Advertisement

ಕ್ರೀಡಾ ಉತ್ಸವವಾಗಿ “ಅಟಲ್‌ ಟ್ರೋಫಿ’: ಶಾಸಕ ರಘುಪತಿ ಭಟ್‌

11:48 PM Dec 22, 2022 | Team Udayavani |

ಉಡುಪಿ: ಅಟಲ್‌ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ನೆಲೆಯಲ್ಲಿ ಅಟಲ್‌ ಟ್ರೋಫಿ, ಬೂತ್‌ಸಂಗಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಟಲ್‌ ಟ್ರೋಫಿಗೆ ಸಕಲ ತಯಾರಿ ಮಾಡಿಕೊಳ್ಳಲಾಗಿದ್ದು, ಇದು ಕ್ರೀಡಾ ಉತ್ಸವವಾಗಿ ಮೂಡಿಬರಲಿದೆ ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು.

Advertisement

ಅಟಲ್‌ ಬಿಹಾರಿ ವಾಜಪೇಯಿ ಅವರ 98ನೇ ಜನ್ಮದಿನದ ಅಂಗವಾಗಿ ಬಿಜೆಪಿ ಉಡುಪಿ ನಗರ ಮತ್ತು ಗ್ರಾಮಾಂತರ ವತಿಯಿಂದ ಹಮ್ಮಿಕೊಂಡಿರುವ “ಅಟಲ್‌ ಉತ್ಸವ’ದ ಪ್ರಯುಕ್ತ ಎಂಜಿಎಂ ಕಾಲೇಜು ಮೈದಾನದಲ್ಲಿ ಡಿ. 24ರಂದು ನಡೆಯಲಿರುವ ಹೊನಲು ಬೆಳಕಿನ ರಾಷ್ಟ್ರಮಟ್ಟದ ಮುಕ್ತ ಪ್ರೊ ಕಬಡ್ಡಿ ಪಂದ್ಯಾಟ ಹಾಗೂ ಡಿ. 25ರಂದು ನಡೆಯಲಿರುವ ಬೂತ್‌ ಸಂಗಮದ ಪೂರ್ವಭಾವಿಯಾಗಿ ಅಟಲ್‌ ಟ್ರೋಫಿಯನ್ನು ಗುರುವಾರ ಅನಾವರಣಗೊಳಿಸಿ, ಜನಪ್ರತಿನಿಧಿಗಳ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಉಡುಪಿ ವಿಧಾನಸಭೆ ಕ್ಷೇತ್ರದಲ್ಲಿ 1999ರಿಂದ ಅಟಲ್‌ ಉತ್ಸವವನ್ನು ವಿವಿಧ ಕ್ರೀಡೆಗಳ ಮೂಲಕ ಆಚರಿಸಲಾಗುತ್ತಿದೆ. ಈ ಬಾರಿಯ “ಅಟಲ್‌ ಟ್ರೋಫಿ’ ಪ್ರೊ ಕಬಡ್ಡಿಯಲ್ಲಿ ರಾಷ್ಟ್ರ ಮಟ್ಟದ 12 ತಂಡಗಳು ಭಾಗವಹಿಸಲಿದ್ದು, 25 ಸಾವಿರಕ್ಕೂ ಮಿಕ್ಕಿ ಕ್ರೀಡಾಸಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಜನಪ್ರತಿನಿಧಿಗಳು ತಮ್ಮ ವಾರ್ಡ್‌ನಲ್ಲಿರುವ ಕ್ರೀಡಾ ಸಂಘಟನೆಗಳನ್ನು ಆಹ್ವಾನಿಸಿ ಉತ್ಸವದೋಪಾದಿ ನಡೆಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಎಸ್‌. ಕಲ್ಮಾಡಿ, ನಗರಸಭೆ ಸ್ಥಾಯೀ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪ್ರೊ ಕಬಡ್ಡಿ ಸಂಚಾಲಕ, ನಗರಸಭೆ ಸದಸ್ಯ ಗಿರೀಶ್‌ ಎಂ. ಅಂಚನ್‌, ಯುವ ಸಂಗಮದ ಉಸ್ತುವಾರಿ ಉಮೇಶ್‌ ನಾಯಕ್‌, ಕಲ್ಯಾಣಪುರ, ತೆಂಕನಿಡಿ ಯೂರು, ಬಡಾನಿಡಿಯೂರು, ಅಂಬಲಪಾಡಿ ಗ್ರಾ.ಪಂ. ಅಧ್ಯಕ್ಷರಾದ ಕೃಷ್ಣ ದೇವಾಡಿಗ, ಗಾಯತ್ರಿ, ಪ್ರಭಾಕರ ತಿಂಗಳಾಯ, ರೋಹಿಣಿ ಉಪಸ್ಥಿತರಿದ್ದರು.

ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌ ಸ್ವಾಗತಿಸಿದರು. ಬೂತ್‌ ಸಂಗಮದ ಸಂಚಾಲಕ ಕೆ. ರಾಘವೇಂದ್ರ ಕಿಣಿ ನಿರೂಪಿಸಿ, ವಂದಿಸಿದರು.

Advertisement

ಬೂತ್‌ ಸಂಗಮ ಯಶಸ್ಸಿಗೆ ಗ್ರಾಮ ದೇವಸ್ಥಾನದ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಬೇಕು. ಪ್ರತೀ ಬೂತ್‌ನಿಂದ ಕನಿಷ್ಠ 113 ಮಂದಿ ಭಾಗವಹಿಸುವಂತೆ ಜನಪ್ರತಿನಿಧಿಗಳು ಉಸ್ತುವಾರಿ ವಹಿಸಿಕೊಳ್ಳಬೇಕು. 226 ಬೂತ್‌ಗಳ ಅಧ್ಯಕ್ಷರ ಮನೆಗಳಿಗೆ ತೆರಳಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಉಡುಪಿ ವಿಧಾನಸಭೆ ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿ ಸಭೆ ನಡೆಸಿ ಅಟಲ್‌ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ. 226 ಬೂತ್‌ ಅಧ್ಯಕ್ಷರಲ್ಲಿ ಐವರು ಅಧ್ಯಕ್ಷರನ್ನು ಎಲೆಕ್ಟ್ರಾನಿಕ್‌ ಡಿವೈಸ್‌ನ ಮೂಲಕ ಆರಿಸಿ ಅವರ ಮೂಲಕ ದೀಪ ಪ್ರಜ್ವಲಿಸಲಾಗುವುದು. ಪ್ರತಿಯೊಬ್ಬ ಕಾರ್ಯಕರ್ತರು ಬೂತ್‌ ಸಂಗಮವನ್ನು ಸವಾಲಾಗಿ ಸ್ವೀಕರಿಸಿ ಯಶಸ್ವಿಗೊಳಿಸಬೇಕೆಂದು ಶಾಸಕರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next