ್ರ ಸಚಿವ ಜಿ. ಕಿಶನ್‌ ರೆಡ್ಡಿ ಅವರ ಜತೆ ಬ್ಯಾಡ್ಮಿಂಟನ್‌ ತಾರೆ ಪಿ.ವಿ. ಸಿಂಧು ಅವರು ಯೋಗಾಸನಗಳನ್ನು ಮಾಡಿದರು.

ಯೋಗವು ತುಂಬಾ ಶಾಂತಿಯುತ ಮತ್ತು ವಿಶ್ರಾಂತಿ ನೀಡುತ್ತದೆ. ಪ್ರತಿಯೊಬ್ಬರೂ ತಮ್ಮನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರಿಸಿಕೊಳ್ಳಲು ಯೋಗವನ್ನು ಅಭ್ಯಾಸ ಮಾಡಿ ಎಂದು ಹರ್ಭಜನ್‌ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಯೋಗವು ಆರೋಗ್ಯಕರ ದೇಹ ಮತ್ತು ಶಾಂತ ಮನಸ್ಸನ್ನು ಸಾಧಿಸಲು ಸಹಾಯ ಮಾಡುತ್ತದೆ. ಇದು ಸಂತೋಷದ ಜೀವನಕ್ಕೆ ಕಾರಣವಾಗುತ್ತದೆ. ಆರೋಗ್ಯಕರ ಮತ್ತು ಶಾಂತಿಯುತ ಜೀವನಕ್ಕಾಗಿ ಯೋಗವನ್ನು ಅಭ್ಯಾಸ ಮಾಡುವಂತೆ ಚೇತೇಶ್ವರ ಪೂಜಾರ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next